ಇಂದಿನ ಪಂಚಾಂಗ ಮತ್ತು ರಾಶಿಫಲ (07-03-2020-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಜಾಣರು ಮುಖವನ್ನು ನೋಡಿ ಇತರರ ಮನಸ್ಸಿನಲ್ಲಿರುವ ಭಾವವನ್ನು ಗ್ರಹಿಸುತ್ತಾರೆ. ದುಂಬಿ ಗಳು ಸುಗಂಧದಿಂದಲೇ ಒಳಗೆ ಮುಚ್ಚಿಕೊಂಡಿ ರುವ ತಾಳೆ ಹೂವನ್ನು ತಿಳಿಯುತ್ತವೆ.  -ಪ್ರಸನ್ನರಾಘವ

# ಪಂಚಾಂಗ :ಶನಿವಾರ , 07.03.2020
ಸೂರ್ಯ ಉದಯ ಬೆ.06.32 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ಸಂ.04.13 / ಚಂದ್ರ ಅಸ್ತ ರಾ.05.18
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ದ್ವಾದಶಿ-ತ್ರಯೋ ಬೆ.09.29-ನಾ.ಬೆ.06.32) ನಕ್ಷತ್ರ: ಪುಷ್ಯ (ಬೆ.09.05) ಯೋಗ: ಅತಿಗಂಡ
(ರಾ.01.06) ಕರಣ: ಬಲವ-ಕೌಲವ (ಬೆ.09.29-ರಾ.08.05) ಮಳೆ ನಕ್ಷತ್ರ: ಪೂರ್ವಾಭಾದ್ರ ಮಾಸ: ಕುಂಭ ತೇದಿ: 24

# ರಾಶಿ ಭವಿಷ್ಯ
ಮೇಷ: ವ್ಯಾಪಾರ-ವ್ಯವಹಾರಗಳಲ್ಲಿ ತೊಂದರೆ
ವೃಷಭ: ಅನಾವಶ್ಯಕವಾಗಿ ತಿರುಗಾಡುವಿರಿ
ಮಿಥುನ: ನೆರೆಹೊರೆಯವರಲ್ಲಿ ವೈರತ್ವ ಉಂಟಾಗ ಬಹುದು. ಉದ್ಯೋಗಸ್ಥರಿಗೆ ನೆಮ್ಮದಿ ಕಡಿಮೆ
ಕಟಕ: ಬಡ್ಡಿ ವ್ಯಾಪಾರಸ್ಥರಿಗೆ ಲಾಭದಾಯಕ ದಿನ
ಸಿಂಹ: ಸಮಾಜ ಸೇವಕರಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ
ಕನ್ಯಾ: ಕುಟುಂಬದಲ್ಲಿ ಅನ್ಯೋನ್ಯತೆ ಕಂಡುಬರುತ್ತದೆ
ತುಲಾ: ನಿಮ್ಮ ವಿವೇಚನೆಯಿಂದ ಕೆಲಸ ಮಾಡಿದರೆ ಉತ್ತಮ
ವೃಶ್ಚಿಕ: ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳುವರು
ಧನುಸ್ಸು: ಕುಲದೇವತಾ ದರ್ಶನ ಮಾಡುವ ಯೋಗವಿದೆ
ಮಕರ: ಗೃಹದಲ್ಲಿ ನಿಷ್ಠೂರದ ಮಾತುಗಳಿಂದ ಅಶಾಂತಿ ವಾತಾವರಣ ನಿರ್ಮಾಣವಾಗುತ್ತದೆ
ಕುಂಭ: ಭಿನ್ನಾಭಿಪ್ರಾಯ ನಿವಾರಣೆಯಾಗುತ್ತವೆ
ಮೀನ: ರಕ್ತ ಸಂಬಂಧಿ ಕಾಯಿಲೆ ಇರುವವರು ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments