ವಿಕಾಸ್ ದುಬೆ ಗ್ಯಾಂಗ್‍ನ ಮತ್ತಿಬ್ಬರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಕಾನ್ಪುರ, ಜು.11- ಪಾತಕಿ ವಿಕಾಸ್ ದುಬೆ ಗ್ಯಾಂಗ್‍ನ ಮತ್ತಿಬ್ಬರನ್ನು ಗ್ವಾಲಿಯರ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಓಂ ಪ್ರಕಾಶ್ ಪಾಂಡೆ ಮತ್ತು ಅನಿಲ್ ಪಾಂಡೆ ಎಂದು ಗುರುತಿಸಲಾಗಿದೆ.

ಉತ್ತರ ಪ್ರದೇಶದ ಬಿಕ್ರೂ ಗ್ರಾಮದಲ್ಲಿ ನಡೆದ ಎಂಟು ಮಂದಿ ಪೊಲೀಸರ ಹತ್ಯೆ ನಡೆಸಿದ ಪಾತಕಿ ವಿಕಾಸ್ ದುಬೆ ಗ್ಯಾಂಗ್‍ಗೆ ಆಶ್ರಯ ನೀಡಿದ ಆರೋಪದಡಿ ಈ ಇಬ್ಬರನ್ನು ಬಂಧಿಸಲಾಗಿದೆ.

ಪೊಲೀಸರ ಹತ್ಯಾಕಾಂಡ ನಡೆಸಿ ಒಂದು ಅಡಗು ತಾಣದಿಂದ ಮತ್ತೊಂದು ತಾಣಕ್ಕೆ ಸ್ಥಳಾಂತರಗೊಳ್ಳುವ ಬದಲು ದುಬೆ ಗ್ಯಾಂಗ್‍ಗೆ ಈ ಇಬ್ಬರು ನಾಲ್ಕು ದಿನಗಳ ಕಾಲ ಆಶ್ರಯ ನೀಡಿದ್ದರು ಎನ್ನಲಾಗಿದೆ.

ಪೊಲೀಸರ ಹತ್ಯಾಕಾಂಡ ನಡೆಸಿದ ಪಾತಕಿ ವಿಕಾಸ್ ದುಬೆಯನ್ನು ಎನ್‍ಕೌಂಟರ್‍ನಲ್ಲಿ ಹತ್ಯೆ ಮಾಡಲಾಗಿದ್ದು, ಆತನ ಸಹಚರರ ಬಂಧನಕ್ಕೆ ಗ್ವಾಲಿಯರ್ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಇದುವರೆಗೂ ಏಳು ಮಂದಿ ದುಬೆ ಸಹಚರರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ.

Facebook Comments

Sri Raghav

Admin