ಇಂದಿನ ಪಂಚಾಂಗ ಮತ್ತು ರಾಶಿಫಲ (15-02-2020-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನನಗೆ ಮುಪ್ಪೂ ಇಲ್ಲ, ಮರಣವೂ ಇಲ್ಲ- ಎಂಬಂತೆ ಬುದ್ಧಿಶಾಲಿಯಾದವನು ವಿದ್ಯೆಯನ್ನೂ, ಧನವನ್ನೂ ಸಂಪಾದಿಸ ಬೇಕು. ಮೃತ್ಯು ಬಂದು ಜುಟ್ಟನ್ನು ಹಿಡಿದು ಕೊಂಡಿದೆಯೋ ಎಂಬಂತೆ ಹೆದರಿಕೆಯಿಂದ ಧರ್ಮವನ್ನಾಚರಿಸಬೇಕು.  –ಸಮಯೋಚಿತ ಪದ್ಯಮಾಲಿಕಾ

# ಪಂಚಾಂಗ : ಶನಿವಾರ 15.02.2020
ಸೂರ್ಯ ಉದಯ ಬೆ.06.42/ ಸೂರ್ಯ ಅಸ್ತ ಸಂ.06.25
ಚಂದ್ರ ಉದಯ ರಾ.01.24 / ಚಂದ್ರ ಅಸ್ತ ಮ.12.19
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು, / ಮಾಘ ಮಾಸ / ಕೃಷ್ಣ ಪಕ್ಷ /
ತಿಥಿ: ಸಪ್ತಮಿ (ಸಾ.04.30) ನಕ್ಷತ್ರ: ವಿಶಾಖ (ರಾ.05.09) ಯೋಗ: ವೃದ್ಧಿ(ಮ.02.05)
ಕರಣ: ಭವ-ಬಾಲವ (ಸಾ.04.30-ರಾ.09.47) ಮಳೆ ನಕ್ಷತ್ರ: ಧನಿಷ್ಠಾ  ಮಾಸ: ಕುಂಭ ತೇದಿ: 03

# ರಾಶಿ ಭವಿಷ್ಯ
ಮೇಷ: ಉನ್ನತ ವ್ಯಕ್ತಿಗಳಿಂದ ಅಪಾಯವಿದೆ
ವೃಷಭ: ವ್ಯಾಪಾರದಲ್ಲಿ ನಷ್ಟ ಅನುಭವಿಸುವಿರಿ
ಮಿಥುನ:ಯಾರ ಪ್ರೀತಿಯ ಮಾತಿಗೂ ಮರುಳಾಗದಿರಿ
ಕಟಕ: ನಿಮ್ಮ ಮೇಲೆ ಸುಳ್ಳು ಆಪಾದನೆಗಳು ಬರ ಬಹುದು. ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಳ್ಳುವಿರಿ
ಸಿಂಹ: ಅಪರಿಚಿತರೊಡನೆ ಯಾವುದೇ ವ್ಯವಹಾರ ಮಾಡಬೇಡಿ
ಕನ್ಯಾ: ಕೆಲವು ಗಂಭೀರ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ
ತುಲಾ: ದಾನ-ಧರ್ಮಗಳನ್ನು ಹೇರಳವಾಗಿ ಮಾಡುವಿರಿ
ವೃಶ್ಚಿಕ: ಸಂಗಾತಿಯೊಡನೆ ಸಾಮರಸ್ಯವಿರುತ್ತದೆ
ಧನುಸ್ಸು: ಬಂದು-ಬಾಂಧವರ ಸಹಕಾರ ಸಿಗುವುದಿಲ್ಲ
ಮಕರ: ಆಕಸ್ಮಿಕ ಧನ ಲಾಭವಾಗಲಿದೆ. ಅಲಂಕಾರಿಕ ವಸ್ತುಗಳ ಖರೀದಿಯಿಂದ ಹಣ ವ್ಯಯವಾಗುತ್ತದೆ
ಕುಂಭ: ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮೀನ: ಅನಿವಾರ್ಯ ಕಾರಣಗಳಿಂದಾಗಿ ವಿದೇಶ ಪ್ರಯಾಣ ರದ್ದಾಗುವ ಸಾಧ್ಯತೆಗಳಿವೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments