ಇಂದಿನ ಪಂಚಾಗ ಮತ್ತು ರಾಶಿಫಲ (18-11-2019- ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸತ್ಪುರುಷನ ಮನಸ್ಸು ಸಹಜ ಕೋಮಲ ವಾಗಿರುತ್ತದೆ. ಆದರೆ ಆಪತ್ಕಾಲದಲ್ಲಿ ಕಠಿಣವಾಗುತ್ತದೆ. ವಸಂತಕಾಲದಲ್ಲಿ ಸುಕುಮಾರವಾಗಿರುವ ಮರದ ಚಿಗುರೆಲೆ ಬೇಸಿಗೆಯಲ್ಲಿ ಒರಟಾಗುತ್ತದೆ.-ದೃಷ್ಟಾಂತಕಲಿಕಾ

# ಪಂಚಾಂಗ :ಸೋಮವಾರ, 18.11.2019
ಸೂರ್ಯ ಉದಯ ಬೆ.06.19 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ರಾ.11.09 / ಚಂದ್ರ ಅಸ್ತ ಬೆ.11.22
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠೀ (ಸಾ.05.10) / ನಕ್ಷತ್ರ: ಪುಷ್ಯ (ರಾ.10.21) / ಯೋಗ: ಶುಕ್ಲ (ರಾ.12.39) / ಕರಣ: ವಣಿಜ್-ಭದ್ರೆ (ಸಾ.05.10-ರಾ.04.25) / ಮಳೆ ನಕ್ಷತ್ರ: ವಿಶಾಖ / ಮಾಸ: ವೃಶ್ಚಿಕ / ತೇದಿ: 02
ಇಂದಿನ ವಿಶೇಷ: ಕಾರ್ತಿಕ ಸೋಮವಾರ, ಸಾಯನ ವೈಧೃತಿ ಬೆ.11.12

# ರಾಶಿ ಭವಿಷ್ಯ
ಮೇಷ: ಬಂಧು-ಬಾಂಧವರಿಂದ ವಿರೋಧ ಎದುರಿಸಬೇಕಾಗುತ್ತದೆ. ಘನತೆಗೆ ಚ್ಯುತಿ ಬರಲಿದೆ
ವೃಷಭ: ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ
ಮಿಥುನ: ವೃತ್ತಿಯಲ್ಲಿ ಪ್ರಗತಿ ಸಾಧಿಸುವಿರಿ
ಕಟಕ: ಶುಭ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವಿರಿ
ಸಿಂಹ: ಭೂ ವ್ಯವಹಾರದಲ್ಲಿ ಲಾಭ ಗಳಿಸುವಿರಿ
ಕನ್ಯಾ: ಪ್ರಗತಿಗೆ ಅನೇಕ ಅವಕಾಶಗಳು ದೊರೆಯುತ್ತವೆ
ತುಲಾ: ಭೋಗವಸ್ತು ವ್ಯಾಪಾರಿ ಗಳಿಗೆ ಭಾರೀ ನಷ್ಟವಾಗಬಹುದು
ವೃಶ್ಚಿಕ: ಪತ್ನಿಯಿಂದ ಸಹಕಾರ ಮತ್ತು ಲಾಭ ಪಡೆಯುತ್ತೀರಿ
ಧನುಸ್ಸು: ಬಂದ ಹಣ ನೀರಿನಂತೆ ಕರಗಿ ಹೋಗುತ್ತದೆ
ಮಕರ: ಮನೆಯಲ್ಲಿ ಶುಭ ಸಮಾರಂಭಗಳು ನಡೆಯುವ ಸಾಧ್ಯತೆಗಳಿವೆ. ಪ್ರತಿಷ್ಠೆ ದೊರೆಯಲಿದೆ
ಕುಂಭ: ಆಸ್ತಿ ಖರೀದಿಸುವ ಮುನ್ನ ಎಚ್ಚರ ವಹಿಸಿ
ಮೀನ: ಸಮಾಜ ಸೇವಕರು ಜನರಿಂದ ವಿರೋಧ ಎದುರಿಸಬೇಕಾಗುತ್ತದೆ. ವಾದ-ವಿವಾದ ಮಾಡದಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments

Sri Raghav

Admin