ವಿಧಾನಸೌಧದೆದುರು ‘ಚಿಯರ್ ಫಾರ್ ಇಂಡಿಯಾ’ ಸೈಕಲ್ ರ‍್ಯಾಲಿಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ‘ಚಿಯರ್ ಫಾರ್ ಇಂಡಿಯಾ’ ಧ್ಯೇಯ ವಾಕ್ಯದಡಿ ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ ಸೈಕಲ್ ರ‍್ಯಾಲಿಗೆ ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಚಾಲನೆ ನೀಡಲಾಯಿತು.ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿರುವ ದೇಶದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಸೈಕಲ್ ರ್ಯಾಲಿ ಇದಾಗಿತ್ತು.

ಈ ವೇಳೆ ಸೈಕಲ್ ಏರಿ ಜಾಥಾ ಹೋಗಿ ಬಂದರು. ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದ ಗೌಡ, ಲೋಕಸಭಾ ಸದಸ್ಯರಾದ ಪಿ ಸಿ ಮೋಹನ್, ತೇಜಸ್ವಿ ಸೂರ್ಯ ಮೊದಲಾದವರು ಸಾಥ್ ನೀಡಿದರು.ಸೈಕಲ್ ರ‍್ಯಾಲಿಯಲ್ಲಿ 300ಕ್ಕೂ ಅಧಿಕ ಯುವಕ, ಯುವತಿಯರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಸಿಎಂ, ಯುವ ಜನರು ರಾಜ್ಯದ ಭವಿಷ್ಯ. ಇಂದು ದೇಶದಲ್ಲಿ 56 ಸಾವಿರ ಜನರು ಸೈಕ್ಲಿಂಗ್‌ ಮಾಡುತ್ತಿದ್ದಾರೆ. ಯುವ ಜನರಲ್ಲಿ ಎನರ್ಜಿ ಇರುತ್ತದೆ, ಆದರೆ ಶಿಸ್ತು ‌ಇರಬೇಕು. ಹೀಗಾಗಿ, ಸೈಕಲ್ ರ‍್ಯಾಲಿ ಆಯೋಜನೆ ಮಾಡಿರುವುದು ಒಳ್ಳೆಯ ವಿಷಯ ಎಂದು ಹೇಳಿದರು.

ಪ್ರತಿ ವಿಷಯ, ಅಂಶಕ್ಕೂ ಸೂಕ್ಷ್ಮವಾಗಿ ಸ್ಪಂದಿಸುವ ಪ್ರಧಾನ ಮಂತ್ರಿ ಮೋದಿ ಭಾರತ ಮತ್ತು ಭಾರತೀಯತೆಗೆ ಸದಾ ತುಡಿಯುತ್ತಾರೆ, ಪ್ರತಿ ಹೆಜ್ಜೆಗೂ ಯುವ ಜನತೆಗೆ ಸ್ಪೂರ್ತಿ ತುಂಬುತ್ತಿದ್ದಾರೆ ಎಂದು ಹೇಳಿದರು.

ಸ್ವಚ್ಛ ಭಾರತದಿಂದ ಹಿಡಿದು ಪ್ರತಿಯೊಂದು ಕಾರ್ಯಕ್ರಮದಲ್ಲಿ ಮೋದಿಯವರ ಸೂಕ್ಷ್ಮ ಸಂವೇದನೆ ಎದ್ದು ಕಾಣುತ್ತದೆ. ಖೇಲೋ ಇಂಡಿಯಾ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಿದರೆ, ಜೀತೋ ಇಂಡಿಯಾ ಮೂಲಕ ಕ್ರೀಡಾಪಟುಗಳಿಗೆ ಹುರಿದುಂಬಿಸುತ್ತಿದ್ದಾರೆ. ಅದರ ಭಾಗವಾಗಿ ದೇಶಾದ್ಯಂತ ನಡೆಯುತ್ತಿರುವ ಸೈಕಲ್ ರ್ಯಾಲಿಯಲ್ಲಿ 56 ಸಾವಿರ ಮಂದಿ ಯುವಜನರು ಪಾಲ್ಗೊಳ್ಳುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಮನುಷ್ಯ ಕೆಲವನ್ನು ಬಹಳ ಸುಲಭವಾಗಿ ರೂಢಿಸಿಕೊಳ್ಳುತ್ತಾನೆ, ಅದರಲ್ಲಿ ಸೈಕ್ಲಿಂಗ್ ಕೂಡ ಒಂದು. ಸೈಕಲ್​ ಚಲಾಯಿಸುವುದರಿಂದ ನಮ್ಮ ದೇಹ ಆರೋಗ್ಯವಾಗಿರುತ್ತದೆ. ಪ್ರತಿಯೊಬ್ಬರಿಗೂ ಸೈಕಲ್ ಬಗ್ಗೆ ಒಂದು ರೀತಿಯ ಅಟ್ಯಾಚ್​​ಮೆಂಟ್​ ಇರುತ್ತದೆ ಎಂದರು.

ನಾನು ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಯುವ ಸಮೂಹ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ಉಂಟುಮಾಡಿದೆ ಎಂದರು. ನಾನು ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಯುವ ಸಮೂಹ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ಉಂಟುಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Facebook Comments

Sri Raghav

Admin