ಬೆಂಗಳೂರಿಗೆ ಬೆಂಕಿಯಿಟ್ಟ ಕಿಡಿಗೇಡಿಗಳ ಆಸ್ತಿಗಳ ವಶಕ್ಕೆ ಸರ್ಕಾರ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.21- ರಾಜ್ಯದ ರಾಜಧಾನಿ ಬೆಂಗಳೂರಿನ ಡಿಜೆಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾದ ದುಷ್ಕರ್ಮಿಗಳ ಮನೆ, ವಾಹನ ಆಸ್ತಿ, ನಗದು ಚರ- ಸ್ಥಿರ ಸೇರಿದಂತೆ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ.

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಮುಂದಿಟ್ಟ ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಪುಟದ ಬಹುತೇಕ ಸಚಿವರು ಸಮ್ಮತಿಸಿದ್ದಾರೆ.

ಈ ಹಿಂದೆ ಕೇಂದ್ರ ಸರ್ಕಾರದ ಸಿಎಎ ಕಾಯ್ದೆ ವಿರೋಸಿ ಉತ್ತರಪ್ರದೇಶದಲ್ಲಿ ಪ್ರತಿಭಟನಕಾರರು, ಪ್ರತಿಭಟನೆ ನಡೆಸುವ ವೇಳೆ ಸಾರ್ವಜನಕರ ಆಸ್ತಿ- ಪಾಸ್ತಿ, ವಾಹನಗಳು ಸೇರಿದಂತೆ ಮತ್ತಿತರ ವಸ್ತುಗಳಿಗೆ ಬೆಂಕಿ ಹಚ್ಚಿ ಭಾರೀ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದ್ದರು.

ಕೊನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ಯಾರು ಗಲಭೆಯಲ್ಲಿ ಭಾಗಿಯಾಗಿ ಸಾರ್ವಜನಿಕರ ಆಸ್ತಿಯನ್ನು ನಾಶಮಾಡಿದ್ದರೋ ಅದನ್ನು ಅಂತಹವರಿಂದಲೇ ವಶಪಡಿಸಿಕೊಳ್ಳುವ ದಿಟ್ಟ ನಿರ್ಧಾರಕ್ಕೆ ಬಂದಿದ್ದರು.

ಬೆಂಕಿ ಹಚ್ಚಿದ ದುಷ್ಕರ್ಮಿಗಳಿಗೆ ಸೇರಿದ ಮನೆ, ನಿವೇಶನ, ಜಮೀನು, ನಗದು, ವಾಹನಗಳು, ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಬಹಿರಂಗ ಹಾರಾಜು ಹಾಕಿ ದಂಡ ವಸೂಲಿ ಮಾಡಿದ್ದರು.

ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಇದೀಗ ಡಿಜೆಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾಗಿ ಪುಂಡಾಟಿಕೆ ಮೆರೆದಿದ್ದ ದುಷ್ಕರ್ಮಿಗಳ ಆಸ್ತಿಯನ್ನು ಜಪ್ತಿ ಮಾಡಲು ಮುಂದಾಗಿದೆ.

ಈ ಸಂಬಂಧ ಹೈ ಕೋರ್ಟ್‍ಗೆ ಕ್ಲೇಮ್ ಕಮೀಷನರ್ ಒಬ್ಬರನ್ನು ನೇಮಕ ಮಾಡಿ, ಅದಷ್ಟು ಶೀಘ್ರ ಆಸ್ತಿ ಜಪ್ತಿ ಮಾಡಲು ಕ್ರಮತೆಗೆದುಕೊಳ್ಳಬೇಕು ಎಂಬ ಸಚಿವರಾದ ಬೊಮ್ಮಯಿ ಹಾಗೂ ಅಶೋಕ್ ಪ್ರಸ್ತಾವನೆಗೆ ಸಂಪುಟದ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.

# ಬೊಮ್ಮಯಿ ಹೆಗಲಿಗೆ:
ಇನ್ನು ಎಸ್‍ಡಿಪಿಐ ಸಂಘಟನೆಯನ್ನು ನಿಷೇಧ ಮಾಡುವ ಕುರಿತಂತೆ ಕೇಂದ್ರ ಗೃಹ ಇಲಾಖೆಯ ಜೊತೆ ಮಾತುಕತೆ ನಡೆಸುವ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಗೃಹ ಸಚಿವ ಬಸವರಾಜ್ ಬೊಮ್ಮಯಿ ಹೆಗಲಿಗೆ ನೀಡಿದ್ದಾರೆ.

ರಾಜ್ಯ ಪೊಲೀಸ್ ಮಹಾನಿದೇರ್ಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಕಮಲ್‍ಪಂಥ್, ಗೃಹ ಇಲಾಖೆ ಕಾರ್ಯದರ್ಶಿ, ಹಾಗೂ ಕಾನೂನು ಇಲಾಖೆ ಮತುತಿ ಅಡ್ವಕೇಟ್ ಜನರಲ್ ಅವರೊಂದಿಗೆ ಚರ್ಚೆಸಿ ಎಸ್‍ಡಿಪಿಐ ಸಂಘಟನೆಯ ಕಾರ್ಯಕರ್ತರು ನಡೆಸಿರುವ ಕಾನೂನು ಬಾಹಿರ ಚಟುವಟಿಕೆಗಳ ಸಾಕ್ಷ್ಯಧಾರಗಳನ್ನು ಕಲೆಹಾಕಿ, ಕೇಂದ್ರಕ್ಕೆ ವರದಿ ನೀಡಬೇಕು.

ಸೂಕ್ತವಾದ ದಾಖಲೆಗಳನ್ನು ಕಲೆಹಾಕಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಾಗೂ ಅಕಾರಿಗಳಿಗೆ ಪ್ರತ್ಯೇಕವಾದ ವರದಿಯನ್ನು ನೀಡುವ ಜವಾಬ್ದಾರಿಯನ್ನು ಬೊಮ್ಮಾಯಿ ಅವರ ಹೆಗಲಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

# ಆಖಾಡಕ್ಕಿಳಿದ ಗೃಹ ಇಲಾಖೆ:
ಇನ್ನು ಎಸ್‍ಡಿಪಿಐ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಸಲು ಸಾಕ್ಷ್ಯಾಧಾರಗಳನ್ನು ಸಿದ್ದಪಡಿಸುವತ್ತ ಸರ್ಕಾರ ಕಾರ್ಯನ್ಮೋಖವಾಗಿದೆ. ರಾಜ್ಯದಲ್ಲಿ ಈ ಹಿಂದೆ ಕಳೆದ ಎಂಟು ವರ್ಷಗಳಲ್ಲಿ ಎಸ್‍ಡಿಪಿಐ ಭಾಗಿಯಾಗಿರುವ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿರುವ ಸರ್ಕಾರ, ಸಾಕ್ಷ್ಯ ಸಮೇತ ವಿಸ್ತೃತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಿದೆ.

ಈಗಾಗಲೇ ಗೃಹ ಇಲಾಖೆಯ ಹಿರಿಯ ಅಕಾರಿಗಳ ಒಂದು ತಂಡ ಎಸ್‍ಡಿಪಿಐ ಸಂಘಟನೆ ಭಾಗಿಯಾದ ಪ್ರಕರಣಗಳ ಪಟ್ಟಿಯನ್ನು ಸಾಕ್ಷ್ಯಾಧಾರ ಸಮೇತ ಕಲೆ ಹಾಕುತ್ತಿದೆ.

ಈ ಸಂಘಟನೆಯನ್ನು ನಿಷೇಧ ಮಾಡಬೇಕೆಂಬ ಕೂಗು ಸದ್ಯ ಜೋರಾಗಿ ಕೇಳಿ ಬರುತ್ತಿದೆ.ಹೀಗಾಗಿ ಸಂಘಟನೆ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಮುಂದಾಗಿದೆ.

ಸಂಘಟನೆ ವಿರುದ್ಧ ವಿಸ್ತೃತ ವರದಿ ಸಿದ್ಧಪಡಿಸುತ್ತಿರುವ ಗೃಹ ಇಲಾಖೆ ಈ ಬಾರಿ ಸಾಕ್ಷಿ ಸಮೇತವಾಗಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಸಿದ್ಧತೆ  ನಡೆಸಿದೆ.

ಎಸ್‍ಡಿಪಿಐ, ಪಿಎಫ್‍ಐ ಸದಸ್ಯರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸ್ವರೂಪ, ಪ್ರಕರಣಗಳ ತನಿಖೆ, ಪ್ರಕರಣಗಳಲ್ಲಿ ಸಂಘಟನೆಯ ಪಾತ್ರ, ಕೋರ್ಟ್‍ನಲ್ಲಿ ಸಲ್ಲಿಕೆಯಾಗಿರುವ ಆರೋಪಪಟ್ಟಿ ಸೇರಿ ಸಂಪೂರ್ಣ ವರದಿಯನ್ನು ಕಡತಗಳ ಸಮೇತವಾಗಿ ಕಳುಹಿಸಿ ಕೊಡಲು ತೀರ್ಮಾನಿಸಿದೆ.

ಸರ್ಕಾರ ಹೇಳುವಂತೆ ಎಸ್‍ಡಿಪಿಐ ಮತ್ತು ಅದರ ಮೂಲ ಸಂಘಟನೆ ಪಿಎಫ್‍ಐ ಸದಸ್ಯರ ವಿರುದ್ಧ 2008ರಿಂದೀಚೆಗೆ ಒಟ್ಟು 19 ಪ್ರಕರಣಗಳು ದಾಖಲಾಗಿವೆ.

# ಯಾವ ಯಾವ ಪ್ರಕರಣಗಳು :
2008- ವಸಂತಕುಮಾರ್ ಪಿಳ್ಳೈ, ಹುಣಸೂರು
2009- ಮೈಸೂರು ಉದಯಗಿರಿಯ ಸೂರ್ಯ ನಾರಾಯಣ ದೇವಸ್ಥಾನದ ಮುಂದೆ ಎಳನೀರು ವ್ಯಾಪಾರಿ ವೆಂಕಟೇಶ್ ಹತ್ಯೆ.
2009- ಆನಂದ ಪೈ ಮತ್ತು ರಮೇಶ್ ಎಂಬ ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ, ಹತ್ಯೆ ಪ್ರಕರಣ.
2009- ಮೈಸೂರು ಅಶೋಕ ರಸ್ತೆಯಲ್ಲಿ ಹರೀಶ್ ಎಂಬುವವರ ಹತ್ಯೆ.
2009- ಶಶಿಕುಮಾರ್ ಎಂಬ ಸವಿತಾ ಸಮಾಜದ ಯುವಕನ ಹತ್ಯೆ.
2009- ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಗಿರಿಧರ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ.
2011- ಹುಣಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ಕೊಲೆ.
2013- ಮಂಗಳೂರಿನಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ.
2015- ಶಿವಮೊಗ್ಗದಲ್ಲಿ ವಿಶ್ವನಾಥ್ ಎಂಬ ಆರ್‍ಎಸ್‍ಎಸ್ ಕಾರ್ಯಕರ್ತನಹತ್ಯೆ.
2015- ಮೂಡಬಿದಿರೆಯಲ್ಲಿ ಹಿಂದೂ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಎಂಬುವವರ ಹತ್ಯೆ.
2016- ಹುಣಸೂರಿನ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣದಲ್ಲಿ ಪ್ರಮುಖ
ಸಾಕ್ಷಿಯಾಗಿದ್ದ ರಾಜು ಎಂಬ ಹಿಂದೂಪರ ಕಾರ್ಯಕರ್ತನ ಹತ್ಯೆ.
2016- ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವಿರೋ ಹೋರಾಟದಲ್ಲಿ
ಭಾಗಿಯಾಗಿದ್ದ ಕುಟ್ಟಪ್ಪ ಎಂಬವರ ಹತ್ಯೆ.
2016- ಕುಶಾಲನಗರದಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ.
2016- ಬೆಂಗಳೂರಿನ ಶಿವಾಜಿನಗರದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ.
2019- ಕಲಾಸಿಪಾಳ್ಯದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ವರುಣ್ ಮೇಲೆ ಹಲ್ಲೆ.
2020- ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಸಂಚು.
2020- ಸಿಎಎ ವಿರುದ್ಧದ ಮಂಗಳೂರು ಗಲಭೆ.
2020- ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ.

Facebook Comments

Sri Raghav

Admin