ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಮಗಳನ್ನು ಕೊಂದ ತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಜೂ.30- ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾದ ಹಿನ್ನೆಲೆಯಲ್ಲಿ ಹೆತ್ತ ತಾಯಿ ಮತ್ತು ಸಂಬಂಧಿಕರೊಂದಿಗೆ ಸೇರಿ ಮಗಳನ್ನು ಕೊಲೆ ಮಾಡಿ ಆಂಧ್ರ ಪ್ರದೇಶದ ಹಿಂದೂಪುರ ತಾಲೂಕಿನ ತೂಮಕುಂಟೆ ಗ್ರಾಮದಲ್ಲಿ ನಡೆದಿದೆ. ಸಂಧ್ಯಾ(17) ಮರ್ಯಾದೆ ಹತ್ಯೆಗೆ ಬಲಿಯಾದ ದುರ್ದೈವಿ.

ಮೃತ ತಾಯಿ ರಾಮಾಂಜಿನಮ್ಮ, ಅಕ್ಕ ನೇತ್ರಾವತಿ, ಭಾವ ಬಾಲು, ಅಣ್ಣ ಆಶೋಕ ಕೊಲೆ ಮಾಡಿರುವ ಆರೋಪಿಗಳು. ಬೇರೆ ಜಾತಿ ಯುವಕನನ್ನು ಪ್ರೀತಿಸಿ ಮದುವೆಯಾದಳು ಎಂಬ ದ್ವೇಷದ ಹಿನ್ನೆಲೆಯಲ್ಲಿ ಸಂಧ್ಯಾಳನ್ನು ಕೊಲೆ ಮಾಡಿ ಮೃತ ದೇಹಕ್ಕೆ ಸೈಜು ಕಲ್ಲು ಕಟ್ಟಿ ತಾಲೂಕಿನ ನಗರಗೆರೆ ಹೋಬಳಿಯ ಹುಲಿಕುಂಟೆ ಗ್ರಾಮದ ಹೊರವಲಯದ ಕುಂಟೆಯೊಂದರಲ್ಲಿ ಬಿಸಾಡಿದ್ದು, ಕಳೆದ ಮೂರು ದಿನಗಳ ಹಿಂದೆ ಪತ್ತೆಯಾಗಿತ್ತು.

ಮೃತ ಯುವತಿಯ ತಾಯಿ ರಾಮಾಂಜಿನಮ್ಮನ ತವರು ಮನೆ ತಾಲೂಕಿನ ನಗರಗೆರೆ ಹೋಬಳಿಯ ಹುಲಿಕುಂಟೆ ಗ್ರಾಮವಾಗಿದ್ದು , ಈಕೆಯನ್ನು ಆಂಧ್ರದ ತೂಮಕುಂಟೆಗೆ ಮದುವೆ ಮಾಡಿಕೊಟ್ಟಿದ್ದು, ಮೃತ ಯುವತಿ ಸಂಧ್ಯಾ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಆತನೊಂದಿಗೆ ಓಡಿಹೋಗಿದ್ದು, ರಾಮಾಂಜಿನಮ್ಮ ಆಂಧ್ರದ ಹಿಂದೂಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಳು.

ಪೊಲೀಸರು ಇಬ್ಬರನ್ನೂ ಪತ್ತೆ ಹಚ್ಚಿ ಹುಡುಗಿ ಇನ್ನೂ ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಸ್ಕೋ ಕಾಯ್ದೆ ಪ್ರಕರಣದಡಿ ಯುವಕನನ್ನು ಜೈಲಿಗಟ್ಟಿದ್ದರು. ಸಂಧ್ಯಾಳನ್ನು ಮನೆಗೆ ಕರೆದುಕೊಂಡು ಬಂದು ತಾಯಿ ರಾಮಾಂಜಿನಮ್ಮ ನಮ್ಮ ವಂಶದ ಮಾನ-ಮರ್ಯಾದೆಯನ್ನು ಕಳೆದೆಯಲ್ಲ ಎಂದು ಸಂಧ್ಯಾಳ ಕತ್ತು ಹಿಸುಕಿ ಕೊಲೆ ಮಾಡಿ ಸಂಬಂಧಿಕರ ಸಹಕಾರದಿಂದ ಮೃತ ದೇಹಕ್ಕೆ ಸೈಜು ಕಲ್ಲು ಕಟ್ಟಿ ತಾಲೂಕಿನ ತೂಮಕುಂಟೆ ಗ್ರಾಮ ಕುಂಟೆಯಲ್ಲಿ ಬಿಸಾಡಿರುವುದಾಗಿ ತನಿಖೆಯಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಪ್ರಕರಣ ದಾಖಲು: ವೃತ್ತ ನಿರೀಕ್ಷಕ ಎಸ್.ರವಿ ಮತ್ತು ಗ್ರಾಮಾಂತರ ಠಾಣೆಯ ಎಸ್‍ಐ ಮೋಹನ್ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು , ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಗ್ರಾಮಾಂತರ ಠಾಣೆ ಎಸ್‍ಐ ಮೋಹನ್ ತಿಳಿಸಿದ್ದಾರೆ.

Facebook Comments