ಮಗಳ ಮೇಲೆ ಅತ್ಯಾಚಾರ, ಪಾಪಿ ತಂದೆ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.29- ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿರುವ ವಿಲಕ್ಷಣ ಘಟನೆ ನಗರದಲ್ಲಿ ನಡೆದಿದೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗಳ ದೂರಿನ ಮೇರೆಗೆ ಆರೋಪಿ ರಾಕೇಶ್(41)ನನ್ನು ಬಂಧಿಸಲಾಗಿದೆ.

ರಾಕೇಶ್‍ಗೆ ಇಬ್ಬರು ಪತ್ನಿಯರಿದ್ದು, ಅತ್ಯಾಚಾರದ ದೂರು ನೀಡಿರುವ 19 ವರ್ಷದ ಯುವತಿ ಮೊದಲ ಪತ್ನಿಯ ಮಗಳು. ಮೊದಲ ಪತ್ನಿ ಮತ್ತು ಆಕೆ ಮಗಳು ಬೇರೆ ವಾಸ ಮಾಡುತ್ತಿದ್ದು, ಕಳೆದ ಒಂದು ತಿಂಗಳ ಹಿಂದೆ ರಾಕೇಶ್ ಮನೆಗೆ ಮಗಳು ಬಂದಿದ್ದಳು. ಮೂರು ದಿನಗಳ ಹಿಂದೆ ಆಕೆಗೆ ಕೆಮ್ಮು, ನೆಗಡಿ ಕಾಣಿಸಿಕೊಂಡಿತ್ತು.

ಅದಕ್ಕಾಗಿ ರಾಕೇಶ್ ಯಾವುದೋ ಮಾತ್ರೆ ಕೊಟ್ಟು ಅದನ್ನು ನುಂಗಿದ ನಂತರ ನಿದ್ದೆಗೆ ಜಾರಿದ್ದೆ. ಬೆಳಗ್ಗೆ ಎದ್ದು ನೋಡಿದಾಗ ತಂದೆಯೇ ನನ್ನ ಮೇಲೆ ಅತ್ಯಾಚಾರ ಮಾಡಿದ್ದು ಗೊತ್ತಾಯಿತು ಎಂದು ಯುವತಿ ದೂರು ನೀಡಿದ್ದಾಳೆ.

ಅತ್ಯಾಚಾರ ನಡೆದ ಬಗ್ಗೆ ಮನೆಯಲ್ಲಿದ್ದ ಮಲತಾಯಿ ಬಳಿ ಹೇಳಿಕೊಂಡರೂ ಆಕೆ ಸ್ಪಂದಿಸಲಿಲ್ಲ. ನಂತರ ಸ್ನೇಹಿತೆ ಬಳಿ ಹೇಳಿದಾಗ ಆಕೆ ಸಲಹೆ ಮೇರೆಗೆ ದೂರು ನೀಡಿದ್ದಾಗಿ ಯುವತಿ ತಿಳಿಸಿದ್ದಾಳೆ. ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Facebook Comments