ಸಿದ್ದರಾಮಯ್ಯಗೆ ಡಿಸಿಎಂ ಅಶ್ವಥ್ ನಾರಾಯಣ್ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಅ. 20 : ಅವರು ಯಾವ ರೀತಿಯ ದೇಶ ಭಕ್ತರು ಅಂತಾ ಗೊತ್ತಿದೆ,  ಆದರೆ ಅಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಅವಹೇಳನ ಮಾಡೋದು ಯಾರಿಗೂ ಗೌರವ ಸಲ್ಲಲ್ಲ
ಸಿದ್ದರಾಮಯ್ಯನವರು ಈ ರೀತಿ ಮಾತನಾಡೋದು ಅವರ ಸ್ಥಾನಕ್ಕೂ ಗೌರವ ಸಲ್ಲಲ್ಲ ,  ಜನ ಈಗಾಗಲೇ ಅವರಿಗೆ ಪಾಠ ಕಲಿಸಿದ್ದಾರೆ ಕಣ್ಣಿಗೆ ಕಾಣದ ರೀತಿ ಆಗುವ ಮುನ್ನ ಸಿದ್ದರಾಮಯ್ಯ ಅರ್ಥ ಮಾಡ್ಕೊಂಡ್ರೆ ಒಳ್ಳೆಯದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಸಾವರ್ಕರ್ ಗೆ ಭಾರತ ರತ್ನ ಕೊಡುವ ವಿಚಾರದಲ್ಲಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.

ಮಾಗಡಿಯ ಕೆಂಪಾಪುರದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ಟಾಂಗ್ ಕೊಟ್ಟ ಡಿಸಿಎಂ, ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜ್ ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಆದ ವಿಚಾರಕ್ಕೆ ಟಾಂಗ್ , ನಮಗೆ ಅಧಿಕಾರ ಇದೇ ಅಂತಾ ಏನೆನೋ ಮಾಡೋಕಾಗಲ್ಲ, ಶಕ್ತಿ ಇದೇ ಅಂತಾ ಎಲ್ಲವನ್ನೂ ನಮ್ಮ ಮನೆಗೆ ಎತ್ಕೊಂಡ್ ಹೋಗೋಕಾಗುತ್ತೇನ್ರಿ, ಅಧಿಕಾರ ಯಾವುತ್ತು ಬಳಕೆಯಾಗಬೇಕು, ದುರ್ಬಳಕೆ ಆಗಬಾರದು
ರಾಮನಗರದಲ್ಲಿ ಅವರು ಏನು ಮಾಡಿಲ್ಲ, ಅದನ್ನ ನಾವು ಮಾಡ್ತೀವಿ ಎಂದರು.

ಮಾಗಡಿಯ ಕೆಂಪಾಪುರದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗೆ ಟಾಂಗ್ ಕೊಟ್ಟ ಅಶ್ವಥ್ ನಾರಾಯಣ್, ರಾಮನಗರ ಜಿಲ್ಲೆ ನನ್ನ ಜಿಲ್ಲೆ, ಭಾವನಾತ್ಮಕವಾಗಿ ನನಗೆ ಸಂಬಂಧವಿದೆ, ನಾನು ಹೊರಗಿನಿಂದ ಬಂದವನಲ್ಲ, ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲು ಬಂದವರಲ್ಲ ನಾವು, ಜಿಲ್ಲೆಯ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ, ಜಿಲ್ಲೆಯಲ್ಲಿ ಸದ್ಯದರಲ್ಲೇ ನನ್ನ ಕಚೇರಿ ಪ್ರಾರಂಭವಾಗಲಿದೆ.

ತಾಲೂಕಿನ ಕೆಂಪಾಪುರ ಗ್ರಾಮದಲ್ಲಿರುವ ಮಾಗಡಿ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಹೇಳಿಕೆ, ಇಲ್ಲಿಯವರೆಗೂ ಅಧಿಕಾರ ನಡೆಸಿದ ಸರ್ಕಾರಗಳು ಯಾವುದೇ ಪ್ಯ್ಲಾನ್ ಮಾಡಿಲ್ಲ
ಇವತ್ತು ನಾವು ಕೆಂಪೇಗೌಡರ ಸಮಾಧಿ ಸ್ಥಳದ ಅಭಿವೃದ್ಧಿಗೆ ನೀಲಿ ನಕ್ಷೆ ತಯಾರಾಗುತ್ತಿದೆ,  ಐಡೆಕ್ ಹೆಸರಿನ ಸಂಸ್ಥೆಗೆ ಈ ಯೋಜನೆಯನ್ನ ಒಪ್ಪಿಸಲಾಗುತ್ತೆ, ಇದಕ್ಕಾಗಿ 150 ಕೋಟಿ ಹಣ ಕೂಡ ಮಂಜೂರಾಗಿದೆ, ಇಡೀ ನಾಡೇ ನೋಡುವ ರೀತಿ ನಾವು ಕೆಲಸ ಮಾಡ್ತೇವೆ , ಮಾಗಡಿಯ ಕೆಂಪಾಪುರದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ.

Facebook Comments

Sri Raghav

Admin