ಭೀಕರ ಚಂಡಮಾರುತದ ಆರ್ಭಟ ಎದುರಿಸಲು ಗುಜರಾತ್ ಸಜ್ಜು, ದೆಹಲಿಯಲ್ಲಿ ಅಮಿತ್ ಷಾ ಮೀಟಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಅಹಮದಾಬಾದ್, ಜೂ.12-ಭೀಕರ ಸ್ವರೂಪದ ವಾಯು ಚಂಡಮಾರುತ ಗುಜರಾತ್ ಕರಾವಳಿ ಮೇಲೆ ನಾಳೆ ಅಪ್ಪಳಿಸಲಿದ್ದು, ನೈಸರ್ಗಿಕ ವಿಕೋಪವನ್ನು ಎದುರಿಸಲು ಸರ್ಕಾರ ಸಜ್ಜಾಗಿದೆ.  ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ರಾತ್ರಿ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ರಾಜ್ಯ ಮತ್ತು ಕೇಂದ್ರ ಸಚಿವಾಲಯ ಮತ್ತು ಇಲಾಖೆಗಳ ಸಿದ್ದತಾ ಕಾರ್ಯಗಳನ್ನು ಪರಾಮರ್ಶಿಸಿದರು.

ವಾಯು ಚಂಡಮಾರುತದಿಂದ ಸಂಭವಿಸುವ ಪರಿಸ್ಥಿತಿಯನ್ನು ನಿಬಾಯಿಲು ಕಟ್ಟೆಚ್ಚರ ವಹಿಸಿ ಅಗತ್ಯವಾದ ಎಲ್ಲಾ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ಧಾರೆ.

ಸಮರೋಪಾದಿಯಲ್ಲಿ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧರಾಗುವಂತೆ ಹಾಗೂ ಚಂಡಮಾರುತ ವಿಕೋಪ ಸಂತಸ್ತರಿಗೆ ಅಗತ್ಯ ರಕ್ಷಣೆ ಮತ್ತು ನೆರವು ನೀಡುವಂತೆ ಅವರು ಉನ್ನತಾಧಿಕಾರಿಗಳಿಗೆ ಸೂಚಿಸಿದ್ದಾರೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೂ ಕೂಡ ನಿನ್ನೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಚರ್ಚಿಸಿದರು.

ಗುಜರಾತ್ ಕರಾವಳಿಯತ್ತ ಮುನ್ನುಗ್ಗುತ್ತಿರುವ ವಾಯು ಚಂಡಮಾರುತ ಮತ್ತಷ್ಟು ಉಗ್ರ ಸ್ವರೂಪ ತಳೆದಿದ್ದು, ನಾಳೆ ಕಚ್ ಸೇರಿದಂತೆ ಇತರ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈಗಾಗಲೇ ಸೂಕ್ಷ್ಮ ಕರಾವಳಿ ಪ್ರದೇಶಗಳಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ