‘ಸಿದ್ದರಾಮಯ್ಯನವರು ಕೋವಿಡ್ ವ್ಯಾಕ್ಸಿನ್ ಪಡೆದಿದ್ದು ಸುಳ್ಳಾ..?’

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಏ.9- ಸಿದ್ದರಾಮಯ್ಯ ಅವರ ಕಾಲದಲ್ಲಿ ಕೊಟ್ಟ ಆಡಳಿತ ಮತ್ತೆ ಇನ್ಯಾವತ್ತೂ ಬರಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ಹೇಳಿದರು. ರಾಜ್ಯ ಸರ್ಕಾರ ದಿವಾಳಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸುಳ್ಳು ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಸಿದ ರವಿ, ಪ್ರಪಂಚದಾದ್ಯಂತ ಕೊರೊನಾ ಸೋಂಕಿಗೆ ಈಡಾದಾಗ ಭಾರತ ಕೋವಿಡ್ ವ್ಯಾಕ್ಸಿನ್ ಕಂಡುಹಿಡಿದು ನೂರಾರು ದೇಶಗಳಿಗೆ ಕೊಟ್ಟಿದ್ದು ಸುಳ್ಳಾ,

ಸ್ವತಹ ಸಿದ್ದರಾಮಯ್ಯನವರೇ ಕೋವಿಡ್ ವ್ಯಾಕ್ಸಿನ್ ಪಡೆದಿದ್ದು ಸುಳ್ಳಾ, ಆರ್ಟಿಕಲ್-370 ರದ್ದು ಮಾಡಿರುವುದು, ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿರುವುದು, ಆಯುಷ್ಮಾನ್ ಭಾರತ ತಂದಿದ್ದು, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗೆ ಹಣ ಹಾಕಿದ್ದು, ಜನ್‍ಧನ್ ಯೋಜನೆ ಮೂಲಕ ಬಡವರ ಖಾತೆಗೆ ಹಣ ಹಾಕಿದ್ದು ಸುಳ್ಳಾ ಎಂದು ಪ್ರಶ್ನಿಸಿದರು.

ಅವರ ಕಾಲದಲ್ಲಿಯೇ ವೀರಶೈವ, ಲಿಂಗಾಯತರ ಒಡೆಯುವಂತಹ ಕೆಲಸ ಆಗಿದೆ. ಅಂತಹ ಕೆಟ್ಟ ರಾಜಕಾರಣ ನಮಗೆ ಬೇಡ. ಉತ್ತಮ ಆಡಳಿತ ನೀಡುವ ಬಗ್ಗೆ ಅವರು ಸಲಹೆ ನೀಡಲಿ. ಅದನ್ನು ಬಿಟ್ಟು ಸುಮ್ಮನೆ ಟೀಕಿಸುವುದು ಸರಿಯಲ್ಲ ಎಂದರು.

ಮೇ 2ರ ವರೆಗೆ ಸಮಯ ಕೊಡಿ: ಕೆಎಸ್‍ಆರ್‍ಟಿಸಿ ನೌಕರರು ರಾಜಕೀಯ ದಾಳವಾಗದೆ ಮೇ 2ರ ವರೆಗೆ ಸರ್ಕಾರಕ್ಕೆ ಅವಕಾಶ ನೀಡಿ. ಆಗಲೂ ನಿಮ್ಮ ಬೇಡಿಕೆ ಸರ್ಕಾರ ಈಡೇರಿಸದಿದ್ದರೆ ನಾವು ನಿಮ್ಮ ಜೊತೆ ಧ್ವನಿಗೂಡಿಸುವ ಕೆಲಸ ಮಾಡುತ್ತೇವೆ ಎಂದರು.

Facebook Comments