ಕೊಹ್ಲಿ ಪಡೆಗೆ ಕೊರೊನಾ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಏ.7- ಈ ಬಾರಿ ಕಪ್ ನಮ್ದೆ ಎಂಬ ಆತ್ಮವಿಶ್ವಾಸದೊಂದಿಗಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೊರೊನಾ ಆತಂಕವು ಬೆಂಬಿಡದಂತೆ ಕಾಡುತ್ತಿದೆ. ಆರ್‌ಸಿಬಿ ತಂಡದ ಭರವಸೆಯ ಬ್ಯಾಟ್ಸ್‍ಮನ್ ದೇವದತ್ ಪಡಿಕ್ಕಲ್ ಅವರು ಈ ಹಿಂದೆ ಕೊರೊನಾ ಪಾಸಿಟಿವ್‍ನಿಂದ ಹೋಂಕ್ವಾರಂಟೈನ್ ಆಗಿದ್ದು ಈಗ ನೆಗೆಟಿವ್ ಬಂದಿರುವುದರಿಂದ ತಂಡವನ್ನು ಕೂಡಿಕೊಂಡಿರುವ ಬೆನ್ನಲ್ಲೇ ಆ ತಂಡದ ಭರವಸೆಯ ಅಲೌಂಡರ್ ಆಸ್ಟ್ರೇಲಿಯಾದ ಡೇನಿಯಲ್ ಸ್ಯಾಮ್ಸ್ ಅವರು ಕೊರೊನಾ ಪಾಸಿಟಿವ್‍ನಿಂದ ಬಳಲುತ್ತಿದ್ದಾರೆ.

ಏಪ್ರಿಲ್ 3 ರಂದು ಆಸ್ಟ್ರೇಲಿಯಾದಿಂದ ಚೆನ್ನೈಗೆ ಬಂದಿಳಿದ ಡೇನಿಯಾಲ್ ಸ್ಯಾಮ್ಸ್ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ವರದಿ ಬಂದಿತ್ತು, ಐಪಿಎಲ್ ಸಮೀಪಿಸುತ್ತಿರುವ ಬೆನ್ನಲ್ಲೇ ಮತ್ತೆ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ಡೇನಿಯಾಲ್ ಸ್ಯಾಮ್ಸ್ ಅವರು ಕಳೆದ ಬಾರಿ ಡೆಲ್ಲಿಕ್ಯಾಪಿಟಲ್ಸ್ ತಂಡದಲ್ಲಿ ಗುರುತಿಸಿಕೊಂಡಿದ್ದರು.

Facebook Comments