ದಾಸಪ್ಪ ಆಸ್ಪತ್ರೆಯಲ್ಲಿ ಲಸಿಕೆ ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.12- ಇಂದು ಬೆಂಗಳೂರು ತಲುಪಲಿರುವ ಬಹುನಿರೀಕ್ಷಿತ ಕೊರೊನಾ ಲಸಿಕೆಯನ್ನು ನಗರದ ದಾಸಪ್ಪ ಆಸ್ಪತ್ರೆಯಲ್ಲಿ ಸಂಗ್ರಹಿಸಿಡಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ 2 ಲಕ್ಷ ಲಸಿಕೆ ದಾಸಪ್ಪ ಆಸ್ಪತ್ರೆಗೆ ರವಾನೆಯಾಗಲಿದ್ದು, ಅಲ್ಲಿಂದ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರತ್ಯೇಕ ವಾಹನಗಳ ಮೂಲಕ ಸಾಗಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ವ್ಯಾಕ್ಸಿನ್ ಸಾಗಾಣಿಕೆ ಮಾಡಲು 3 ವಾಹನಗಳು ತಯಾರಾಗಿವೆ.

ಒಮ್ಮೆಲೆ 10 ಲಕ್ಷ ವ್ಯಾಕ್ಸಿನ್ ರವಾನೆ ಮಾಡುವ ವ್ಯವಸ್ಥೆಯನ್ನು ವಾಹನದಲ್ಲಿ ಕಲ್ಪಿಸಲಾಗಿರುತ್ತದೆ. ಐಸ್‍ಬಾಕ್ಸ್‍ಗಳನ್ನು ವಾಹನದೊಳಗೆ ಇಡಲಾಗಿರುತ್ತದೆ. ವಾಹನದೊಳಗಿರುವ ಉಷ್ಣಾಂಶ ವ್ಯತ್ಯಾಸವಾಗುವುದಿಲ್ಲ. ವಾಹನದ ಟೆಂಪ್ರೇಚರ್ ಕೂಡ ಯಾವುದೇ ಕಾರಣ ಬದಲಾಗುವುದಿಲ್ಲ.

ಪ್ರಾಥಮಿಕ ಕೇಂದ್ರಗಳಿಗೆ ಲಸಿಕೆ ರವಾನೆಯಾದ ನಂತರ ಈಗಾಗಲೇ ಪಟ್ಟಿ ಸಿದ್ದ ಮಾಡಿಕೊಂಡಿರುವಂತೆ ಕೊರೊನಾ ವಾರಿಯರ್ಸ್‍ಗಳಿಗೆ ಮತ್ತು ಫ್ರಂಟ್‍ಲೈನ್ ವರ್ಕರ್ಸ್ ಗಳಿಗೆ ಮೊದಲ ಹಂತದಲ್ಲಿ ಲಸಿಕೆಯನ್ನು ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಜ.16ರಿಂದ ಲಸಿಕೆ ನೀಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಕೊರೊನಾ ಲಸಿಕೆ ನೀಡುವ ಬಗ್ಗೆ ಮೂರು ಹಂತದಲ್ಲಿ ಡ್ರೈರನ್ ನಡೆಸಲಾಗಿದ್ದು, ಲಸಿಕೆ ನೀಡುವ ಸಿಬ್ಬಂದಿಗೆ ಯಾವ ರೀತಿ ಲಸಿಕೆ ನೀಡಬೇಕು ಎಂಬುದರ ಬಗ್ಗೆ ಎಲ್ಲ ರೀತಿಯ ತರಬೇತಿಯನ್ನು ನೀಡಲಾಗಿದೆ.

Facebook Comments