ಡಿಸಿ ಅನುಮತಿ ಇದ್ದರೂ ದೇಗುಲದ ಗೇಟ್ ಮುಚ್ಚಿ  ಮದುವೆಗೆ ಅಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ಭೂಪಾಲ್,ನ.22(ಪಿಟಿಐ)- ದೇವಸ್ಥಾನದಲ್ಲಿ ಮದುವೆಯಾಗಲು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದಿದ್ದರೂ ದೇವಸ್ಥಾನದ ಒಳ ಪ್ರವೇಶಿಸಲು ಮುಂದಾದ ದಲಿತ ವರನೊಬ್ಬರನ್ನು ತಡೆದು ಅವಮಾನಿಸಿರುವ ಘಟನೆ ಬರ್ಹಾನ್‍ಪುರದಲ್ಲಿ ನಡೆದಿದೆ. ದೇವಾಲಯದಲ್ಲಿ ವಿವಾಹವಾಗಲು ಡಿಸಿಯಿಂದ ಅನುಮತಿ ಪಡೆದುಕೊಂಡಿದ್ದೆವು.

ಅದಕ್ಕಾಗಿ ಕುಟುಂಬ ಸಮೇತ ಇಲ್ಲಿಗೆ ಬಂದಿದ್ದೆವು. ಆದರೆ ಮದುವೆ ನಡೆಯಬೇಕಿದ್ದ ಸಂದರ್ಭದಲ್ಲಿ ದೇವಾಲಯದ ಗೇಟ್‍ಗಳನ್ನು ಮುಚ್ಚಿ ಬೀಗ ಹಾಕಲಾಗಿದೆ.

ಕೆಳಜಾತಿಯವರು ದೇವಸ್ಥಾನದ ಒಳಗೆ ಹೋಗಬಾರದು. ಮೈಲಿಗೆಯಾಗುತ್ತದೆ ಎಂದು ಕೆಲವರು ಅಡ್ಡಿಪಡಿಸಿದರು ಎಂದು ದಲಿತ ವರ ಸಂದೀಪ್ ಗವಾಲೆ ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡುವುದಾಗಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‍ಡಿಎಂ) ಕಾಶಿರಾಮ್ ಬಡೋಲೆ ತಿಳಿಸಿದ್ದಾರೆ.

Facebook Comments