ಮಾಲೀಕರ ಮನೆಯಲ್ಲೆ ಕಳ್ಳತನ : ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.24- ಕೆಲಸ ನೀಡಿದ್ದ ಮಾಲೀಕರ ಮನೆಯಲ್ಲೆ ಆಭರಣ ಕಳ್ಳತನ ಮಾಡಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಕೆ.ಪಿ.ಅಗ್ರಹಾರ ಠಾಣೆ ಪೆÇಲೀಸರು ಬಂಧಿಸಿ 1.40 ಲಕ್ಷ ರೂ. ಬೆಲೆಯ 45 ಗ್ರಾಂ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೆ.ಆರ್.ಪುರ, ಅಮರಜ್ಯೋತಿ ನಗರದ ಅನು (45) ಮತ್ತು ಕಲ್ಬುರ್ಗಿ ಜಿಲ್ಲೆ ಚನ್ನವೀರ ನಗರದ ರೇಣುಕಾನಂದ (31) ಬಂಧಿತರು.

ಹೊಟೇಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ ಅನು ಹೊಟೇಲ್ ಮಾಲೀಕರ ಮನೆಯಲ್ಲಿದ್ದ 45 ಗ್ರಾಂ ಆಭರಣ ಕಳವು ಮಾಡಿದ್ದಳು. ಈ ಬಗ್ಗೆ ಕೆ.ಪಿ. ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‍ಸ್ಪೆಕ್ಟರ್ ಸದಾನಂದ ಮತ್ತು ಸಿಬ್ಬಂದಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ 1.40 ಲಕ್ಷ ರೂ. ಬೆಲೆ ಬಾಳುವ 40 ಗ್ರಾಂ ತೂಕದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments