ಬಿಗ್ ನ್ಯೂಸ್ : ಸೋನಿಯಾ ರಾಜೀನಾಮೆ ಮತ್ತು ರಾಹುಲ್ ಯಡವಟ್ಟಿನಿಂದ ಅಲ್ಲಾಡುತ್ತಿದೆ ಕಾಂಗ್ರೆಸ್ ಬುಡ….!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.24- ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪಕ್ಷದ ಸಾರಥ್ಯವನ್ನು ತ್ಯಜಿಸಿದ ಬೆನ್ನಲ್ಲೇ ಪಕ್ಷದಲ್ಲಿ ಹಿರಿಯ ನಾಯಕರ ಬಗ್ಗೆ ರಾಹುಲ್‍ಗಾಂ ನೀಡಿದ ಹೇಳಿಕೆ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.

ನಾಯಕತ್ವ ಬದಲಾವಣೆ ಹಾಗೂ ಗಾಂ ಕುಟುಂಬೇತರರಿಗೆ ನಾಯಕತ್ವ ನೀಡಬೇಕೆಂದು ಕಾಂಗ್ರೆಸ್‍ನ 23 ಹಿರಿಯ ಧುರೀಣರು ಬರೆದಿರುವ ಪತ್ರ ಕುರಿತು ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ರಾಹುಲ್‍ಗಾಂಧಿ ನೀಡಿದ ಹೇಳಿಕೆ ಹಿರಿಯ ಕಾಂಗ್ರೆಸಿಗರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿರುವುದರ ಜತೆಗೆ 130 ವರ್ಷಗಳ ಇತಿಹಾಸದ ಕಾಂಗ್ರೆಸ್‍ನಲ್ಲಿ ದೊಡ್ಡ ಬಂಡಾಯವನ್ನೇ ಸೃಷ್ಟಿ ಮಾಡಿದೆ.

ರಾಹುಲ್ ಅವರ ಹೇಳಿಕೆಗೆ ನೂರಾರು ಕಾಂಗ್ರೆಸ್ ನಾಯಕರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಶಶಿ ತರೂರ್, ಆನಂದ್ ಶರ್ಮ, ಮನೀಶ್ ತಿವಾರಿ, ವಿವೇಕ್ ತಂಖಾ, ಮುಕುಲ್ ವಾಸ್ನಿಕ್, ಜತೀನ್ ಪ್ರಸಾದ್, ಭೂಪಿಂದರ್ ಸಿಂಗ್ ಹೂಡಾ, ರಾಜೀಂದರ್ ಕೌರ್ ಭಟ್ಟಲ್, ಡಾ. ಎಂ. ವೀರಪ್ಪ ಮೊಯ್ಲಿ, ಪೃಥ್ವಿರಾಜ್ ಚವಾಣ್, ಪಿ.ಜಿ. ಕುರಿಯನ್, ಅಜಯ್ ಸಿಂಗ್, ರೇಣುಕಾ ಚೌಧರಿ, ಮಿಲಿಂದ್ ದೌದರಿ, ರಾಜ್ ಬಬ್ಬರ್, ಅರವಿಂದ್ ಸಿಂಗ್, ಕೌಲ್ ಸಿಂಗ್ ಠಾಕೂರ್, ಅಖಿಲೇಶ್ ಪ್ರತಾಪ್ ಸಿಂಗ್ ಕುಲದೀಪ್ ಶರ್ಮ, ಯೋಗಾನಂದ ಶಾಸ್ತ್ರಿ, ಹಾಗೂ ಸಂದೀಪ್ ದೀಕ್ಷಿತ್ ಅವರು ಈ ಪತ್ರಕ್ಕೆ ಸಹಿ ಮಾಡಿ ನಾಯಕತ್ವ ಬದಲಾವಣೆಗೆ ಮನವಿ ಮಾಡಿದ್ದರು.

ಈ ವಿಷಯವನ್ನು ಕಾರ್ಯಕಾರಿಣಿಯಲ್ಲಿ ಪ್ರಸ್ತಾಪಿಸಿದ ರಾಹುಲ್‍ಗಾಂ ಅವರು, ಈ ಸಮಯದಲ್ಲಿ ಪತ್ರ ಬರೆಯಬೇಕಿತ್ತೆ ಮತ್ತು ಈ ಪತ್ರ ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಂತಿದೆ ಎಂದು ಹೇಳಿದ ಮಾತು ಹಿರಿಯ ಕಾಂಗ್ರೆಸಿಗರನ್ನು ಸಹಜವಾಗಿಯೇ ಕೆರಳಿಸಿದೆ.

ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಗುಲಾಂನಬಿ ಆಜಾದ್ ಅವರು ಸಭೆಯಲ್ಲೇ ವಿರೋಧ ವ್ಯಕ್ತಪಡಿಸಿ, ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ನಾವು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ. ಒಪ್ಪಂದ ಸಾಬೀತಾದರೆ ರಾಜೀನಾಮೆ ನೀಡಲು ಸಿದ್ಧರಿದ್ದೇವೆ ಎಂದು ಗರಂ ಆಗಿದ್ದಾರೆ.

ಮತ್ತೊಬ್ಬ ಹಿರಿಯ ಧುರೀಣ ಕಪೀಲ್‍ಸಿಬಾಲ್ ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿ ರಾಹುಲ್ ಅವರ ಹೇಳಿಕೆಯಿಂದ ತುಂಬಾ ಬೇಸರವಾಗಿದೆ. ನನ್ನ 30 ವರ್ಷಗಳ ಕಾಂಗ್ರೆಸ್ ನಿಷ್ಠೆಯಲ್ಲಿ ನಾನು ಬಿಜೆಪಿ ಪರ ಹೇಳಿಕೆ ನೀಡಿದವನಲ್ಲ. ನಾವು ಕಾಂಗ್ರೆಸಿಗರು. ಬಿಜೆಪಿಗೆ ಹೋಗುವವರಲ್ಲ ಎಂದು ಹೇಳಿದ್ದಾರೆ.

 

ಪತ್ರ ಬಹಿರಂಗಗೊಂಡಿದ್ದಕ್ಕೆ ಗುಲಾಂ ನಬಿ ಆಜಾದ್ ಮತ್ತು ಭಿನ್ನಮತೀಯ ನಾಯಕರ ವಿರುದ್ಧ ಪ್ರಿಯಾಂಕ ಗಾಂ ವಾಧ್ರಾ ಕೂಡ ಗರಂ ಆಗಿದ್ದು, ಈ ಕ್ರಮವನ್ನು ಖಂಡಿಸಿದ್ದಾರೆ. ಎಐಸಿಸಿಯಲ್ಲಿ ಆಂತರಿಕ ಭಿನ್ನಮತ ಮತ್ತಷ್ಟು ಸೋಟಗೊಂಡಿದ್ದು, ಬಂಡಾಯದ ಬಿರುಗಾಳಿ ಕಾಂಗ್ರೆಸ್ ಪಕ್ಷದ ಬುಡವನ್ನೇ ಅಲುಗಾಡುವಂತೆ ಮಾಡಿದೆ.

ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳ ಬಗ್ಗೆ ಭಾರೀ ಕುತೂಹಲ ಕೆರಳಿಸಿದ್ದು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರು ಚಿಂತಾಕ್ರಾಂತರಾಗಿದ್ದಾರೆ.  ಕಾಂಗ್ರೆಸ್‍ನ ಕ್ರಿಯಾಶೀಲ ನಾಯಕ ರಾಹುಲ್‍ಗಾಂ ಅವರೇ ಮತ್ತೆ ಪಕ್ಷದ ಸಾರಥ್ಯ ವಹಿಸಬೇಕೆಂದು ಒಂದು ಬಣ ಬಿಗಿ ಪಟ್ಟು ಹಿಡಿರುವ ಬೆನ್ನಲ್ಲೇ ಅವರು ಈ ಅತ್ಯುನ್ನತ ಹುದ್ದೆ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ.

ಪಕ್ಷದ ತಾರಾ ಆಕರ್ಷಣೆಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಕೂಡ ಕಾಂಗ್ರೆಸ್ ಅಧ್ಯಕ್ಷೆಯಾಗಬೇಕೆಂಬ ಕೆಲವು ಮುಖಂಡರ ಸಲಹೆಯನ್ನು ಸೌಜನ್ಯವಾಗಿಯೇ ತಿರಸ್ಕರಿಸಿದ್ದಾರೆ. ಎಐಸಿಸಿ ಅಧಿನಾಯಕಿ ಸ್ಥಾನ ತ್ಯಜಿಸಲು ಸೋನಿಯಾ ನಿನ್ನೆಯೇ ಒಲವು ತೋರಿದ್ದು, ಪಕ್ಷದ ಸಭೆಯಲ್ಲಿ ಇಂದು ತಮ್ಮ ರಾಜೀನಾಮೆಯನ್ನು ಅಕೃತವಾಗಿ ಘೋಷಿಸಿದರು.

ಗಾಂಧಿ ಕುಟುಂಬದ ನಾಯಕತ್ವದ ವಿರುದ್ಧ ಕಾಂಗ್ರೆಸ್ ವಲಯದಲ್ಲೇ ವಿರೋಧ ವ್ಯಕ್ತವಾಗಿರುವುದರಿಂದ ಪಕ್ಷದಲ್ಲಿ ಆಂತರಿಕ ಭಿನ್ನಮತದ ಬಿರುಗಾಳಿ ಎದ್ದಿದ್ದು, ರಾಜಕೀಯ ಚಟುವಟಿಕೆಗಳಿಗೆ ಎಡೆ ಮಾಡಿಕೊಟ್ಟಿದೆ.  ಪಕ್ಷದ ಹಿರಿಯ ಧುರೀಣರೇ ಗಾಂ ಕುಟುಂಬದ ನಾಯಕತ್ವ ಕುರಿತು ಪ್ರಶ್ನೆ ಮಾಡಿರುವುದು ಪಕ್ಷದ ಅನಾಯಕಿ ಸೋನಿಯಾ ಗಾಂ, ಅಸಮಾಧಾನಕ್ಕೆ ಕಾರಣವಾಗಿದ್ದು, ತಾವು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಹೊಸ ನಾಯಕನ ಆಯ್ಕೆಗೆ ಅನುವು ಮಾಡಿಕೊಡುವುದಾಗಿ ಸೋನಿಯಾ ಘೋಷಿಸಿದರು.

ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಪಕ್ಷದ ಹಿರಿಯ ಮುಖಂಡರು ತಮಗೆ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸೋನಿಯಾ ಗಾಂಧಿ, ತಾವು ಅಧ್ಯಕ್ಷರಾಗಿ ಮುಂದುವರಿಯಲು ಇಚ್ಚಿಸುವುದಿಲ್ಲ. ಪಕ್ಷದ ನಾಯಕರು ಒಟ್ಟಾಗಿ ಸೇರಿ ಹೊಸ ಮುಖಂಡನನ್ನು ಆಯ್ಕೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ನಿನ್ನೆ ಮಧ್ಯರಾತ್ರಿ ನಂತರದ ಬೆಳವಣಿಗೆಯಲ್ಲಿ ರಾಹುಲ್ ಗಾಂ ಮತ್ತೆ ಎಐಸಿಸಿ ಅಧ್ಯಕ್ಷರಾಗಲು ನಿರಾಕರಿಸಿದ್ದಾರೆ. ಮತ್ತೊಂದೆಡೆ ವಿಶೇಷ ವರ್ಚಸ್ಸು ಹೊಂದಿರುವ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಸಾರಥ್ಯ ವಹಿಸಿಕೊಳ್ಳಬೇಕೆಂಬುದು ಇನ್ನೊಂದು ಬಣದ ಆಗ್ರಹವಾಗಿದೆ. ಆದರೆ ಇದಕ್ಕೆ ಪ್ರಿಯಾಂಕಾ ಸಮ್ಮತಿ ನೀಡಿಲ್ಲ.

ಗಾಂ ಕುಟುಂಬವನ್ನು ಹೊರತುಪಡಿಸಿ ಬೇರೆ ಯಾರಾದರೂ ಧುರೀಣರು ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬುದು ರಾಹುಲ್ ಮತ್ತು ಪ್ರಿಯಾಂಕಾ ಅವರ ಇಂಗಿತವಾಗಿದೆ.  ಈ ಎಲ್ಲ ವಿದ್ಯಮಾನಗಳ ಬೆನ್ನಲ್ಲೇ ಇಂದು ನಡೆಯುತ್ತಿರುವ ಸಿಡಬ್ಲ್ಯುಸಿ ಸಭೆಯಲ್ಲಿ ನಾಯಕತ್ವ ಬದಲಾವಣೆ ಮತ್ತು ಪಕ್ಷದ ಪುನರ್‍ಸಂಘಟನೆ ಕುರಿತು ಯಾವ ನಿರ್ಧಾರ ಕೈಗೊಳ್ಳಬಹುದೆಂಬ ಬಗ್ಗೆ ಭಾರೀ ಆಸಕ್ತಿ ಕೆರಳಿಸಿದೆ.

ಸೋನಿಯಾ ಅಧ್ಯಕ್ಷತೆಯಲ್ಲಿ ಪ್ರಗತಿಯಲ್ಲಿರುವ ಈ ಸಭೆಯಲ್ಲಿ ಸಿಡಬ್ಲ್ಯುಸಿ ಸದಸ್ಯರು, ಪಕ್ಷದ ಧುರೀಣರು, ಹಾಲಿ ಸಂಸದರು ಭಾಗವಹಿಸಿದ್ದು, ಗಹನ ಸಮಾಲೋಚನೆ ಮುಂದುವರಿದಿದೆ.

Facebook Comments

Sri Raghav

Admin