ಬುಲೇರೋ ವಾಹನಗಳಲ್ಲಿ 2,970 ಜಿಲೆಟಿನ್ ಕಡ್ಡಿಗಳು ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಜು.31- ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಸ್ಫೋಟಕಗಳನ್ನು ಪತ್ತೆ ಮಾಡುವಲ್ಲಿ ಪೂರ್ವ ವಲಯ ಐಜಿ ಸ್ಕ್ವಾಡ್ ಯಶಸ್ವಿಯಾಗಿದೆ. ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದ ಬಳಿಯ ಕಲ್ಲಿನ ಕ್ವಾರಿಗಳಲ್ಲಿ ಬಳಸಲು ಅಕ್ರಮವಾಗಿ ಸಾಗಿಸುತ್ತಿದ್ದ ಸ್ಪೋಟಕಗಳಾಗಿವೆ ತಿಳಿದುಬಂದಿದೆ.

ಎರಡು ಬುಲೇರೋ ವಾಹನಗಳಲ್ಲಿ ಬಾಗಲಕೋಟೆಯಿಂದ ದಾವಣಗೆರೆಗೆ ಅಕ್ರಮವಾಗಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ 2,970 ಜಿಲೆಟಿನ್ ಜೆಲ್ ಗಳು, 790 ಎಲೆಕ್ಟ್ರಾನಿಕ್ ಡಿಟೋನೇಟರ್‍ಗಳನ್ನು ಸಾಗಿಸಲಾಗುತ್ತಿತ್ತು. ಐಜಿ ಸ್ಕ್ವಾಡ್‍ನ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರು ಚಾಲಕರು ಸೇರಿದಂತೆ ಸ್ಪೋಟಕಗಳು, ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸ್ಪೋಟಕಗಳ ಕಳುಹಿಸಿಕೊಟ್ಟಿದ್ದ ಮಾಲೀಕರನ್ನು ವಶಕ್ಕೆ ಪಡೆಯಲಾಗಿದೆ.

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಕಷ್ಟು ಬಾರಿ ದಾಳಿ ನಡೆಸಿ, ಸ್ಪೋಟಕಗಳ ವಶಕ್ಕೆ ಪಡೆದರೂ ಸ್ಪೋಟಕಗಳ ಕಳ್ಳ ಸಾಗಾಣಿಕೆ ಮಾತ್ರ ನಿಂತಿಲ್ಲ.

Facebook Comments