ದಸರಾ ಆಹಾರ ಮೇಳದಲ್ಲಿ ಈ ಬಾರಿ ಭೋಜನ ಪ್ರಿಯರಿಗೆ ಬಂಪರ್, ಬರಲಿದೆ ವಿದೇಶಿ ಖಾದ್ಯಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಸೆ.7-ದಸರಾ ಆಹಾರ ಮೇಳದಲ್ಲಿ ಈ ಬಾರಿ ಭೋಜನ ಪ್ರಿಯರು ವಿದೇಶಿ ಖಾದ್ಯವನ್ನು ಸವಿಯಬಹುದು.  ವಿಭಿನ್ನ-ವಿಶೇಷ ಆಹಾರ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಆಹಾರ ಪರಿಚಯಿಸಲು ಈ ಬಾರಿ ಜಿಲ್ಲಾಡಳಿತ ಮುಂದಾಗಿದೆ.  ಸೆ.29ರಿಂದ ಅಕ್ಟೋಬರ್ 10ರವರಗೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಹೆಲಿಪ್ಯಾಡ್ ಸಮೀಪದ ಮೂಡ ಮೈದಾದಲ್ಲಿ ದಸರಾ ಆಹಾರ ಮೇಳ ನಡೆಯಲಿದೆ.

ಸ್ಥಳೀಯ ಆಹಾರಗಳೊಂದಿಗೆ ಈ ಬಾರಿ ವಿದೇಶಿ ತಿನಿಸುಗಳನ್ನು ಸಹ ಆಹಾರ ಪ್ರಿಯರು ಸೇವಿಸಬಹುದಾಗಿದೆ.  ಉತ್ತರ ಮತ್ತು ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ, ಟಿಬೇಟಿಯನ್ ಸೇರಿದಂತೆ ರಾಜಸ್ಥಾನ, ಗುಜರಾತಿ, ಹೈದರಾಬಾದ್, ಕೇರಳ, ತಮಿಳುನಾಡು, ಅಸ್ಸಾಂ, ಪಂಜಾಬ್, ಕಾಶ್ಮೀರ ರಾಜ್ಯಗಳ ಖಾದ್ಯಗಳೊಂದಿಗೆ ಈ ಬಾರಿ ವಿಶೇಷವಾಗಿ ಇಟಾಲಿಯನ್, ಫ್ರೆಂಚ್, ಮೆಕ್ಸಿಕನ್ ಹಾಗೂ ಚೈನಿಸ್ ತಿನಿಸುಗಳು ದೊರೆಯಲಿವೆ.

ಎಲ್ಲದರೊಂದಿಗೆ ಮೈಸೂರಿನ ಸಂಸ್ಕøತಿ ಬಿಂಬಿಸುವ ವಸ್ತುಗಳಾದ ಮೈಸೂರು ಪಾಕ್, ಮೈಸೂರು ವಿಳ್ಯೆದೆಲೆ, ನಂಜನಗೂಡು, ರಸಬಾಳೆ ಇವುಗಳನ್ನು ಸಹ ಈ ಬಾರಿ ದಸರಾ ಆಹಾರ ಮೇಳದಲ್ಲಿ ಸಿಗಲಿದೆ. ಇದಲ್ಲದೆ ಬುಡಕಟ್ಟು ನಾಗರಿಕರು ಬಳಸುವ ಬೊಂಬು ಬಿರಿಯಾನಿ ಸಹ ಆಹಾರ ಮೇಳದ ಹೈಲೆಟ್ ಆಗಲಿದೆ. ಸಾವಯವ ಕೃಷಿ ಪದ್ದತಿಯಿಂದ ಬೆಳೆದಿರುವ ಹಸಿರು ಆಹಾರ ಖಾದ್ಯಗಳು ಸಿರಿಧಾನ್ಯದ ವಿವಿಧ ಬಗೆಯ ತಿನಿಸನ್ನು ಮಾರಾಟ ಮಾಡಲಾಗುತ್ತಿದೆ.

Facebook Comments