ಕುರಿ ಕಳ್ಳನಿಗೆ ಕೊಡಲಿ ಏಟು, ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಸೆ.22-ಕುರಿಯನ್ನು ಕದಿಯಲು ಬಂದ ಕಳ್ಳನಿಗೆ ಕುರಿಗಾಯಿಗಳು ಬೀಸಿದ ಕೊಡಲಿ ಏಟಿನಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹರಿಹರ ತಾಲೂಕಿನ ಮಲೆಬೆನ್ನೂರು ಸಮೀಪದ ಮುಗಿನಗೊಂದಿ ಗ್ರಾಮದಲ್ಲಿ ನಡೆದಿದೆ. ಚಮನ್‍ಸಾಬ್(56) ಮೃತಪಟ್ಟ ಕುರಿ ಕಳ್ಳ.

ಮೇಯಲು ಬಿಟ್ಟಿದ್ದ ಕುರಿಗಳನ್ನು ಕದಿಯಲು ಚಮನ್‍ಸಾಬ್ ಯತ್ನಿಸಿದಾಗ ಇದನ್ನು ಗಮನಿಸಿದ ಗುರಿಗಾಯಿಗಳು ಕೊಡಲಿಯಿಂದ ಆತನ ಕಡೆ ಬೀಸಿದ್ದಾರೆ. ಕೊಡಲಿ ಚಮನಾಸಾಬ್ ತಲೆಗೆ ಬಿದ್ದು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಸ್ಥಳಕ್ಕೆ ಮಲೆಬೆನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಮನ್‍ಸಾಬ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಮಾಡಿದ್ದ ಎನ್ನಲಾಗಿದೆ.

Facebook Comments