ಇಂದಿನ ಪಂಚಾಂಗ ಮತ್ತು ರಾಶಿಫಲ (19-03-2020-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕ್ರೂರವಾದ ಮಾತುಗಳಿಂದ ನೋಯಿ ಸಲ್ಪಟ್ಟಾಗ್ಯೂ ಮನಸ್ಸು ವಿಕಾರವನ್ನು ಹೊಂದುವುದಿಲ್ಲ. ಹುಲ್ಲಿನ ದೊಂದೆಯ ಬೆಂಕಿಯಿಂದ ಸಾಗರದ ನೀರನ್ನು ಕಾಯಿಸುವುದಕ್ಕಾಗುವುದಿಲ್ಲವಷ್ಟೇ..?  –ಹಿತೋಪದೇಶ

# ಪಂಚಾಂಗ :ಗುರುವಾರ, 19.03.2020
ಸೂರ್ಯ ಉದಯ ಬೆ.06.24 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ಬೆ.07.19 / ಚಂದ್ರ ಅಸ್ತ ಮ.02.36
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ಏಕಾದಶಿ (ನಾ.ಬೆ.06.00) ನಕ್ಷತ್ರ: ಉತ್ತರಾಷಚಾಢ (ಮ.02.50) ಯೋಗ: ಪರಿಘ(ಬೆ.11.38)
ಕರಣ: ಭವ-ಬಾಲವ (ಸಾ.05.10-ನಾ.ಬೆ.06.00) ಮಳೆ ನಕ್ಷತ್ರ: ಉತ್ತರಾಭಾದ್ರ ಮಾಸ: ಮೀನ ತೇದಿ: 06

# ರಾಶಿ ಭವಿಷ್ಯ
ಮೇಷ: ಧಾರ್ಮಿಕ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡು ವಿರಿ. ಪ್ರಯತ್ನಗಳಿಂದ ಮಾತ್ರ ಕಾರ್ಯ ಸಾಧನೆ ಸಾಧ್ಯ
ವೃಷಭ: ಆಸ್ತಿ ವಿವಾದ ಉಲ್ಬಣಗೊಂಡು ಕುಟುಂಬ ದಲ್ಲಿ ನೆಮ್ಮದಿ ಹಾಳಾಗುತ್ತದೆ. ಹಿತಶತ್ರುಗಳು ಜಾಸ್ತಿ
ಮಿಥುನ: ಅಶ್ರದ್ಧೆ, ಅಜಾಗರೂಕತೆಯಿಂದ ಕಾರ್ಯ ದಲ್ಲಿ ತೀವ್ರ ಹಿನ್ನಡೆಯಾಗುತ್ತದೆ
ಕಟಕ: ವಿದ್ಯಾರ್ಥಿಗಳು ಓದಿನಲ್ಲಿ ಶ್ರಮ ವಹಿಸಿದರೆ ಪ್ರಗತಿ ಕಾಣಬಹುದು
ಸಿಂಹ: ತಂದೆ-ತಾಯಿ ಆರೋಗ್ಯ ದಲ್ಲಿ ಏರುಪೇರಾಗಲಿದೆ
ಕನ್ಯಾ: ಆಕಸ್ಮಿಕ ಘಟನೆಯೊಂದು ನಡೆದು ಗೊಂದಲಕ್ಕೆ ಸಿಲುಕುವಿರಿ
ತುಲಾ: ವಾದ-ವಿವಾದಗಳಿಂದ ಮನಸ್ತಾಪವಾಗಬಹುದು
ವೃಶ್ಚಿಕ: ಸಾಲ ಮಾಡುವ ಅಗತ್ಯ ಕಂಡುಬರುತ್ತದೆ
ಧನುಸ್ಸು: ಬಂಧು-ಬಾಂಧವರಿಂದ ವಿರೋಧ
ಮಕರ: ವೃತ್ತಿಯಲ್ಲಿ ಹಿನ್ನಡೆಯಾಗುತ್ತದೆ
ಕುಂಭ: ಆಸ್ತಿ, ವಾಹನಗಳನ್ನು ಮಾರಬಹುದು
ಮೀನ: ಹಣಕಾಸಿನ ವಿಷಯದಲ್ಲಿ ಜಾಗ್ರತೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments