ಜನರಲ್ಲಿ ಮನವಿ ಮಾಡಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.22- ಆರ್ಥಿಕತೆಯ ಕಾರಣಕ್ಕಾಗಿ ಲಾಕ್ ಡೌನ್ ಮುಕ್ತಗೊಳಿಸಲಾಗಿದೆ. ಕೊರೊನಾ ಹೋಗಿಬಿಟ್ಟಿದೆ, ನಾವು ಸುರಕ್ಷಿತವಾಗಿದ್ದೇವೆ ಎಂಬ ಕಾರಣಕ್ಕೆ ಅಲ್ಲ. ನಿಮ್ಮ ಕುಟುಂಬಕ್ಕೆ ನಿಮ್ಮ ಅಗತ್ಯ ಇದೆ. ಕೋವಿಡ್ ಸುರಕ್ಷಾತ ನಿಯಮಗಳನ್ನು ಪಾಲನೆ ಮಾಡಿ ಎಂದು ಚಾಲೆಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಇಂಗ್ಲಿಷ್ ನಲ್ಲಿ ಟ್ವಿಟ್ ಮಾಡಿರುವ ಅವರು, ಆರ್ಥಿಕತೆ ಸುಧಾರಣೆಗಾಗಿ ಲಾಕ್ ಡೌನ್ ತೆಗೆಯಲಾಗುತ್ತಿದೆ. ನಾವೇಲ್ಲಾ ಇನ್ನೂ ಸುರಕ್ಷಿತವಾಗಿಲ್ಲ ಎಂಬುದನ್ನು ಮರೆಯಬೇಡಿ.ದಯವಿಟ್ಟು ಮಾಸ್ಕ್ ಧರಿಸಿ, ಕೈಗಳನ್ನು ತೊಳೆಯಿರಿ, ಸಾಮಾಜಿಕ ಅಂತರವನ್ನು ಕಾಪಾಡಿ, ಜನಸಂದಣಿಯಿಂದ ದೂರ ಇರಿ, ಸುರಕ್ಷಿತವಾಗಿರಿ. ನಿಮ್ಮ ಅಗತ್ಯ ನಿಮ್ಮ ಕುಟುಂಬಕ್ಕಿದೆ ಎಂದು ಹೇಳಿದ್ದಾರೆ.

ಇ-ಕಾಮರ್ಸ್ ಉದ್ಯಮಿಯಾಗಿ ಬದಲಾಗಿರುವ ವಿಜಯಲಕ್ಷ್ಮಿ ಸುಮಾರು ಎರಡು ತಿಂಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ದರ್ಶನ್ ಅವರು ಪ್ರಾಣ ಸಂಗ್ರಹಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆದು ಅವುಗಳ ನಿರ್ಹವಣೆಗೆ ನೆರವಾಗಿ ಎಂದು ಕರೆ ನೀಡಿದ್ದರಿಂದ ಸುಮಾರು 2 ಕೋಟಿ ರೂಪಾಯಿಗಳ ದತ್ತು ದೇಣಿಗೆ ಹರಿದು ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

Facebook Comments

Sri Raghav

Admin