ಕೋವಿಡ್ ಕೇರ್ ಸೆಂಟರ್ ಗೋಳು-ಕೇಳುವವರಾರು..?

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ ಸೆ.12- ಕೆಮ್ಮು-ಜ್ವರ ಅಂಥ ಆಸ್ಪತ್ರೆಗೆ ಪರೀಕ್ಷೆ ಮಾಡಿಸಲು ಬಂದ್ವೀ. ನಮ್ಮನ್ನು ಕೋವಿಡ್ ಪಾಸಿಟಿವ್ ಅಂಥ ದಾಖಲಿಸಿ ಕ್ವಾರಂಟೈನ್ ಕೇಂದ್ರಕ್ಕೆ ತಂದು ದಾಖಲಿಸಿದ್ದಾರೆ. ಆದರೆ ಇಲ್ಲಿ ಅವ್ಯವಸ್ಥೆ ಕಂಡು ಮನೆಯಲ್ಲೇ ಕ್ವಾರಂಟೈನ್ ಆಗಿದ್ದರೆ ಚೆನ್ನಾಗಿತ್ತು ಎನ್ನಿಸುತ್ತೆ.

ಇಲ್ಲಿ ರೋಗಿಗಳು, ಸ್ವಚ್ಛತೆ ಕೆಲಸಗಾರರು ನಾವೇ ಇಲ್ಲಿನ ಪಾಡು ಹೇಳತೀರದು ಎಂದು ಕೊರೊನಾ ಪಾಸಿಟಿವ್ ಬಂದ ಸಂತ್ರಸ್ತರ ರೋಗಿಗಳ ಅಳಲು. ಜಿಲ್ಲೆಯ ಜಗಳೂರು ತಾಲ್ಲೂಕಿನ ಮುಗ್ಗಿದ ರಾಗಿಹಳ್ಳಿ ಯ ಮುರಾರ್ಜಿ ವಸತೀ ಶಾಲೆಯ ಕ್ವಾರಂಟೈನ್ ಸಂತ್ರಸ್ತರು ಅಸಹಾಯಕತೆಯ ಇಲ್ಲಿ ನ ಅವ್ಯವಸ್ಥೆ ಯ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇಲ್ಲಿರುವ ಕೇಳ ರೋಗಿಗಳಿಗೆ ಬಿ ಪಿ ಷುಗರ್ ಇದೆ ಆದರೇ ನುಂಗಲು ಗುಳಿಗೆಗಳು ಇಲ್ಲ. ಕಾರಣ ಕೇಳಿದರೆ ನೀವೆ ತರಿಸಿಕೊಂಡು ನುಂಗಿ ಎಂಬ ಸಬೂಬು. ಇಲ್ಲಿನ ಸೇವಾನಿರತ ಡಾಕ್ಟರ್ ಗಳು ನರ್ಸಗಳು ಹೇಳ್ತಾರೆ.

ಇನ್ನೂ ಕುಡಿಯಲು ಬಿಸಿನೀರು ಇಲ್ಲ.ಕುಡಿಯಲು ಕಷಾಯ ಕೊಡೋಲ್ಲ. ಪ್ರೋಟೀನ್ ಅಂಶ ಹೆಚ್ಚುವ ಮೊಟ್ಟೆ ಸಹ ಇಲ್ಲ. ಬರೀ ಚಪಾತಿ ಅನ್ನ ಸಾಂಬರ್ ಬಿಟ್ಟರೆ, ಏನೂ ಕೊಟ್ಟಿಲ್ಲ. ಎಂಬ ಅಳಲು ಕೋವಿಡ್ ಮಹಿಳೆಯೊಬ್ಬರು.

ಕೊಠಡಿಗಳ ಕಸ ಹೊಡೆಯೋದು. ನೆಲ ಒರೆಸೋದು ಕೂಡ ಕೋವಿಡ್ ಪೀಡಿತರೇ ಮಾಡಬೇಕು. ಇಬ್ಬರು ನರ್ಸ. ಸರತಿ ಮೇಲೆ ಡಾಕ್ಟರ್ ಬರುತ್ತಾರೆ. ಯಾವ ಸ್ವಚ್ಛತೆ ಸಿಬ್ಬಂದಿ ಸಹ ಇಲ್ಲಿಲ್ಲ. ಹೀಗಾದರೇ ಹೇಗೆ ಎಂಬ ಪ್ರಶ್ನೆ ಕೆಲವರದ್ದು.

ಸರ್ಕಾರ ವೇನೋ ಇಂಥ ಕೇಂದ್ರ ಗಳನ್ನ ಮಾಡಿದೆ. ಆದರೇ ಜಿಲ್ಲಾ ಆರೋಗ್ಯ ಇಲಾಖೆ. ಜಿಲ್ಲಾಡಳಿತ ಕನಿಷ್ಟ ಪಕ್ಷ ನಮಗೇ ಸೌಲಭ್ಯ ಗಳನ್ನೂ ಒದಗಿಸಿಲ್ಲ ಏನೋ ನಾಲ್ಕು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇದ್ದು ವಿಶ್ರಾಂತ ಪಡೆಯೋಣ ಎಂದು ಬಂದರೇ ಇಲ್ಲಿನ ಅವ್ಯವಸ್ಥೆ. ನಿರ್ಲಕ್ಷ್ಯ ಧೋರಣೆ ಯಿಂದ ಮನೆಯಲ್ಲಿದ್ದೆ ಚಿಕಿತ್ಸೆ ಪಡೆಯಬಹುದಿತ್ತು ಎನ್ನಿಸುತ್ತದೆ.

ನಮ್ಮ ಈ ತೊಂದರೆ ವ್ಯವಸ್ಥೆ ಬಗ್ಗೆ ಕೇಳವವರೇ ಇಲ್ಲ ಯಾರ ಬಳಿ ದೂರಬೇಕೆಂದು ಯಕ್ಷ ಪ್ರಶ್ನೆಯಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಜಗಳೂರಿನ ಸೊಂಕೀತರೊಬ್ಬರು ಬೇಸರ ವ್ಯಕ್ತಪಡಿಸಿದರು.

Facebook Comments