ಕುರುಕ್ಷೇತ್ರದಲ್ಲಿ 50ರ ಗಮ್ಮತ್ತು..!

ಈ ಸುದ್ದಿಯನ್ನು ಶೇರ್ ಮಾಡಿ

ಚಾಲೆಂಜಿಂಗ್‍ಸ್ಟಾರ್ ದರ್ಶನ್ ನಟಿಸಿರುವ ಮೊದಲ ಪೌರಾಣಿಕ ಚಿತ್ರ ಕುರುಕ್ಷೇತ್ರದಲ್ಲಿ 50 ರ ಗಮ್ಮತ್ತು ಮೇಳೈಸಿದೆ.  ಚಾಲೆಂಜಿಂಗ್‍ಸ್ಟಾರ್ ದರ್ಶನ್‍ರ ಚಿತ್ರ ಜೀವನದ 50ನೆ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಲು ದಚ್ಚು ಅಭಿಮಾನಿಗಳು ಪ್ಲಾನ್ ಮಾಡಿದ್ದಾರೆ.

ನಾಳೆ ಕುರುಕ್ಷೇತ್ರ ಚಿತ್ರ ಬಿಡುಗಡೆ ಯಾಗಲಿದ್ದು ಈ ಸಂದರ್ಭದಲ್ಲಿ ಮಂಡ್ಯದಲ್ಲಿ ಇಂಡುವಾಳು ಸಚ್ಚಿದಾನಂದ ಹಿತೈಷಿಗಳ ಬಳಗದಿಂದ ರಕ್ತದಾನ, ಉತ್ತರ ಕರ್ನಾಟಕದ ಬರ ಪೀಡಿತರಿಗೆ ನೂರು ಕ್ವಿಂಟಾಲ್ ಅಕ್ಕಿ ತಲುಪಿಸುವ ಯೋಜನೆಯನ್ನು ಹಮ್ಮಿಕೊಂಡಿ ದ್ದಾರೆ. ಇದೇ ಸಂದರ್ಭದಲ್ಲಿ ಮಂಡ್ಯದ ಪ್ರಮುಖ ಬೀದಿ ಗಳಲ್ಲಿ 50 ಜೋಡೆತ್ತುಗಳು, 50 ಆಟೋ, 50 ಟ್ರ್ಯಾಕ್ಟರ್, 50 ಬೈಕ್, 50 ಬಗೆಯ ಜಾನಪದ ತಂಡಗಳು ಭಾಗವಹಿಸಲಿವೆ.

ಕುರುಕ್ಷೇತ್ರ ಬಿಡುಗಡೆಯಾ ಗಲಿರುವ ಪ್ರಮುಖ ಚಿತ್ರಮಂದಿರದ ಮುಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್‍ರ 50 ಅಡಿ ಉದ್ದದ ಕಟೌಟ್, ಚಿತ್ರವನ್ನು ವೀಕ್ಷಿಸಲು ಬರುವ 50 ಲಾಡುಗಳನ್ನು ವಿತರಿಸಲು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಸಂಘಗಳು ತೀರ್ಮಾನಿಸಿವೆ.

ಮುನಿರತ್ನ ನಿರ್ಮಾಣದ ಅದ್ಧೂರಿ ಚಿತ್ರವಾದ ಕುರುಕ್ಷೇತ್ರವು ಇಂದು ಮಧ್ಯರಾತ್ರಿಯಿಂದಲೇ ಪ್ರದರ್ಶನ ಪ್ರಾರಂಭಿಸಲಿದ್ದು, 4 ದಿನಗಳ ಎಲ್ಲಾ ಷೋಗಳು ಪುಲ್‍ಬುಕ್ ಆಗಿದೆ.

Facebook Comments