ಗಲಾಟೆ ಮಾಡದೇ ‘ಕುರುಕ್ಷೇತ್ರ’ ನೋಡಿ ಎಂದು ಅಭಿಮಾನಿಗಳಿಗೆ ದರ್ಶನ್ ಚಾಲೆಂಜ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.2-ಮುನಿರತ್ನ ಕುರುಕ್ಷೇತ್ರ ಚಲನಚಿತ್ರದ ಫೋಸ್ಟರ್‍ನಲ್ಲಿ ಯಾವ ನಟರ ಹೆಸರಿಲ್ಲವೆಂದು ಅಭಿಮಾನಿಗಳು ಗೊಂದಲ ಮಾಡಿಕೊಳ್ಳದೆ ಪ್ರೀತಿಯಿಂದ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಬೇಕೆಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ್ದಾರೆ.

ಜು.8ಕ್ಕೆ ಮುನಿರತ್ನ ಕುರುಕ್ಷೇತ್ರದ ಆಡಿಯೋ ರಿಲೀಸ್ ಆಗಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಆದರೆ ಫೋಸ್ಟರ್‍ನಲ್ಲಾಗಲಿ, ಆಡಿಯೋ ರಿಲೀಸಾಗುವ ಜಾಹೀರಾತಿನಲ್ಲಾಗಲಿ ಯಾವುದೇ ಚಿತ್ರನಟರ ಹೆಸರು ಮುದ್ರಿತವಾಗಿಲ್ಲ.

ಈ ಚಿತ್ರದಲ್ಲಿ ದರ್ಶನ್ ದುರ್ಯೋಧನ ಪಾತ್ರದಲ್ಲಿ ನಟಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಪಾತ್ರ ಮಾಡಿದ್ದಾರೆ. ಕರ್ಣನ ಪಾತ್ರದಲ್ಲಿ ಅರ್ಜುನ್‍ಸರ್ಜಾ, ಭೀಷ್ಮನ ಪಾತ್ರದಲ್ಲಿ ರೆಬೆಲ್‍ಸ್ಟಾರ್ ಅಂಬರೀಶ್, ಕೃಷ್ಣನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹೀಗೆ…. ಘಟಾನುಘಟಿ ನಟರು ಮುನಿರತ್ನ ಕುರುಕ್ಷೇತ್ರದಲ್ಲಿ ಅಭಿನಯಿಸಿದ್ದಾರೆ.

ನಿಖಿಲ್ ಸೇರಿದಂತೆ ಎಲ್ಲಾ ಕಲಾವಿದರು ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಹಾಗಾಗಿ ಫೋಸ್ಟರ್‍ನಲ್ಲಾಗಲಿ, ಜಾಹೀರಾತಿನಲ್ಲಾಗಲಿ ಯಾವುದೇ ನಟರ ಹೆಸರು ಹಾಕಿಲ್ಲವೆಂದು ಅಭಿಮಾನಿಗಳು ಗೊಂದಲ ಸೃಷ್ಟಿಸಬಾರದು, ಗಲಾಟೆ ಮಾಡಬಾರದು. ಚಿತ್ರ ಮಂದಿರಕ್ಕೇ ಬಂದು ಅಭಿಮಾನಿಗಳು ಶಾಂತಿಯುತವಾಗಿ ಚಲನಚಿತ್ರ ವೀಕ್ಷಿಸಿದರೆ ಅದೇ ಒಂದು ಚಾಲೆಂಜ್ ಎಂದು ದರ್ಶನ್ ಫೇಸ್‍ಬುಕ್‍ನಲ್ಲಿ ಟ್ವೀಟ್ ಮಾಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ