“ನನ್ನ ಸರ್ಕಾರದ ಮೇಲೆ ಅಸಮಾಧಾನವಿದ್ದರೆ ನನ್ನ ತಲೆ ಕತ್ತರಿಸಿ” : ದೀದಿ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕತ್ತಾ/ಭುವನೇಶ್ವರ, ಮೇ 24-ನಿಮಗೆ ಸರ್ಕಾರ ಮತ್ತು ನನ್ನ ಮೇಲೆ ಅಸಮಾಧಾನವಿದ್ದರೆ ನನ್ನ ತಲೆ ಕತ್ತರಿಸಿ…ಇದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಪ್ರತಿಭಟನಾಕಾರರ ಮೇಲೆ ವ್ಯಕ್ತಪಡಿಸಿದ ಅಸಹನೆಯ ಮಾತುಗಳು.

ವಿನಾಶಕಾರಿ ಅಂಫನ್ ಚಂಡಮಾರುತ ಅಪ್ಪಳಿಸಿ ಸಾವು-ನೋವು ಸಂಭವಿಸಿದ್ದು, ವಿದ್ಯುತ್, ನೀರು ಸೇರಿದಂತೆ ಇತರ ಸೇವೆಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದ ವಿರುದ್ದ ರಾಜಧಾನಿ ಕೊಲ್ಕತಾದಲ್ಲಿ ಪ್ರತಿಭಟನೆ ಮುಂದುವರಿಸಿದ ಬಂಗಾ¼ ಜನರ ಬಗ್ಗೆ ದೀದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೂಪರ್‍ಸೈಕ್ಲೋನ್‍ನಿಂದ ನಾವು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೇವೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕು. ಸರ್ಕಾರ ಮತ್ತು ರಕ್ಷಣಾ ಕಾರ್ಯಕರ್ತರು ಜನರ ಹಿತಾಸಕ್ತಿಗೆ ಶ್ರಮಿಸುತ್ತಿದೆ. ಇಂಥ ಸಂದರ್ಭದಲ್ಲಿ ಧರಣಿ ಮತ್ತು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಅವರು ಧರಣಿ ನಿರತರಿಗೆ ಸಲಹೆ ಮಾಡಿದರು.

ಇಷ್ಟಾದರೂ ನಿಮಗೆ ಸರ್ಕಾರ ಮತ್ತು ನನ್ನ ಮೇಲೆ ಕೋಪ ಇದ್ದರೆ ನನ್ನ ತಲೆ ಕತ್ತರಿಸಿ ಎಂದು ದೀದಿ ಸಿಡುಕಿನಿಂದ ನುಡಿದರು.
100ಕ್ಕೂ ಹೆಚ್ಚು ಸಾವು: ಬಂಗಾಳಕೊಲ್ಲಿ ಮೇಲೆ ಅಪ್ಪಳಿಸಿದ ಅಂಫನ್ ಚಂಡಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಕರಾವಳಿ ಪ್ರದೇಶಗಳು ತತ್ತರಿಸಿದ್ದು, ಬಲಿಯಾದವರ ಸಂಖ್ಯೆ 100 ದಾಟಿದೆ.

ಸೂಪರ್ ಸೈಕ್ಲೋನ್ ರೌದ್ರಾವತಾರದಿಂದ ಲಕ್ಷಾಂತರ ಜನರ ಸಂತ್ರಸ್ತರಾಗಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ಎರಡೂ ರಾಜ್ಯಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಿಲ್ಲರ್ ಕೊರೊನಾ ದಾಳಿಯಿಂದ ಕಂಗೆಟ್ಟಿರುವ ಎರಡೂ ರಾಜ್ಯಗಳಲ್ಲಿ ಅಂಪನ್ ಚಂಡಮಾರುತ ಆರ್ಭಟ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಂಗಾಳಕೊಲ್ಲಿ ತೀರ ಪ್ರದೇಶಗಳ ಮೇಲೆ ಗಂಟೆಗೆ 190 ಕಿ.ಮೀ. ವೇಗದಲ್ಲಿ ಬೀಸಿದ ಪ್ರಬಲ ಬಿರುಗಾಳಿಯ ರೌದ್ರಾವತಾರಕ್ಕೆ ಪಶ್ಚಿಮ ಬಂಗಾಳದಲ್ಲಿ 90ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಒಡಿಶಾದಲ್ಲಿ 10ಕ್ಕೂ ಅದಿಕ ಸಾವು ಸಂಭವಿಸಿದೆ. ಎರಡೂ ರಾಜ್ಯಗಳಲ್ಲಿ ಒಂದು ಕೋಟಿಗೂ ಅಕ ಮಂದಿ ಸಂತ್ರಸ್ತರಾಗಿದ್ದಾರೆ. ಒಂದೂವರೆ ಲಕ್ಷ ಕೋಟಿ ರೂ.ಗಳಿಗೆ ಅಕ ನಷ್ಟ ಸಂಭವಿಸಿದೆ.

ಸೂಪರ್‍ಸೈಕ್ಲೋ ಆರ್ಭಟಕ್ಕೆ ಸಹಸ್ರಾರು ಮನೆಗಳಿಗೆ ಹಾನಿಯಾಗಿದ್ದು, ಅನೇಕ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಎರಡೂ ರಾಜ್ಯಗಳಲ್ಲೂ 100ಕ್ಕೂ ಹೆಚ್ಚು ಮಂದಿಯನ್ನು ಅಂಫನ್ ಬಲಿ ತೆಗೆದುಕೊಂಡಿದ್ದು, ಅನೇಕರು ಗಾಯಗೊಂಡಿದ್ದಾರೆ. ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಶತಮಾನದಲ್ಲೇ ಅತ್ಯಂತ ಭೀಕರ ಚಂಡಮಾರುತ ಇದಾಗಿದೆ.ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಏರುಗತಿಯಲ್ಲಿ ಮುಂದುವರಿದಿರುವಾಗಲೇ ಬಂದೆರಗಿರುವ ಪ್ರಕೃತಿ ವಿಕೋಪದಿಂದ ಜನ ಮತ್ತಷ್ಟು ಕಂಗಲಾಗಿದ್ದಾರೆ.

ಎರಡೂ ರಾಜ್ಯಗಳಲ್ಲೂ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಕೋಲಿಸಿದ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದಿಂದ 1,500 ಕೋಟಿ ರೂ.ಗಳ ಪರಿಹಾರ ಘೋಷಿಸಿದ್ದಾರೆ.  ಪುನರ್‍ನಿರ್ಮಾಣ ಕಾರ್ಯಕ್ಕಾಗಿ ಒಡಿಶಾಗೆ ಇಂದು ಕೇಂದ್ರ ಸರ್ಕಾರ 500 ಕೋಟಿ ರೂ.ಗಳ ಮಧ್ಯಂತರ ಪರಿಹಾರದ ಮುಂಗಡ ಹಣ ನೀಡಿದೆ.

Facebook Comments

Sri Raghav

Admin