ಹೇಳದೆ-ಕೇಳದೆ ಮದುವೆಯಾದ ಮಗಳು, ಸಂಪ್‍ಗೆ ಬಿದ್ದು ಅಪ್ಪ-ಅಮ್ಮ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.28- ಮಗಳ ವಿವಾಹದಿಂದ ಮನನೊಂದು ದಂಪತಿ ನೀರಿನ ಸಂಪ್‍ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾದ ನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಾರೋಕ್ಯಾತನಹಳ್ಳಿ ನಿವಾಸಿ ಶಿವಲಿಂಗಸ್ವಾಮಿ (51), ಚಂದ್ರಕಲಾ (46) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ. ಶಿವಲಿಂಗಸ್ವಾಮಿ ಅವರು ಗಾರ್ಮೆಂಟ್ಸ್ ವೊಂದರಲ್ಲಿ ಸೂಪರ್‍ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಗೃಹಿಣಿ.

ಈ ದಂಪತಿಯ ಪುತ್ರಿ ಇತ್ತೀಚೆಗೆ ಯುವಕನೊಬ್ಬನೊಂದಿಗೆ ವಿವಾಹ ಮಾಡಿಕೊಂಡಿದ್ದು, ಇದು ದಂಪತಿಗೆ ಇಷ್ಟವಾಗಿರಲಿಲ್ಲ. ಆದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಬೆಳಗ್ಗೆ ಇವರ ಮನೆಯಲ್ಲಿ ಯಾರೂ ಓಡಾಡುವುದು ಕಾಣಿಸದ
ಕಾರಣ ಅಕ್ಕಪಕ್ಕದವರು ಬಂದು ನೋಡಿದ್ದಾರೆ. ಮನೆಯ ಸಂಪ್ ಮುಚ್ಚಳ ತೆರೆದಿರುವುದನ್ನು ಕಂಡು ಅಲ್ಲಿ ನೋಡಿದಾಗ ದಂಪತಿ ಶವ ನೀರಿನಲ್ಲಿ ಕಂಡುಬಂದಿದೆ.

ತಕ್ಷಣ ಅಕ್ಕಪಕ್ಕದ ನಿವಾಸಿಗಳು ಮಾದನಾಯಕನಹಳ್ಳಿ ಠಾಣೆ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿ ಸಂಪ್‍ನಲ್ಲಿದ್ದ ಮೃತ ದೇಹಗಳನ್ನು ತೆಗೆದು ನೆಲಮಂಗಲ ಆಸ್ಪತ್ರೆಗೆ ರವಾನಿಸಿದ್ದಾರೆ.

ಪೊಲೀಸರು ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಡೆತ್‍ನೋಟ್ ಪತ್ತೆಯಾಗಿದೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ದಂಪತಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin