ಡಿಸೆಂಬರ್ 10 ರಿಂದ 12 ರವರೆಗೆ ದತ್ತಮಾಲಾ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

ಡಿಸೆಂಬರ್ 10 ರಿಂದ 12 ರವರೆಗೆ ನಡೆಯಲಿರುವ ದತ್ತಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಯೋಜಿಸಿರುವ ದತ್ತಮಾಲಾ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ನೂರಾರು ದತ್ತಭಕ್ತರು ದತ್ತಮಾಲೆ ಧರಿಸಿದರು.

12 ದಿನಗಳ ಕಾಲ ವೃತ ಆಚರಣೆ ಮಾಡಿ ಡಿಸೆಂಬರ್ 12 ರಂದು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನದೊಂದಿಗೆ ದತ್ತಮಾಲಾ ಅಭಿಯಾನ ಮುಕ್ತಾಯಗೊಳ್ಳಲಿದೆ. ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಶಿವಶಂಕರ್ ಹಾಗೂ ಭಜರಂಗದಳದ ರಘು ಸಕಲೇಶಪುರ ಈ ಸಂದರ್ಭದಲ್ಲಿ ಮಾತನಾಡಿ, ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ, ದತ್ತ ಗುಹೆಯ ಆವರಣದಲ್ಲಿರುವ ಗೋರಿಗಳ ಸ್ಥಳಾಂತರ, ಪ್ರಮುಖ ಬೇಡಿಕೆಯಾಗಿದ್ದು ಹಿಂದೂಗಳ ಭಾವನೆಗೆ ಬೆಲೆ ಕೊಟ್ಟು, ಧಾರ್ಮಿಕ ದತ್ತಿ ಇಲಾಖೆಯ ದಾಖಲೆಗಳ ಪ್ರಕಾರ ದತ್ತಪೀಠ ಹಿಂದೂಗಳಿಗೆ ಬಿಟ್ಟುಕೊಡಬೇಕೆಂದು ಒತ್ತಾಯಿಸಿದರು.

ಕಾಮಧೇನು ಗಣಪತಿ ದೇವಸ್ಥಾನದ ಅರ್ಚಕ ರಘು ಅವಧಾನಿ ದತ್ತಭಕ್ತರಿಗೆ ದತ್ತಮಾಲಾಧಾರಣೆ ಮಾಡಿಸಿದರು. ದೇವಸ್ಥಾನದ ಆಡಳಿತಾಧಿಕಾರಿ ಎಂ.ಎಸ್. ನಂಜುಂಡಸ್ವಾಮಿ, ಭಜರಂಗದಳದ ಪ್ರಮುಖ ಯೋಗೀಶ್ ರಾಜ್ ಅರಸ್, ಮೊದಲಾದವರು ಉಪಸ್ಥಿತರಿದ್ದರು.

Facebook Comments

Sri Raghav

Admin