ಇಂದಿನ ಪಂಚಾಂಗ ಮತ್ತು ರಾಶಿಫಲ (10-02-2020-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾರು ಎಲ್ಲ ರೀತಿಯಲ್ಲಿಯೂ ಹಿಂಸೆಯನ್ನು ಬಿಟ್ಟಿದ್ದಾರೋ, ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆಯೋ, ಎಲ್ಲರಿಗೂ ಆಶ್ರಯವಾಗಿದ್ದಾರೆಯೋ ಅಂಥ ಜನರನ್ನು ಸ್ವರ್ಗವನ್ನು ಪಡೆಯುತ್ತಾರೆ.  –ಸುಭಾಷಿತರತ್ನ ಭಾಂಡಾಗಾರ

# ಪಂಚಾಂಗ : ಸೋಮವಾರ 10.02.2020
ಸೂರ್ಯ ಉದಯ ಬೆ.06.44 / ಸೂರ್ಯ ಅಸ್ತ ಸಂ.06.23
ಚಂದ್ರ ಉದಯ ರಾ.07.37 / ಚಂದ್ರ ಅಸ್ತ ಬೆ.07.34
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು, / ಮಾಘ ಮಾಸ / ಶುಕ್ಲ ಪಕ್ಷ /
ತಿಥಿ: ಪ್ರತಿಪ-ದ್ವಿತೀಯ (ಬೆ.09.45-ನಾ.ಬೆ.06.19) ನಕ್ಷತ್ರ: ಮಖ (ಸಾ.05.06)
ಯೋಗ: ಶೋಭನ (ಬೆ.11.32) ಕರಣ: ಕೌಲವ-ತೈತಿಲ-ಗರಜೆ (ಬೆ.09.45-ರಾ.08.02-ನಾ.ಬೆ.06.19) ಮಳೆ ನಕ್ಷತ್ರ: ಧನಿಷ್ಠಾ
ಮಾಸ: ಮಕರ ತೇದಿ: 27

# ರಾಶಿ ಭವಿಷ್ಯ
ಮೇಷ:ಮಕ್ಕಳು, ಹೆಂಡತಿ, ಕುಟುಂಬದ ಇತರೆ ಸದಸ್ಯರು ನಿಮ್ಮ ಮಾತನ್ನು ಗೌರವಿಸುವರು
ವೃಷಭ: ನೂತನ ವಸ್ತು ಖರೀದಿಸುವಿರಿ. ಹೊಸ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಎಚ್ಚರದಿಂದಿರಿ
ಮಿಥುನ: ಶತ್ರುಗಳು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿವೆ
ಕಟಕ: ಭೂ ಸಂಬಂಧ ವ್ಯವಹಾರ ಮುಂದೂಡುವುದು ಒಳಿತು
ಸಿಂಹ: ಶುಭ ಕಾರ್ಯಗಳಿಗಾಗಿ ಹೇರಳ ಹಣ ವ್ಯಯ ಮಾಡುತ್ತೀರಿ
ಕನ್ಯಾ: ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಶತ ಪ್ರಯತ್ನ ಮಾಡಬೇಕಾಗಬಹುದು
ತುಲಾ: ಆಪ್ತ ಸ್ನೇಹಿತರೊಂದಿಗೆ ಕಿರಿಕಿರಿ ಉಂಟಾಗಲಿದೆ
ವೃಶ್ಚಿಕ: ವಿದೇಶ ಪ್ರಯಾಣದಿಂದ ಶುಭವಾಗಲಿದೆ
ಧನುಸ್ಸು: ಮಕ್ಕಳೊಂದಿಗೆ ವಿರಸ ಉಂಟಾಗಲಿದೆ
ಮಕರ: ಮಾನಸಿಕ ಸ್ಥಿತಿ ಸರಿ ಇರುವುದಿಲ್ಲ
ಕುಂಭ: ಮುಂದಾಳತ್ವ ವಹಿಸಿಕೊಳ್ಳಲು ಹಿಂಜರಿಕೆ ಬೇಡ
ಮೀನ:ಜನರಿಂದ ಗೌರವ ಸಿಗುತ್ತದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments