ಇಂದಿನ ಪಂಚಾಂಗ ಮತ್ತು ರಾಶಿಫಲ (22-03-2020-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅಕಸ್ಮಾತ್ತಾಗಿ ಬಂದ ಲಾಭದಿಂದ ತೃಪ್ತನಾದ ಬ್ರಾಹ್ಮಣನ ತೇಜಸ್ಸು ಬೆಳೆಯುತ್ತದೆ. ಅತೃಪ್ತಿಯಿದ್ದರೆ ಆ ತೇಜಸ್ಸು, ನೀರಿನಿಂದ ಬೆಂಕಿಯು ಶಾಂತವಾದಂತೆ ಶಾಂತವಾಗುತ್ತದೆ.  -ಭಾಗವತ

# ಪಂಚಾಂಗ :ಭಾನುವಾರ, 22.03.2020
ಸೂರ್ಯ ಉದಯ ಬೆ.06.22 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ಬೆ.10.17/ ಚಂದ್ರ ಅಸ್ತ ಸಂ.05.05
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /
ತಿಥಿ: ತ್ರಯೋದಶಿ (ಬೆ.10.08) ನಕ್ಷತ್ರ: ಶತಭಿಷ (ರಾ.10.27) ಯೋಗ: ಸಾಧ್ಯ (ಮ.01.02)
ಕರಣ: ವಣಿಜ್-ಭದ್ರೆ (ಬೆ.10.08-ರಾ.11.19) ಮಳೆ ನಕ್ಷತ್ರ: ಉತ್ತರಾಭಾದ್ರ ಮಾಸ: ಮೀನ ತೇದಿ: 09

# ರಾಶಿ ಭವಿಷ್ಯ
ಮೇಷ: ರಾಜಕೀಯದಲ್ಲಿರುವವರಿಗೆ ಉತ್ತಮ ಅಧಿಕಾರ ಪ್ರಾಪ್ತಿ. ಉತ್ತಮ ಭಾಷಣ ಮಾಡುವಿರಿ
ವೃಷಭ: ವಾಕ್‍ಚಾತುರ್ಯ ಉತ್ತಮವಾಗಿರುತ್ತದೆ
ಮಿಥುನ: ಪರರು ನಿಮ್ಮನ್ನು ಎಡೆಬಿಡದೆ ಕಾಡುವರು
ಕಟಕ: ಹಿತಶತ್ರುಗಳಿಂದ ತೊಂದರೆಯಾಗಲಿದೆ
ಸಿಂಹ: ಅನಿರೀಕ್ಷಿತವಾಗಿ ವಂಚನೆ ಪ್ರಕರಣದಲ್ಲಿ ಸಿಲುಕುವಿರಿ
ಕನ್ಯಾ: ಪಿತ್ರಾರ್ಜಿತ ಆಸ್ತಿ ನಿಮ್ಮ ವಶಕ್ಕೆ ಬರಬಹುದು
ತುಲಾ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು
ವೃಶ್ಚಿಕ: ಧಾರ್ಮಿಕ ವಿರೋಧ ನೀತಿಯನ್ನು ಅನುಸರಿಸುವಿರಿ
ಧನುಸ್ಸು: ಆರೋಗ್ಯದಲ್ಲಿ ತೊಂದರೆಯಾಗಬಹುದು
ಮಕರ: ಹಲವು ದಿನಗಳಿಂದ ತಂದೆ-ಮಗನ ನಡುವೆ ಇದ್ದ ಭಿನ್ನಾಭಿ ಪ್ರಾಯ ಶಮನವಾಗುತ್ತದೆ
ಕುಂಭ: ಕುಟುಂಬದಲ್ಲಿ ಸಂತೋಷ ತುಂಬಿರುತ್ತದೆ
ಮೀನ: ಉದ್ಯೋಗದಲ್ಲಿ ಕೀರ್ತಿ ದೊರೆಯುತ್ತದೆ. ಹೊಸ ಆದಾಯದ ಮೂಲ ಕಂಡುಕೊಳ್ಳುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments