ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

ಧರ್ಮಸ್ಥಳ :  ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ, ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ 87ನೇ ಅಧಿವೇಶನ ಇಂದಿನಿಂದ ನ.26ರವರೆಗೆ ನಡೆಯಲಿದೆ.

ನಾಳೆ ಹೊಸಕಟ್ಟೆ ಉತ್ಸವ, 23ರಂದು ಕೆರೆಕಟ್ಟೆ ಉತ್ಸವ, 24ರಂದು ಲಲಿತೋದ್ಯಾನ ಉತ್ಸವ, ನ.25ರಂದು ಕಂಚಿ ಮಾರುಕಟ್ಟೆ ಉತ್ಸವ ನ.26 ರಂದು ಗೌರಿಮಾರುಕಟ್ಟೆ ಉತ್ಸವ, ನ.27ರಂದು ಶ್ರಿ Zಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ನಡೆಯಲಿದೆ.

ನ.25ರಂದು ಸಂಜೆ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮಸಮ್ಮೇಳನ ನಡೆಯಲಿದ್ದು, ನಿಕಟಪೂರ್ವ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಉದ್ಘಾಟಿಸಲಿದ್ದಾರೆ. ಇಂಡಿಯನ್ ಲೈಫ್‍ಸ್ಟೈಲ್ ಕೋಚ್ ಇಸ್ಮಾನ್ ಗೌರ್ ಗೋಪಾಲದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ.

ಪೋಕಸ್ ಅಕಾಡೆಮಿ ಜೀವನ ಕೌಶಲ ಮತ್ತು ಉದ್ಯಮಿಶೀಲ ಸಂಸ್ಥೆ ಮೈಸೂರು ಇದರ ಮುಖ್ಯ ಕಾರ್ಯ ನಿರ್ವಾಹಕ ಡಿ.ಟಿ.ರಾಮಾನುಜಮ್ ಜೀವನ ಮತ್ತು ಧರ್ಮ ಎಂಬ ವಿಷಯದ ಕುರಿತು, ದಿ ಟೈಮ್ಸ್ ಗ್ರೂಪ್‍ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಕದ್ರಿ ನವನೀತ ಶೆಟ್ಟಿ, ರಾಜಕೀಯ ಮತ್ತು ಭಾರತೀಯ ಸಿದ್ದಾಂತ ಎಂಬ ವಿಷಯದ ಕುರಿತು, ಖ್ಯಾತ ಸಾಹಿತಿ ಬೋಳುವಾರ್ ಮಹಮದ್ ಕುಂಞ ಅವರಿಂದ ಗಾಂಧಿ ಎಂಬ ಪ್ರವಾದಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಕಲಾಶ್ರೀ, ಗಾನ ಕಲಾಭೂಷಣ, ಸಂಗೀತ ಸರಸ್ವತಿ ವಿದ್ವಾನ್ ಡಾ.ಕೆ.ವಾಗೀಶ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ವಿಧುಷಿ ವಾಣಿ ಗೋಪಾಲ್ ಮತ್ತು ತಂಡ ದೃಷ್ಠಿ ಮಂಗಳೂರು ಇವರಿಂದ ಸಮೂಹ ನೃತ್ಯ ನಡೆಯಲಿದೆ.

ನ.26ರಂದು ಸಂಜೆ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯಸಮ್ಮೇಳನ ನಡೆಯಲಿದ್ದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಉದ್ಘಾಟಿಸಲಿದ್ದಾರೆ. ಜನಪದ ವಿದ್ವಾಂಸ, ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಖ್ಯಾತಸಾಹಿತಿ ಶ್ರೀಧರ ಬಳಗಾರ, ಕುಮಟ ಅವರಿಂದ ಸಾಹಿತ್ಯ ಮತ್ತು ವಿಶ್ವಮಾನವ ಪ್ರಜ್ಞಾ ಎಂಬ ವಿಷಯದ ಕುರಿತು, ಖ್ಯಾತ ಸಾಹಿತಿ ವೀಣಾ ಬನ್ನಂಜೆ, ಉಡುಪಿ ಅವರಿಂದ ಅಕ್ಷರ ಪ್ರಪಂಚ ಮತ್ತು ಸತ್ಯದರ್ಶನ ಎಂಬ ವಿಷಯದ ಕುರಿತು, ಖ್ಯಾತ ವಾಗ್ಮಿ ರಿಚರ್ಡ್ ಲೂಯಿಸ್, ಬೆಂಗಳೂರು ಅವರಿಂದ ರಂಗಭೂಮಿಯಲ್ಲಿ ಹಾಸ್ಯ ಎಂಬ ವಿಷಯದ ಕುರಿತು ಉಪನ್ಯಾಸದ ನೀಡಲಿದ್ದಾರೆ.

ನ.27 ರಂದು ಸಂಜೆ 6.30ರಿಂದ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ.

Facebook Comments