ದಲಿತ ಸಂಘಟನೆಗಳ ಪ್ರತಿಭಟನೆ, ಸಚಿವ ಪ್ರಿಯಾಂಕ್‍ಖರ್ಗೆಗೆ ಮನವಿ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.25- ಕಳೆದ ಎರಡು ವರ್ಷಗಳಿಂದ ಯಾವುದೇ ಯೋಜನೆಗಳನ್ನು ಅನುಷ್ಠಾನಕ್ಕೆ ತರದೆ ಅಧಿಕಾರಿಗಳು ಲಂಚ ಕೊಟ್ಟವರಿಗೆ ಮಾತ್ರ ಮಂಜೂರಾತಿ ಮಾಡುತ್ತಿದ್ದಾರೆ ಹಾಗೂ ಪೂರಕ ದಾಖಲೆಗಳನ್ನು ಸಲ್ಲಿಸಿ ನಿಗಮಕ್ಕೆ ನಿರ್ದಿಷ್ಟ ಹಣ ಕಟ್ಟಿದವರಿಗೂ ಯಾವುದೇ ಯೋಜನೆಗಳನ್ನು ಮಂಜೂರು ಮಾಡದೆ ಇರುವುದನ್ನು ಖಂಡಿಸಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರ ಮನೆಯ ಮುಂದೆ ದಲಿತ ಸಂಘಟನೆಗಳು ಧರಣಿ ನಡೆಸಿದವು.

ದಲಿತ ಸಂಘರ್ಷ ಸಮಿತಿ (ಜಾಗೃತವಾದ), ದಲಿತ ಪ್ರಗತಿಪರ ಜ್ಯಾತಾತೀತ ಸಂಘಟನೆಗಳ ಒಕ್ಕೂಟ ಹಾಗೂ ದಲಿತ ವಿಮೋಚನಾ ಶಕ್ತಿ ಸಂಘಟನೆಗಳ ಐದು ನೂರಕ್ಕೂ ಹೆಚ್ಚು ಮಂದಿ ಧರಣಿ ನಡೆಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಖಾಯಂ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘಟನೆಗಳ ಮುಖಂಡ ಗೋ.ವಾ.ದೇವದಾಸ್, ಪ್ರಧಾನ ಕಾರ್ಯದರ್ಶಿ ದಲಿತ ಸಂಘರ್ಷ ಸಮಿತಿ (ಜಾಗೃತವಾದ), ದಲಿತ ವಿಮೋಚನಾ ಶಕ್ತಿ ಸಂಸ್ಥಾಪಕ ರಾಜ್ಯಧ್ಯಕ್ಷ ಮಂಜುನಾಥ್, ದಲಿತ ಪ್ರಗತಿಪರ ಜ್ಯಾತಾತೀತ ಸಂಘಟನೆಗಳ ಒಕ್ಕೂಟದ ರಾಮಮೂರ್ತಿ ಮತ್ತಿತರರು ಭಾಗವಹಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ