ನೇಣು ಕುಣಿಕೆಯಿಂದ ಪಾರಾಗಲು ಕ್ಯೂರೇಟಿವ್ ಅರ್ಜಿ ಸಲ್ಲಿಸಿದ ನಿರ್ಭಯಾ ‘ಹತ್ಯಾ’ಚಾರಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.9- ದೇಶವನ್ನೇ ಬೆಚ್ಚಿ ಬೀಳಿಸಿದ ಅರೆವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮೇಲಿನ ಪೈಶಾಚಿಕ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಯ ದಿನಗಣನೆ ಎದುರಿಸುತ್ತಿರುವ ಆಪಾಧಿತರಲ್ಲಿ ಒಬ್ಬನಾದ ವಿನಯ್‍ಕುಮಾರ್ ಶರ್ಮಾ ನೇಣು ಕುಣಿಕೆಯಿಂದ ಪಾರಾಗುವ ಕಟ್ಟಕಡೆಯ ಯತ್ನವಾಗಿ ಇಂದು ಸುಪ್ರೀಂಕೋರ್ಟ್‍ಗೆ ಕ್ಯೂರೇಟಿವ್ ಅಜ್ಜಿ ಸಲ್ಲಿಸಿದ್ದಾನೆ.

ವಿನಯ್ ಪರ ವಕೀಲರು ಇಂದು ಬೆಳಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠಕ್ಕೆ ಕ್ಯೂರೇಟಿವ್ (ಕಟ್ಟಕಡೆಯ ಪರಿಹಾರ) ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದ್ದು, ಶೀಘ್ರ ವಿಚಾರಣೆ ನಡೆಸಲಿದೆ.

ನಿರ್ಭಯ ಪ್ರಕರಣದ ಆಪಾಧಿತರಾದ ಮುಕೇಶ್‍ಸಿಂಗ್ (32), ಪವನ್‍ಗುಪ್ತ (25), ವಿನಯ್‍ಕುಮಾರ್ ಶಮಾ (26) ಹಾಗೂ ಅಕ್ಷಯ್‍ಕುಮಾರ್ ಸಿಂಗ್ (31) ಇವರನ್ನು ಜ.22ರಂದು ಬೆಳಗ್ಗೆ 7 ಗಂಟೆಗೆ ನೇಣಿಗೇರಿಸುವಂತೆ ದೆಹಲಿಯ ಪಟಿಯಾಲ ಕೋರ್ಟ್ ಈಗಾಗಲೇ ಡೆತ್‍ವಾರೆಂಟ್ ಹೊರಡಿಸಿದೆ.

Facebook Comments