ಭಸ್ಮವಾಯ್ತು ಭಕ್ತರು ನೀಡಿದ ಕಾಣಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಫೆ.24- ಕಾಣಿಕೆ ಹುಂಡಿಗೆ ಬೆಂಕಿ ಬಿದ್ದು ಅರದಲ್ಲಿದ್ದ ಲಕ್ಷಾಂತರ ಬೆಲೆಯ ನೋಟುಗಳು ಸುಟ್ಟು ಕರಕಲಾಗಿರುವ ಘಟನೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ದರ್ಗಾದಲ್ಲಿ ಸಂಭವಿಸಿದೆ. 2000, 500, 200, 100 ಸೇರಿದಂತೆ ನೂರಾರು ನೋಟುಗಳು ಸುಟ್ಟಿವೆ. ಹುಂಡಿಯಿಂದ ಬೆಂಕಿ ಬರುತ್ತಿರುವುದನ್ನು ಗಮನಿಸಿದ ದರ್ಗಾದ ಸಿಬ್ಬಂದಿ, ಭಕ್ತರು ನೀರು ಹಾಕಿ, ಬೆಂಕಿಯನ್ನು ನಂದಿಸಿದ್ದಾರೆ. ತಕ್ಷಣವೇ ವಕ್ಫ್ ಮಂಡಳಿ ಹಾಗೂ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ.

ಅಧಿಕಾರಿಗಳು ಹುಂಡಿಗೆ ಬೆಂಕಿ ಬಿದ್ದು ಅರೆಬರೆ ಸುಟ್ಟಿದ್ದ ನೋಟುಗಳನ್ನು ದರ್ಗಾ ಸಿಬ್ಬಂದಿ ಜೊತೆಗೂಡಿ ಬೇರ್ಪಡಿಸಿ ಎಣಿಕೆ ಮಾಡುತ್ತಿದ್ದಾರೆ. ಸದ್ಯಕ್ಕೆ ಸುಟ್ಟು ಕರಕಲಾದ ನೋಟುಗಳು, ಅರೆಬರೆ ಸುಟ್ಟ ನೋಟುಗಳನ್ನು, ನೀರಿನಿಂದಾಗಿ ತೊಯ್ದ ನೋಟುಗಳನ್ನು ಬೇರ್ಪಡಿಸಿ, ಎಣಿಕೆ ಮಾಡುವ ಕಾರ್ಯ ಸಾಗಿದೆ.

ಈ ಸಂಬಂಧ ಸಿಸಿ ಕ್ಯಾಮೆರಾ ಪರಿಶೀಲಿಸಿರುವ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ತಹಶೀಲ್ದಾರ್ ಬಿ.ಎನ್. ಗಿರೀಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

Facebook Comments