ಇಂದಿನ ಪಂಚಾಂಗ ಮತ್ತು ರಾಶಿಫಲ (15-03-2020-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅಕ್ಷರಗಳನ್ನು (ವಿದ್ಯೆಯನ್ನು) ಪರೀಕ್ಷಿಸಿ ನೋಡೋಣವಾಗಲಿ. ವಸ್ತ್ರಗಳ ಆಡಂಬರದಿಂದೇನು? ಶಿವನು ಬಟ್ಟೆಯಿಲ್ಲದ ದಿಗಂಬರನೆನಿಸಿದ್ದರೂ ಸರ್ವಜ್ಞನೆನಿಸಿಲ್ಲವೆ?
-ಅಪ್ಪಯ್ಯದೀಕ್ಷಿತರು

# ಪಂಚಾಂಗ :ಭಾನುವಾರ, 15.03.2020
ಸೂರ್ಯ ಉದಯ ಬೆ.06.27 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.03.11 / ಚಂದ್ರ ಅಸ್ತ ಬೆ.11.04
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ಸಪ್ತಮಿ (ರಾ.03.20) ನಕ್ಷತ್ರ: ಅನೂರಾಧ (ಬೆ.11.23) ಯೋಗ: ವಜ್ರ (ಮ.03.16)
ಕರಣ: ಭದ್ರೆ-ಭವ (ಮ.03.47-ರಾ.03.20) ಮಳೆ ನಕ್ಷತ್ರ: ಪೂರ್ವಾಭಾದ್ರ ಮಾಸ: ಮೀನ ತೇದಿ: 02

# ರಾಶಿ ಭವಿಷ್ಯ
ಮೇಷ: ವಿದ್ಯಾರ್ಥಿಗಳು ವಿದ್ಯೆಯಲ್ಲಿ ಜಯ ಗಳಿಸುವರು. ಉತ್ತಮಭಾಷಣ ಮಾಡುವಿರಿ
ವೃಷಭ: ವ್ಯಾಪಾರ, ವ್ಯವಹಾರದಲ್ಲಿ ಮುನ್ನಡೆ ಸಾಧಿಸುವಿರಿ. ಗೌರವ ದೊರೆಯುವುದು
ಮಿಥುನ: ಸರ್ಕಾರಿ ಕೆಲಸ-ಕಾರ್ಯಗಳಲ್ಲಿ ಬಡ್ತಿ ದೊರೆಯಬಹುದು
ಕಟಕ: ಸಹೋದರ ಸಹೋದರಿಯರಲ್ಲಿ ವೈರತ್ವ ಉಂಟಾಗಬಹುದು
ಸಿಂಹ: ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಕಾಣುವಿರಿ
ಕನ್ಯಾ: ಜಾಸ್ತಿ ಕೋಪ ಮಾಡಿಕೊಳ್ಳಬೇಡಿ
ತುಲಾ: ಆವಶ್ಯಕ ವಸ್ತುಗಳಿಂದ ಸಂತೋಷವೂ ಸಿಗಲಿದೆ
ವೃಶ್ಚಿಕ: ಅಧಿಕಾರದಲ್ಲಿ ಪ್ರಭಾವ ಹೆಚ್ಚಬಹುದು
ಧನುಸ್ಸು: ಶತೃಗಳ ಮೇಲೆ ಜಯ ಸಾಧಿಸುವಿರಿ
ಮಕರ: ಸ್ನೇಹಿತರಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ
ಕುಂಭ: ಅನಾವಶ್ಯಕವಾಗಿ ಹಣ ಖರ್ಚಾಗುವುದು
ಮೀನ: ಪತ್ನಿಯಿಂದ ಖರ್ಚು ಹೆಚ್ಚುವುದು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments