ಇಂದಿನ ಪಂಚಾಂಗ ಮತ್ತು ರಾಶಿಫಲ (13-03-2020-ಶುಕ್ರವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಒಳ್ಳೆಯ ರೂಪವಂತನೂ, ನಿಃಸ್ಪೃಹನೂ, ವಾಗ್ಮಿಯೂ, ಅನೇಕ ಶಾಸ್ತ್ರಗಳಲ್ಲಿ ಪರಿಶ್ರಮವುಳ್ಳವನೂ ಮತ್ತೊಬ್ಬರ ಮನಸ್ಸನ್ನರಿಯಬಲ್ಲವನೂ ಆದಂತಹ ದೂತನನ್ನು ರಾಜನು ಬಯಸುತ್ತಾನೆ.  –ಪಂಚತಂತ್ರ

# ಪಂಚಾಂಗ :ಶುಕ್ರವಾರ , 13.03.2020
ಸೂರ್ಯ ಉದಯ ಬೆ.06.28 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.1.15 / ಚಂದ್ರ ಅಸ್ತ ಬೆ.9.24
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ಚತುರ್ಥಿ (ಬೆ.8.51) ನಕ್ಷತ್ರ: ಸ್ವಾತಿ (ಮ.2.00) ಯೋಗ:ವ್ಯಾಘಾತ (ರಾ.8.35)ಕರಣ: ಬಾಲವ-ಕೌಲವ
(ಬೆ.8.51-ರಾ.7.30) ಮಾಸ: ಕುಂಭ ಮಾಸ ತೇದಿ: 30

# ರಾಶಿ ಭವಿಷ್ಯ
ಮೇಷ: ಯಾವುದೇ ತೊಂದರೆ ಇಲ್ಲದೆ ಗುರಿ ತಲುಪುತ್ತೀರಿ
ವೃಷಭ: ಪತಿ-ಪತ್ನಿಯರ ನಡುವೆ ಸಾಮರಸ್ಯ ಕಡಿಮೆ
ಮಿಥುನ: ಸ್ನೇಹಿತರು ನಿಮ್ಮನ್ನು ಹೀಯಾಳಿಸಬಹುದು
ಕಟಕ: ಬಂಧು-ಮಿತ್ರರಲ್ಲಿ ಅನ್ಯೋನ್ಯತೆ ಕಂಡುಬರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ
ಸಿಂಹ: ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿರಿ
ಕನ್ಯಾ: ಉನ್ನತ ವ್ಯಕ್ತಿಗಳ ಪರಿಚಯದಿಂದ ಲಾಭವಾಗಬಹುದು
ತುಲಾ: ನೆರೆಹೊರೆಯವರಲ್ಲಿ ಒಮ್ಮತ ಮೂಡುತ್ತದೆ
ವೃಶ್ಚಿಕ: ಸ್ಥಿರಾಸ್ತಿ ವಿಷಯದಲ್ಲಿ ಗುಪ್ತ ಮಾತುಕತೆ ನಡೆಯುತ್ತದೆ
ಧನುಸ್ಸು: ಸರ್ಕಾರಿ ನೌಕರರಿಗೆ ಸ್ಥಳ ಬದಲಾವಣೆ ಯಾಗಬಹುದು. ದೂರ ಪ್ರಯಾಣ ಸಾಧ್ಯತೆ
ಮಕರ: ಸ್ತ್ರೀ ಮೂಲಕ ಹಣ ವ್ಯಯವಾಗಬಹುದು
ಕುಂಭ: ಯಾರ ಮೇಲೂ ಅವಲಂಬಿತರಾಗಬೇಡಿ
ಮೀನ: ಧೈರ್ಯದಿಂದ ಮುನ್ನುಗ್ಗಿದರೆ ಕೆಲಸದಲ್ಲಿ ಜಯ ದೊರೆಯುತ್ತದೆ. ಉತ್ತಮ ಭಾಷಣ ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments