ಇಂದಿನ ಪಂಚಾಂಗ ಮತ್ತು ರಾಶಿಫಲ (12-03-2020-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಾಚಿಕೆ, ಸ್ನೇಹ, ಮಧುರವಾದ ಸ್ವರ, ಬುದ್ಧಿ, ಯೌವನದ ಕಾಂತಿ, ಸ್ತ್ರೀ ಸಹವಾಸ, ಸ್ವಜನರಲ್ಲಿ ಸಮತ್ವ ಬುದ್ಧಿ, ದುಃಖವಿಲ್ಲದಿರುವಿಕೆ, ಬೆಡಗು, ಧರ್ಮ, ಶಾಸ್ತ್ರ, ಬೃಹಸ್ಪತಿಯ ಬುದ್ಧಿ ಕುಶಲತೆ, ಶುಚಿತ್ವ, ನಡವಳಿಕೆಯ ಚಿಂತೆ- ಇವುಗಳೆಲ್ಲಾ ಜೀವಿಗಳಿಗೆ ಹೊಟ್ಟೆ ತುಂಬಿದ್ದರೆ ಮಾತ್ರ ಉಂಟಾಗುತ್ತವೆ.  –ಪಂಚತಂತ್ರ

# ಪಂಚಾಂಗ :ಗುರುವಾರ , 12.03.2020
ಸೂರ್ಯ ಉದಯ ಬೆ.06.29 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.12.23 / ಚಂದ್ರ ಅಸ್ತ ಬೆ.08.36
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ತೃತೀಯಾ (ಮ.12.00) ನಕ್ಷತ್ರ: ಚಿತ್ತಾ(ಸಾ.04.16) ಯೋಗ: ಧ್ರುವ (ರಾ.12.04)
ಕರಣ: ಭದ್ರೆ-ಭವ (ಮ.12.00-ರಾ.10.22) ಮಳೆ ನಕ್ಷತ್ರ: ಪೂರ್ವಾಭಾದ್ರ ಮಾಸ: ಕುಂಭ ತೇದಿ: 29

# ರಾಶಿ ಭವಿಷ್ಯ
ಮೇಷ: ಭೋಗವಸ್ತು ವ್ಯಾಪಾರಿಗಳಿಗೆ ಉತ್ತಮ ದಿನ
ವೃಷಭ: ಸಹೋದರ-ಸಹೋದರಿಯರಿಂದ ಸಹಾಯ ಪಡೆಯುತ್ತೀರಿ. ಉತ್ತಮ ದಿನ
ಮಿಥುನ: ಸ್ಥಿರಾಸ್ತಿ ಮಾಡುವುದರಲ್ಲಿ ಆಸಕ್ತಿ ಹೊಂದುವಿರಿ
ಕಟಕ: ಆಸ್ತಿ ವಿವಾದ ಯಾವುದೇ ರೀತಿಯ ತೊಂದರೆ ಇಲ್ಲದೆ ಬಗೆಹರಿಯುತ್ತದೆ
ಸಿಂಹ: ಸಮಾಜ ಸೇವಕರಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ
ಕನ್ಯಾ: ರಾಜಕೀಯ ಮುಖಂಡರ ಜೊತೆ ಕಾದಾಟವಾಗಬಹುದು
ತುಲಾ: ಹೆಂಡತಿಯ ಕಡೆಯಿಂದ ಆಸ್ತಿ ಬರುವ ಸಂಭವವಿದೆ
ವೃಶ್ಚಿಕ: ದಾಂಪತ್ಯದಲ್ಲಿ ವಿರಸ ಕಂಡುಬರಬಹುದು
ಧನುಸ್ಸು: ನ್ಯಾಯಾಲಯದಲ್ಲಿನ ತೀರ್ಪು ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ
ಮಕರ: ಪ್ರೇಮಿಗಳಿಗೆ ಉತ್ತಮವಾದ ದಿನ
ಕುಂಭ: ಭೋಗವಸ್ತು ಖರೀದಿಯಿಂದ ಹಣ ವ್ಯಯವಾಗುತ್ತದೆ. ಅಶುಭ ವಾರ್ತೆ ಕೇಳುವಿರಿ
ಮೀನ: ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments