ಇಂದಿನ ಪಂಚಾಂಗ ಮತ್ತು ರಾಶಿಫಲ (16-03-2020-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಮಾಗಮವು ವಿಯೋಗ ವಾಗುವುದೆಂಬ ಸಂಭವವನ್ನು ಸೂಚಿಸುತ್ತದೆ; ತಪ್ಪಿಸಿಕೊಳ್ಳಲಾರದ ಸಾವಿನ ಬರುವಿಕೆಯನ್ನು ಹುಟ್ಟು ಸೂಚಿಸುವಂತೆ. –ಹಿತೋಪದೇಶ

# ಪಂಚಾಂಗ :ಸೋಮವಾರ, 16.03.2020
ಸೂರ್ಯ ಉದಯ ಬೆ.06.26 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.04.13 / ಚಂದ್ರ ಅಸ್ತ ಬೆ.11.56
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ಅಷ್ಟಮಿ (ರಾ.03.00) ನಕ್ಷತ್ರ: ಜ್ಯೇಷ್ಠ (ಬೆ.11.12) ಯೋಗ: ಸಿದ್ಧಿ (ಮ.01.31)
ಕರಣ: ಬಾಲವ-ಕೌಲವ (ಮ.03.04-ರಾ.03.00) ಮಳೆ ನಕ್ಷತ್ರ: ಪೂರ್ವಾಭಾದ್ರ ಮಾಸ: ಮೀನ ತೇದಿ: 03

# ರಾಶಿ ಭವಿಷ್ಯ
ಮೇಷ: ಸರ್ಕಾರಿ ನೌಕರರಿಗೆ ಹಾಗೂ ರಾಜಕಾರಣಿ ಗಳಿಗೆ ಬಡ್ತಿ ದೊರೆಯುವ ಅವಕಾಶಗಳಿವೆ
ವೃಷಭ: ನಿಮ್ಮ ಕೆಲವು ಕಾರ್ಯಗಳಲ್ಲಿ ಜಯ ಸಿಗಲಿದೆ
ಮಿಥುನ: ಗೃಹದಲ್ಲಿ ಶುಭ ಸಮಾರಂಭಗಳು ನಡೆ ಯುವ ಸಾಧ್ಯತೆಗಳಿವೆ. ಕೀರ್ತಿಗೌರವ ಲಭಿಸುವುದು
ಕಟಕ: ಕಾರ್ಮಿಕರಿಗೆ ನಷ್ಟಸಂಭವ ಜಾಸ್ತಿ
ಸಿಂಹ: ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿದರೆ ಉತ್ತಮ
ಕನ್ಯಾ: ವಿದ್ಯಾರ್ಥಿಗಳು ವಿದ್ಯೆ ಯಲ್ಲಿ ಆಸಕ್ತಿ ಹೊಂದುವರು
ತುಲಾ: ದಾಂಪತ್ಯ ಜೀವನ ಸುಖಮಯವಾಗಿರುವುದು
ವೃಶ್ಚಿಕ: ನೀವು ಪ್ರಯತ್ನಿಸಿದ ಕೆಲಸ-ಕಾರ್ಯಗಳು ಕೈಗೂಡಬಹುದು
ಧನುಸ್ಸು: ಶತ್ರುಗಳಿಂದ ದೂರವಿರಿ. ಖರ್ಚು ಹೆಚ್ಚುವುದು
ಮಕರ: ಸ್ನೇಹಿತರಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ
ಕುಂಭ: ಪ್ರಯಾಣದಿಂದ ಹೆಚ್ಚು ಲಾಭವಿದೆ
ಮೀನ: ಹಿರಿಯರಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments