ಇಂದಿನ ಪಂಚಾಂಗ ಮತ್ತು ರಾಶಿಫಲ (09-03-2020-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕಣ್ಣುಗಳನ್ನು ಮುಚ್ಚಿದ್ದರೂ ಯಾವನು ರಾಜನೀತಿಯೆಂಬ ಕಣ್ಣನ್ನು ತೆರೆದು ಸದಾ ಎಚ್ಚರದಲ್ಲಿರುವನೋ ಯಾವನ ಕ್ರೋಧವಾಗಲಿ, ಪ್ರಸಾದವಾಗಲಿ ಸ್ಫುಟವಾದ ಫಲವನ್ನು ಕೊಡುತ್ತದೆಯೋ ಅಂತ ರಾಜನನ್ನು ಪ್ರಜೆಗಳು ಆದರಿಸುತ್ತಾರೆ.  –ರಾಮಾಯಣ

# ಪಂಚಾಂಗ :ಸೋಮವಾರ , 09.03.2020
ಸೂರ್ಯ ಉದಯ ಬೆ.06.30 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ಸಂ.06.18 / ಚಂದ್ರ ಅಸ್ತ ಬೆ.07.00
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ಪೂರ್ಣಿಮಾ (ರಾ.11.18) ನಕ್ಷತ್ರ: ಪೂರ್ವಫಲ್ಗುಣಿ (ರಾ.01.09) ಯೋಗ: ಧೃತಿ (ಸಾ.04.57)
ಕರಣ: ಭದ್ರೆ-ಭವ (ಮ.01.13-ರಾ.11.18) ಮಳೆ ನಕ್ಷತ್ರ: ಪೂರ್ವಾಭಾದ್ರ ಮಾಸ: ಕುಂಭ ತೇದಿ: 26

# ರಾಶಿ ಭವಿಷ್ಯ
ಮೇಷ: ಇತರರು ನಿಮ್ಮನ್ನು ಆಶ್ರಯಿಸಿ ಬರುವರು
ವೃಷಭ: ಜ್ಯೋತಿಷ್ಯದಲ್ಲಿ ಆಪನಂಬಿಕೆ ಬರುವುದು
ಮಿಥುನ: ಸಮಾಜ ಸೇವಕರಿಗೆ ಅನ್ಯ ಜನರಿಂದ ಕಿರುಕುಳ
ಕಟಕ: ನಿಮ್ಮಿಂದ ಉಪಕಾರ ಪಡೆದವರೇ ನಿಮಗೆ ಮೋಸ ಮಾಡುವ ಸಂದರ್ಭ ಎದುರಾಗಬಹುದು
ಸಿಂಹ: ಬಂಡವಾಳ ಹೂಡಲು ಸಕಾಲವಲ್ಲ. ಭೂ ವ್ಯವಹಾರಸ್ಥರಿಗೆ ತೊಂದರೆ
ಕನ್ಯಾ: ಅಪರಿಚಿತ ವ್ಯಕ್ತಿಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ
ತುಲಾ: ಸಂಗಾತಿಯ ವಿಷಯದಲ್ಲಿ ಮಾನಸಿಕ ನೋವು ಅನುಭವಿಸುವಿರಿ
ವೃಶ್ಚಿಕ: ಅನ್ಯ ಮಾರ್ಗದಿಂದ ಹಣ ಗಳಿಸಲು ಪ್ರಯತ್ನಿಸುವಿರಿ
ಧನುಸ್ಸು: ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಿ
ಮಕರ: ಹೊಸ ಜನರ ಪರಿಚವಾಗುತ್ತದೆ
ಕುಂಭ: ಕೆಲಸ-ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿವೆ
ಮೀನ: ರಾಜಕೀಯ ಕ್ಷೇತ್ರದಲ್ಲಿರುವವರು ಪ್ರಗತಿ ಸಾಧಿಸುವರು. ಆರೋಗ್ಯದ ಬಗ್ಗೆ ಎಚ್ಚರ ವಹಿಸಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments