ಅಂಫನ್‍ ಆರ್ಭಟಕ್ಕೆ ಒಡಿಶಾ, ಪಶ್ಚಿಮ ಬಂಗಾಳ ಅಲ್ಲೋಲ-ಕಲ್ಲೋಲ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಭುವನೇಶ್ವರ, ಮೇ 21 ; ಬಂಗಾಳಕೊಲ್ಲಿ ಮೇಲೆ ಅಪ್ಪಳಿಸಿದ ಅಂಫನ್‍ಚಂಡಮಾರುತದಿಂದಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳು ಅಲ್ಲೋಲಕಲ್ಲೋಲವಾಗಿದ್ದು. ಸಾವು-ನೋವು ಮತ್ತು ವ್ಯಾಪಕ ಹಾನಿ ಸಂಭವಿಸಿದೆ.

ಸೂಪರ್ ಸೈಕ್ಲೋನ್‍ರೌದ್ರಾವತಾರದಿಂದ ಲಕ್ಷಾಂತರಜನರ ಸಂತ್ರಸ್ತರಾಗಿದ್ದು, ಎರಡೂ ರಾಜ್ಯಗಳಲ್ಲಿ ಜನಜೀವನ ಸಂಪೂರ್ಣಅಸ್ತವ್ಯಸ್ತವಾಗಿದೆ.ಬಂಗಾಳಕೊಲ್ಲಿ ತೀರ ಪ್ರದೇಶಗಳ ಮೇಲೆ ಗಂಟೆಗೆ 190 ಕಿ.ಮೀ. ವೇಗದಲ್ಲಿ ಬೀಸಿರ ಪ್ರಬಲ ಬಿರುಗಾಳಿಯಿಂದ ನೂರಾರು ಮನೆಗಳಿಗೆ ಹಾನಿಯಾಗಿದ್ದು, ಅನೇಕ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಎರಡೂ ರಾಜ್ಯಗಳಲ್ಲೂ 20ಕ್ಕೂ ಹೆಚ್ಚು ಮಂದಿಯನ್ನುಅಂಫನ್ ಬಳಿ ತೆಗೆದುಕೊಂಡಿದ್ದು, ಅನೇಕರುಗಾಯಗೊಂಡಿದ್ದಾರೆ. ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಿಲ್ಲರ್‍ಕೊರೊನಾಅಟ್ಟಹಾಸಏರುಗತಿಯಲ್ಲಿ ಮುಂದುವರಿದಿರುವಾಗಲೇ ಬಂದೆರಗಿರುವ ಪ್ರಕೃತಿ ವಿಕೋಪದಿಂದಜನ ಮತ್ತಷ್ಟುಕಂಗಲಾಗಿದ್ದಾರೆ.

ಉಭಯ ರಾಜ್ಯಗಳಲ್ಲಿ ಭಾರೀ ಬಿರುಗಾಳಿಯಿಂದ ಕೂಡಿದಧಾರಾಕಾರ ಮಳೆಯಿಂದ ಕರಾವಳಿ ತೀರದ ನಗರಗಳು ಮತ್ತುಇತರ ಪಟ್ಟಣಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ತಗ್ಗು ಪ್ರದೇಶಗಳಿಂದ ಲಕ್ಷಾಂತರಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿ ತಾತ್ಕಾಲಿಕಆಶ್ರಯಕಲ್ಪಿಸಲಾಗಿದೆ.

ಚಂಡಮಾರುತದಆರ್ಭಟಕ್ಕೆ ಸಾವು ನೋವಿನೊಂದಿಗೆ ಅಪಾರ ಪ್ರಮಾಣದಆಸ್ತಿ-ಪಾಸ್ತಿ ನಷ್ಟವಾಗಿದೆ. ಎರಡೂ ರಾಜ್ಯಗಳಲ್ಲಿ ನೂರಾರು ಮನೆಗಳು ಕುಸಿದಿದ್ದು, ಅನೇಕ ಕಟ್ಟಡಗಳಿಗೆ ಹಾವಿಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಸುಮಾರು ಏಳು ಲಕ್ಷ ಮತ್ತುಒಡಿಶಾದಲ್ಲಿಎರಡು ಲಕ್ಷಜನರು ಸೇರಿದಂತೆಒಂಭತ್ತು ಲಕ್ಷ ಸಂತ್ರಸ್ತರನ್ನುರಕ್ಷಿಸಲಾಗಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತಾ, ಹೂಗ್ಲಿ, ಹೌರಾ, ನಾರ್ತ್ 24 ಪರಗಣ ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಮತ್ತು ಸಾವುನೋವು ವರದಿಯಾಗಿವೆ. ಈ ನಗರಗಳ ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಧಾರಾಕಾರ ಮಳೆಯಿಂದಾಗಿ ಕೊಲ್ಕತಾದಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಅನೇಕ ಸ್ಥಳಗಳಿಗೆ ನೀರು ನುಗ್ಗಿದ್ದು, ಜಲಾವೃತವಾಗಿವೆ. ಅಂಫನ್‍ಚಂಡಮಾರುತ ನಿನ್ನೆ ಮಧ್ಯಾಹ್ನ 2.30ಕ್ಕೆ ಪಶ್ಚಿಮ ಬಂಗಾಳದ ದಿಫಾ ಮತ್ತು ಬಾಂಗ್ಲಾದೇಶದ ಹಟಿಯಾ ದ್ವೀಪಗಳ ನಡುವೆ ಅಪ್ಪಳಿಸಿತು.

ಇನ್ನುಎರಡು ದಿನ ಈ ರಾಜ್ಯಗಳಲ್ಲಿ ಮಳೆಯಾಗುವ ನಿರೀಕ್ಷೆಇದೆಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‍ಡಿಆರ್‍ಎಫ್)ಯತಲಾ 20 ತಂಡಗಳು ರಕ್ಷಣಾ ಮತ್ತು ಪರಿಹಾರಕಾರ್ಯಾಚರಣೆಯಲ್ಲಿತೊಡಗಿವೆ.

ಎರಡು ದಶಕಗಳಲ್ಲಿ ಬಂಗಾಳಕೊಲ್ಲಿ ಮೇಲೆ ಅಪ್ಪಳಿಸಿರುವ ಎರಡನೇ ವಿನಾಶಕಾರಿ ಸೂಪರ್ ಸೈಕ್ಲೋನ್‍ಇದಾಗಿದೆ. 1999ರಲ್ಲಿ ಒಡಿಶಾ ಮೇಲೆ ಬಂದೆರಗಿದ ನಾಶಕಾರಿಚಂಡಮಾರುತದಿಂದ 10,000ಕ್ಕೂ ಹೆಚ್ಚು ಮಂದಿ ಬಲಿಯಾಗಿ ಲಕ್ಷಾಂತರಜನರು ಸಂತ್ರಸ್ಥರಾಗಿದ್ದರು.

ಗಣ್ಯರಆತಂಕ :ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದ ಸಾವು-ನೋವು ಮತ್ತುಅಪಾರ ಹಾನಿ ಸಂಭವಿಸಿರುವುದಕ್ಕೆ ರಾಷ್ಟ್ರಪತಿರಾಮನಾಥ್‍ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರುಆಂತಕ ವ್ಯಕ್ತಪಡಿಸಿದ್ದಾರೆ. ಸಾವಿಗೀಡಾದವರ ಬಗ್ಗೆ ಸಂತಾಪ ಸೂಚಿಸಿರುವ ಗಣ್ಯರು, ಸಂತ್ರಸ್ತರಿಗೆ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.

Facebook Comments

Sri Raghav

Admin