ನಾಳೆಯಿಂದ ಥಿಯೇಟರ್‌ಗಳಲ್ಲಿ ಸಲ್ಲು-ಸುದೀಪ್ ದಬಾಂಗ್ ದರ್ಬಾರ್

ಈ ಸುದ್ದಿಯನ್ನು ಶೇರ್ ಮಾಡಿ

ದೇಶದಾದ್ಯಂತ ಬಿಡುಗಡೆಗೊಳ್ಳುತ್ತಿರುವ ಬಹು ನಿರೀಕ್ಷೆಯ ಅದ್ಧೂರಿ ತಾರಾಗಣದ ದಬಾಂಗ್-3 ಚಿತ್ರ ಈಗ ಪ್ರೇಕ್ಷಕರ ಮುಂದೆ ಬರಲು ಸನ್ನದ್ಧವಾಗಿದೆ. ಈ ಚಿತ್ರ ಕನ್ನಡದಲ್ಲಿ ಡಬ್ ಆಗಿ ಹೊರಬರುತ್ತಿದೆ. ವಿಶೇಷ ಎಂದರೆ ನಟ ಸಲ್ಮಾನ್‍ಖಾನ್ ಜತೆ ಕಿಚ್ಚ ಸುದೀಪ್ ಅಭಿನಯಿಸಿರುವುದು. ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯನ್ನು ಬೆಂಗಳೂರಿನ ಸ್ಟಾರ್ ಹೊಟೇಲ್‍ವೊಂದರಲ್ಲಿ ಆಯೋಜನೆ ಮಾಡಲಾಗಿತ್ತು.

ತಡವಾಗಿಯೇ ಆಗಮಿಸಿದ ಸಲ್ಲೂ ಭಾಯ್‍ಗೆ ಚಿತ್ರದಲ್ಲಿ ನಿಮ್ಮ ಮತ್ತು ಸುದೀಪ್ ನಡುವಿನ ಪಾತ್ರ ಹೇಗೆ ಮೂಡಿ ಬಂದಿದೆ ಎಂದಾಗ ವಯಸ್ಸಿನಲ್ಲಿ ಸುದೀಪ್ ನನಗಿಂತ ಚಿಕ್ಕವರು, ಆದರೆ ದೈಹಿಕವಾಗಿ ನನಗಿಂತ ಟಫ್, ದಬಾಂಗ್ ಚಿತ್ರದ ಮೂಲಕ ನನಗೊಬ್ಬ ಒಳ್ಳೇ ಸೋದರ ಸಿಕ್ಕಿದ. ಚುಲ್‍ಬುಲ್ ಪಾಂಡೆ ಮತ್ತು ಬಲ್ಲಿಸಿಂಗ್ ಪಾತ್ರದಲ್ಲಿ ಸಖತ್ ಮನರಂಜನೆ ಇದೆ.

ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ, ಖುಷಿ ಪಡಿ ಎಂದರು. ನಂತರ ದಬಾಂಗ್-4 ಕೂಡಾ ಬರುತ್ತೆ ಎಂದು ಸಲ್ಮಾನ್ ಹೇಳಿದಾಗ, ಇಲ್ಲೂ ಸುದೀಪ್ ಇರುತ್ತಾರಾ? ಎಂಬ ಪ್ರಶ್ನೆ ಎದುರಾಯಿತು. ಆಗ ಇರಬಹುದು ಎಂದು ಸಲ್ಲು ಭಾಯ್ ಉತ್ತರಿಸಿದರು.  ನಂತರ ನಟ ಸುದೀಪ್ ಮಾತನಾಡಿ, ದಬಾಂಗ್ ಚಿತ್ರದ ಮೂಲಕ ನಾನು ಬಹು ದೊಡ್ಡ ಬ್ಯಾನರ್‍ನಲ್ಲಿ ಕೆಲಸ ಮಾಡಿದ ತೃಪ್ತಿ ಸಿಕ್ಕಿದೆ, ನಿಜಕ್ಕೂ ನಾನು ಲಕ್ಕಿ.

ಚಿತ್ರದ ಹಾಡಿನಲ್ಲಿ ನಾನಿರುವುದಿಲ್ಲ. ನನ್ನ ಪಾತ್ರದಲ್ಲಿ ನನಗೆ ತೃಪ್ತಿ ಇದೆ, ಮುಖ್ಯವಾಗಿ ಇದೊಂದು ಬಿಗ್ ಬಜೆಟ್‍ನಲ್ಲಿ ತಯಾರಾಗಿರುವ ಎಂಟರ್‍ಟ್ರೈನಿಂಗ್ ಚಿತ್ರ. ಸಲ್ಮಾನ್‍ಖಾನ್ ಅವರು ವೃತ್ತಿಯಲ್ಲಿ ನಿಜವಾದ ಕನ್ನಡ ಪ್ರೇಮ ತೋರಿಸಿದ್ದು ಕಂಡು ನನಗೆ ತುಂಬಾ ಆಶ್ಚರ್ಯವಾಯಿತು. ಚಿತ್ರದ ಡಬ್ಬಿಂಗ್ ಸಮಯದಲ್ಲಿ ಅದೊಂದು ಕ್ಷಣ ಸಲ್ಲುಭಾಯ್ ಆಗಿದ್ದರು. ಆಮೇಲೆ ವಾಪಾಸ್ ಬಂದಾಗ ಕನ್ನಡ ಕಲಿತಿದ್ದರು, ಅಲ್ಲದೆ ಡಬ್ ಮಾಡಿದರು, ಅದು ಸಲ್ಮಾನ್ ತೋರಿದ ಪ್ರಾಮಾಣಿಕತೆ ಎಂದು ಸುದೀಪ್ ಹೇಳಿಕೊಂಡರು.

ಚಿತ್ರದ ನಿರ್ದೇಶಕ ಪ್ರಭುದೇವ್ ಕೂಡಾ ಸುದೀಪ್ ಬಗ್ಗೆಯೇ ಮಾತನಾಡುತ್ತ ನಾವು ಸುದೀಪ್ ಅವರಿಂದ ಐವತ್ತು ಪರ್ಸೆಂಟ್ ನಿರೀಕ್ಷಿಸಿದ್ದರೆ, ಅವರು ನೂರು ಪರ್ಸೆಂಟ್ ಕೊಡುತ್ತಿದ್ದರು, ಅದು ನಟನೆಯಲ್ಲಿ ಸುದೀಪ್ ಇಟ್ಟುಕೊಂಡಿರುವ ಕಲಾತ್ಮಕತೆ, ಆರು ವರ್ಷದಿಂದ 60 ವರ್ಷದವರೂ ನೋಡಬಹುದಾದ ಮತ್ತು ಖುಷಿ ಪಡುವ ಚಿತ್ರ ಎಂದರು. ಸುದೀಪ್ ಜೊತೆ ಯಾಕೆ ಒಂದು ಕನ್ನಡ ಚಿತ್ರ ನಿರ್ದೇಶಿಸಬಾರದು ಎಂಬ ಪ್ರಶ್ನೆಗೆ ಪ್ರಭುದೇವ್ ಉತ್ತರ ಕೊಟ್ಟಿದ್ದು ಹೀಗೆ, ಸುದೀಪ್ ಅವಕಾಶ ಕೊಡಲಿ, ಆಗ ಖಂಡಿತ ಚಿತ್ರ ನಿರ್ದೇಶಿಸುತ್ತೇನೆ ಎಂದರು.

ನಿರ್ದೇಶಕ ಪ್ರಭುದೇವ್ ಒಬ್ಬರು ಡ್ಯಾನ್ಸ್ ಮಾಸ್ಟರ್. ಹಾಗಾಗಿ ಈ ಸಿನಿಮಾಕ್ಕೆ ಅವರು ನೃತ್ಯ ನಿರ್ದೇಶನ ಕೂಡ ಮಾಡಿದ್ದಾರೆ. ಈ ಕುರಿತು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದಾಗ ಸಲ್ಮಾನ್‍ಖಾನ್ ಉತ್ತರಿಸಿದ್ದು ಹೀಗೆ, ಹೌದು ಅವರು ಡ್ಯಾನ್ಸ್ ಮಾಡಿಸಿದಾಗ ತುಂಬಾ ಕಷ್ಟವಾಗಿತ್ತು. ಜತೆಗೆ ಬಾಡಿ ಫುಲ್ ನೋವಾಗಿತ್ತು. ಆದರೂ ಕೂಡ ಒಂದು ಒಳ್ಳೆಯ ಅನುಭವ ಆಯಿತು ಎಂದರು.

ಕಿಚ್ಚ ಸುದೀಪ್ ಮಾತನಾಡಿ, ಯಾರ್ಯಾರು ಏನೇನು ಮಾಡಬೇಕು, ಅದು ಮಾಡಿದರೇನೇ ಚಂದ. ಡ್ಯಾನ್ಸ್ ಅನ್ನೋದು ಹೀರೋಗೆ ಮುಖ್ಯ. ಅದು ವಿಲನ್‍ಗೆ ಅಲ್ಲ. ಆದರೂ ಪ್ರಭುದೇವ ಮನೆಯಲ್ಲಿ ಒಂದಿನ ಡ್ಯಾನ್ಸ್ ಮಾಡಿಸಿದ್ದರು ಎಂದು ಸುದೀಪ್ ಜಾಣತನದ ಉತ್ತರ ಕೊಟ್ಟರು. ಅಂದಹಾಗೆ, ಈಗಾಗಲೇ ಸಾಕಷ್ಟು ಸಲ ನಾನು ಬೆಂಗಳೂರಿಗೆ ಬಂದು ಹೋಗಿದ್ದೇನೆ.

ಇಲ್ಲಿನ ವಾತಾವರಣ ನನಗೆ ತುಂಬಾ ಇಷ್ಟವಾಯಿತು. ಊಟಿಯಲ್ಲಿ ಸಿನಿಮಾದ ಶೂಟಿಂಗ್ ಮಾಡಿದ್ದೇವೆ. ನಮಗೆ ಒಂದು ಹೊಸ ಅನುಭವ ಕೊಟ್ಟಿತ್ತು ಎಂದು ಸಲ್ಮಾನ್‍ಖಾನ್ ಹೇಳಿದರು.
ನಾನು ಮೊದಲಿನಿಂದಲೂ ಬೆಂಗಳೂರನ್ನು ತುಂಬಾ ಇಷ್ಟ ಪಡ್ತೀನಿ. 9 ವರ್ಷಗಳ ನಂತರ ಮತ್ತೆ ರಾಜಧಾನಿಗೆ ಬಂದಿದ್ದು ಸಖತ್ ಖುಷಿ ಆಗ್ತಿದೆ. ಇಲ್ಲಿನ ಅನೇಕ ಜಾಗಗಳು ನನಗೆ ಅಚ್ಚುಮೆಚ್ಚು, ಇಲ್ಲಿಯೂ ಸಹ ನನ್ನ ಅಭಿಮಾನಿಗಳು ಇದ್ದಾರೆ, ಅವರಿಗೆ ಧನ್ಯವಾದಗಳು. ಇಂತಹ ಟೀಂ ಜೊತೆ ಕೆಲಸ ಮಾಡಿದ್ದು ತೃಪ್ತಿ ನೀಡಿದೆ.

ಸಾಯಿ ಮಂಜ್ರೆಕರ್ ಈ ಚಿತ್ರದಲ್ಲಿ ಸಾಥ್ ಕೊಟ್ಟಿದ್ದಾರೆ ಎಂದು ನಾಯಕಿ ಸೋನಾಕ್ಷಿ ಸಿನ್ಹಾ ತಿಳಿಸಿದರು. ಮತ್ತೊಬ್ಬ ನಟಿ ಸಾಯೀ ಮಂಜ್ರೆಕರ್ ಕೂಡ ಇದೇ ಸಂದರ್ಭದಲ್ಲಿ ಹಾಜರಿದ್ದರು.
ಈ ಹಿಂದೆ ಬಂದ ದಬಾಂಗ್, ದಬಾಂಗ್-2 ಹಿಟ್ ಚಿತ್ರಗಳು. ಈ ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿ ಕೋಟಿ ಕೋಟಿ ಹಣ ಗಳಿಸಿದ್ದವು. ಅದರಲ್ಲಿ ಅಣ್ಣ-ತಮ್ಮಂದಿರ ಕುರಿತು ಕಥೆ ಮೂಡಿಬಂದಿತ್ತು.

ಆದರೆ ದಬಾಂಗ್ -3 ಸಿನಿಮಾದಲ್ಲಿ ನಿರ್ದೇಶಕರು ಬೇರೆ ರೀತಿಯ ಕಥೆಯ ಮೂಲಕ ಫುಲ್ ಎಂಟರ್‍ಟೈನ್‍ಮೆಂಟ್ ಕೊಟ್ಟಿದ್ದಾರಂತೆ. ಕರ್ನಾಟಕದಾದ್ಯಂತ ವಿತರಕ ಜಾಕ್‍ಮಂಜು ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದು, ಅದ್ಧೂರಿಯಾಗಿ ದಬಾಂಗ್-3 ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ.

Facebook Comments