ಇಂದಿನ ಪಂಚಾಂಗ ಮತ್ತು ರಾಶಿಫಲ (04-03-2020-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕಷ್ಟದಿಂದಾಗುವ ಕ್ಷೋಭೆಯನ್ನು ಉತ್ತಮನು ಸಹಿಸಿಕೊಳ್ಳಬಲ್ಲನು; ಅಲ್ಪನು ಸಹಿಸಲಾರ. ಸಾಣೆಕಲ್ಲಿನ ಘರ್ಷಣೆಯನ್ನು ರತ್ನವು ಸಹಿಸಿಕೊಳ್ಳಬಲ್ಲುದೇ ಹೊರತು ಮಣ್ಣಿನ ಕಣ ಸಹಿಸಿಕೊಳ್ಳಲಾರದು.  –ದುಷ್ಟಾಂತಕಲಿಕಾ

# ಪಂಚಾಂಗ : ಬುಧವಾರ, 04.03.2020
ಸೂರ್ಯ ಉದಯ ಬೆ.06.33 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ಬೆ.1.15 / ಚಂದ್ರ ಅಸ್ತ ರಾ.2.29
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ನವಮಿ (ಮ.2.00) ನಕ್ಷತ್ರ: ಮೃಗಶಿರಾ (ಬೆ.11.23) ಯೋಗ: ಪ್ರೀತಿ (ಬೆ.11.25)
ಕರಣ: ಕೌಲವ-ತೈತಿಲ (ಮ.2.00-ರಾ.1.46) ಮಾಸ: ಕುಂಭ ತೇದಿ: 21

# ರಾಶಿ ಭವಿಷ್ಯ
ಮೇಷ: ಸಾಲಗಾರರಿಂದ ಮುಕ್ತಿ ದೊರೆಯುತ್ತದೆ
ವೃಷಭ: ಸರ್ಕಾರಿ ಕೆಲಸದಲ್ಲಿದ್ದವರಿಗೆ ಸ್ಥಳ ಬದಲಾವಣೆಯಾಗಬಹುದು
ಮಿಥುನ: ಕೌಟುಂಬಿಕ ವಿಷಯಗಳಲ್ಲಿ ಸಮಸ್ಯೆಗಳು ಕಂಡುಬರುತ್ತವೆ.ಯಾರು ನಿಮ್ಮನ್ನು ನಂಬುವುದಿಲ್ಲ.
ಕಟಕ: ಪುಸ್ತಕ ವ್ಯಾಪಾರಿಗಳಿಗೆ ಲಾಭದಾಯಕವಾದ ದಿನ
ಸಿಂಹ: ಪತಿ-ಪತ್ನಿಯರ ನಡುವೆ ಸಮಸ್ಯೆಗಳು ಕಂಡುಬರುವ ಸಾಧ್ಯತೆಗಳಿವೆ
ಕನ್ಯಾ: ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು
ತುಲಾ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸುವುದಿಲ್ಲ
ವೃಶ್ಚಿಕ: ತಂದೆ-ತಾಯಿಗಳ ವಿರೋಧವನ್ನು ಎದುರಿಸಬೇಕಾಗುತ್ತದೆ
ಧನುಸ್ಸು: ಶುಭ ಫಲಗಳು ಕಡಿಮೆ ಇರುತ್ತವೆ
ಮಕರ: ವಿದೇಶ ಪ್ರಯಾಣದಿಂದ ಹಣ ವ್ಯಯ
ಕುಂಭ: ಹಣದ ಮುಗ್ಗಟ್ಟು ನಿಮ್ಮನ್ನು ಬಾಧಿಸದು
ಮೀನ: ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಸಿಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments