ಅಯ್ಯನ ಕೆರೆಯಲ್ಲಿ ಜಲ ಸಾಹಸೋತ್ಸವಕ್ಕೆ ಚಿಂತನೆ : ಸಚಿವ ಸಿ.ಟಿ. ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಫೆ.26- ಜಲ ಕ್ರೀಡೋತ್ಸವವು ಸಾಹಸ ಪ್ರವೃತ್ತಿ ಕ್ರೀಡೆಯಾಗುವುದರ ಜೊತೆಗೆ ಮನೋಲ್ಲಾಸ ನೀಡಿ ಹರ್ಷವನ್ನು ಉಂಟು ಮಾಡುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು. ನಗರದ ನಲ್ಲೂರು ಬಳಿಯ ಕೆರೆಯಲ್ಲಿ ಜಿಲ್ಲಾ ಉತ್ಸವದ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಜಲ ಸಾಹಸೋತ್ಸವ ಕ್ರೀಡೆಯನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು.

ಚಿಕ್ಕಮಗಳೂರು ಹಬ್ಬದ ವಿಶೇಷವಾಗಿ ಜಿಲ್ಲೆಯ ಜನತೆಗೆ ರಯಾಪ್ಟ್( ಸ್ಟಿಲ ವಾಟರ್), ಜೆಟ್ ಸ್ಕೀ, ಬಂಪರ್ ರೈಡ್, ವಾಟರ್ ರೋಲರ್, ಬನಾನ ರೈಡ್, ಸ್ಕೂಬಾ ಡೈವಿಂಗ್, ಸೇರಿದಂತೆ ಹಲವು ಮಾದರಿಯ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಇದು ನಮ್ಮ ನಮ್ಮೆಲ್ಲರ ಹಬ್ಬವಾಗಿದ್ದು ಎಲ್ಲರೂ ಹರ್ಷದಿಂದ ಪಾಲ್ಗೊಳ್ಳಿ ಎಂದರು.

ಜಿಲ್ಲೆಯಲ್ಲಿನ ಅಯ್ಯನ ಕೆರೆಯು ಸಾಹಸ ಕ್ರೀಡೆಗಳಿಗೆ ಉತ್ತಮ ವಿಶಾಲವಾದ ಪರಿಸರ ಹೊಂದಿದ ಸ್ಥಳವಾಗಿದ್ದು ಮುಂದಿನ ದಿನಗಳಲ್ಲಿ ಕೆರೆಯನ್ನು ಮತ್ತಷ್ಟು ಅಭಿವೃದ್ದಿ ಪಡಿಸಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಾಹಸ ಕ್ರೀಡೆಗಳನ್ನು ಆಯೋಜಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ, ಅಪರ ಜಿಲ್ಲಾಧಿಕಾರಿ, ಡಾ.ಕುಮಾರï, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸï.ಪೂವಿತಾ, ಜಿಲ್ಲಾ ಉತ್ಸವದ ಕ್ರೀಡಾ ಉಪಸಮಿತಿ ಅಧ್ಯಕ್ಷ ಸಿ.ನಂಜಯ್ಯ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಹೆಚï.ಪಿ. ಮಂಜುಳಾ ನಗರ ಸಭೈ ಮಾಜಿ ಅಧ್ಯಕ್ಷ ತಮ್ಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments