ಕೊರೋನಾ ಕಾಟ, ಈ ಬಾರಿ ಸಿಂಪಲ್ ದಸರಾ ಆಚರಣೆಗೆ ಸರ್ಕಾರ ತೀರ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.25- ಕೋವಿಡ್-19 ಹಿನ್ನೆಲೆ ರಾಜ್ಯದಲ್ಲಿ ಈ ಬಾರಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ.

ಈ ಬಾರಿಯ ದಸರಾವನ್ನು ವೈಭವಯುತವಾಗಿ ಆಚರಿಸದೆ ಸಾಂಪ್ರದಾಯಿಕವಾಗಿ ಹಾಗೂ ಸರಳವಾಗಿ ಆಚರಣೆ ಮಾಡಲಿದ್ದೇವೆ. ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಹಬ್ಬವನ್ನು ಸರಳವಾಗಿ ಆಚರಣೆ ಮಾಡುವ ಸಂಬಂಧ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಉನ್ನತ ಮಟ್ಟದ ಅಕಾರಿಗಳ ಸಭೆ ನಡೆಯಲಿದೆ. ಅಲ್ಲಿ ದಸರಾ ಹಬ್ಬ ಆಚರಣೆ ಸಂಬಂಧ ಸರ್ಕಾರದಿಂದ ಅಕೃತವಾಗಿ ಪ್ರಕಟಿಸಲಿದ್ದೇವೆ ಎಂದು ಹೇಳಿದರು.

ದಸರಾ ಹಬ್ಬ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನವಾಗಲಿದೆ. ಈವರೆಗೂ ಯಾರ ಹೆಸರನ್ನೂ ಕೂಡ ಪರಿಗಣನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸರಳ ಆಚರಣೆಯೆಂದರೆ ವೈಭವಯುತವಾಗಿ ಆಚರಿಸುವ ಬದಲು ಸಂಪ್ರದಾಯಂತೆ ಸರಳವಾಗಿ ಹಬ್ಬವನ್ನು ಆಚರಣೆ ಮಾಡುತ್ತೇವೆ. ಜಂಬೂ ಸವಾರಿ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಸಬೇಕೆ, ಬೇಡವೇ ಎಂಬುದು ಮುಖ್ಯಮಂತ್ರಿಗಳ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದರು.

ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನನ್ನ ವ್ಯಾಪ್ತಿಗೆ ಒಳಪಡುತ್ತವೆ. ಈ ಮೂರು ಇಲಾಖೆಗಳು ವೈಭವಯುತ ಆಚರಣೆಯ ಇಲಾಖೆಗಳಾಗಿವೆ. ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ಸಾರ್ವಜನಿಕ ರೂಪದಲ್ಲಿ ಚಟುವಟಿಕೆಗಳನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ. ಆದರೆ ಕ್ರೀಡಾ ಚಟುವಟಿಕೆಗಳಿಗೆ ವಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಿ ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನು ಎರಡುಮೂರು ತಿಂಗಳಲ್ಲಿ ಮತ್ತೆ ಹಳೇ ವೈಭವ ಪಡೆದುಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.

# ನನ್ನಿಂದಲೇ ನನಗೆ ಮೌಲ್ಯಮಾಪನ:
ಪಕ್ಷದಲ್ಲಿ ಸಚಿವರ ಆಂತರಿಕ ಮೌಲ್ಯಮಾಪನ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರವಿ ಅವರು, ಪ್ರತಿಯೊಬ್ಬರ ಆಂತರಿಕ ಮೌಲ್ಯಮಾಪನ ನಡೆಸುವುದು ಸರ್ಕಾರ ಮತ್ತು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ವೈಯಕ್ತಿಕವಾಗಿ ಹೇಳುವುದಾದರೆ ನನಗೆ ಪಕ್ಷದ ಚೌಕಟ್ಟಿನಲ್ಲಿ ಸಚಿವರ ಆಂತರಿಕ ಮೌಲ್ಯಮಾಪನ ನಡೆಸುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಕಳೆದ ಒಂದು ವರ್ಷದ ಅವಯಲ್ಲಿ ನಾನು ಇಲಾಖೆಯಲ್ಲಿ ತಂದಿರುವ ಕಾರ್ಯಕ್ರಮಗಳು, ಇಲಾಖೆಯ ಸುಧಾರಣೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ನನಗೆ ನಾನೇ ಆತ್ಮವಿಮರ್ಶೆ ಮಾಡಿಕೊಳ್ಳುತ್ತೇನೆ. ನನ್ನ ಇಲಾಖೆಯ ಸಾಧನೆಯನ್ನು ಜನತೆಯ ಮುಂದಿಡುತ್ತೇನೆ. ಅವರು ಕೊಡುವ ಅಂಕಗಳೇ ನನಗೆ ಶ್ರೀರಕ್ಷೆಯಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕಮಾರ್ ಅವರ ದೂರವಾಣಿಯನ್ನು ಕದ್ದಾಲಿಕೆ ಮಾಡುವಂತಹ ಪರಿಸ್ಥಿತಿ ನಮಗೆ ಬಂದಿಲ್ಲ ಎಂದು ತಿರುಗೇಟು ನೀಡಿದರು.  ಹಿಂದಿನ ಸರ್ಕಾರದ ಅವಯಲ್ಲಿ ನಾಡಿನ ಪ್ರಮುಖ ಮಠಾೀಶರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಇನ್ನೊಬ್ಬರ ದೂರವಾಣಿಗಳನ್ನು ಕದ್ದಾಲಿಸುವ ಪರಿಸ್ಥಿತಿ ನಮ್ಮ ಸರ್ಕಾರಕ್ಕೆ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಅಕಾರದಲ್ಲಿದ್ದಾಗ ತಾವು ಮಾಡಿದ್ದನ್ನೇ ಬಿಜೆಪಿಯವರು ಮಾಡಬಹುದೆಂಬ ಬ್ರಹ್ಮೆಯಲ್ಲಿದ್ದಾರೆ. ನಮಗೂ ಅವರಿಗೂ ಸಾಕಷ್ಟು ವ್ಯತ್ಯಾಸವಿದೆ. ನಾವು ಯಾರ ಫೋನ್ ಕದ್ದಾಲಿಕೆ ಮಾಡುವುದಿಲ್ಲ ಎಂದು ಪುನರುಚ್ಚರಿಸಿದರು.

ಸಂಪುಟ ವಿಸ್ತರಣೆ ಅಥವಾ ಪುನರ್‍ರಚನೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ವರಿಷ್ಠರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಸಂಪುಟಕ್ಕೆ ಯಾರನ್ನೂ ತೆಗೆದುಕೊಳ್ಳಬೇಕು, ಬಿಡಬೇಕು ಎಂಬುದು ಅವರಿಗೆ ಬಿಟ್ಟಿದ್ದು. ನಾನು ಈಗಲೂ ಪಕ್ಷದ ಸಾಮಾನ್ಯ ಕಾರ್ಯಕರ್ತ. ಪಕ್ಷ ವಹಿಸುವ ಎಲ್ಲಾ ಜವಾಬ್ದಾರಿಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ ಎಂದು ಹೇಳಿದರು.

ಮಂತ್ರಿಮಂಡಲ ವಿಸ್ತರಣೆಯಾದರೂ ಸರಿ ಇಲ್ಲವೇ ಪುನರ್‍ರಚನೆಯಾದರೂ ಸರಿ ಏನೇ ಜವಾಬ್ದಾರಿ ವಹಿಸಿದರೂ ನಾನು ಅದಕ್ಕೆ ಬದ್ದನಾಗಿದ್ದೇನೆ. ಕುರ್ಚಿ ಬಿಡುವುದು, ಇಲ್ಲವೇ ಹಿಡಿಯುವುದು ತ್ಯಾಗ ಬಲಿದಾನವಾಗುವುದಿಲ್ಲ. ತ್ಯಾಗ, ಬಲಿದಾನಕ್ಕೆ ದೊಡ್ಡ ಇತಿಹಾಸವಿದೆ.

ಸೈನಿಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಾರೆ. ಅಕಾರ ಯಾವಾಗ ಬೇಕಾದರೂ ಹೋಗಬಹುದು. ಮೊಮ್ಮಗನಿಗೆ ಸೀಟು ಬಿಟ್ಟುಕೊಟ್ಟ ಮಾಜಿ ಪ್ರಧಾನಿ ದೇವೇಗೌಡರು ಅದನ್ನು ತ್ಯಾಗ ಎಂದು ಹೇಳಿದರು. ವಾಸ್ತವವಾಗಿ ಇದು ಹೇಗೆ ತ್ಯಾಗವಾಗುತ್ತದೆ ಎಂದು ಸಿ.ಟಿ.ರವಿ ಪ್ರಶ್ನಿಸಿದರು.

Facebook Comments

Sri Raghav

Admin