ಕೊರೊನಾದಿಂದ ಪಾರಾಗುವ ಹೊಸ ಉತ್ಪನ್ನಗಳ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.9- ಮಹಾಮಾರಿ ಕೊರೊನಾ ನಡುವೆಯೂ ಶಾಲಾ ಕಾಲೇಜುಗಳನ್ನು ಆತಂಕವಿಲ್ಲದೆ ಆರಂಭಿಸಲು, ಜಿಯೋ-ಫೆನ್ಸಿಂಗ್ ಮೂಲಕ ಜನದಟ್ಟಣೆಯನ್ನು ನಿಯಂತ್ರಿಸಲು ಅನುಕೂಲವಾಗುವಂತೆ 22 ನವೀನ ಉತ್ಪನ್ನಗಳನ್ನು ಇಂದು ಲೋಕಾರ್ಪಣೆಗೊಳಿಸ ಲಾಯಿತು.

ರಾಜ್ಯ ಸರ್ಕಾರದ ಐಟಿ ಬಿಟಿ ಇಲಾಖೆಯ ನವೋದ್ಯಮಗಳು ಈ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಿದ್ದು, ಕೆಲವು ಉತ್ಪನ್ನಗಳಿಗೆ ಐಸಿಎಂಆರ್‍ನ ಅಂಗೀಕಾರವೂ ದೊರೆತಿದೆ. ಮಹಾಮಾರಿ ಸೋಂಕಿನ ವಿರುದ್ಧದ ಹೋರಾಟದಲ್ಲಿ ಈ ಉತ್ಪನ್ನಗಳು ಮಹತ್ವದ ಪಾತ್ರ ವಹಿಸಲಿದೆ ಎಂದು ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ನ್ಯೂಕ್ಲಿಯೋಡಿಎP್ಸï ಆರ್‍ಟಿ ಎಂಬ ಉತ್ಪನ್ನ ಕೋವಿಡ್ ಸೋಂಕು ಪತ್ತೆ ಹಚ್ಚಲು ಆರ್‍ಟಿ ಪಿಸಿಆರ್‍ನಲ್ಲಿ ಬಳಸುವ ಆರ್ ಎನ್ ಎ ಐಸೋಲೇಷನ್ ವಿಧಾನವಾಗಿದ್ದು, ಈಗಾಗಲೇ ಚಾಲ್ತಿಯಲ್ಲಿರುವ ವಿಧಾನಗಳಿಗಿಂತ ಸರಳ ಕಡಿಮೆ ವೆಚ್ಚದ್ದೆಂದು ಹೇಳಿದ್ದಾರೆ.

ಕೋವಿಡಿಎಕ್ಸ್ ಎಂಪ್ಲೆP್ಸï 3ಆರ್ ಮತ್ತು 4ಆರ್ ತಂತ್ರಜ್ಞಾನವೂ ವಂಶವಾಹಿನಿಗಳನ್ನು ಬಳಸಿ ಕೋವಿಡ್ ವೈರಸ್ ಪತ್ತೆ ಹಚ್ಚ ಬಹುದಾಗಿದೆ. ಇನ್-ವಿಟ್ರೋ ಆರ್‍ಟಿ ಪಿಸಿಆರ್ ಪರೀಕ್ಷಾ ವಿಧಾನವನ್ನು ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ, ಐಸಿಎಂಆರ್ ಈ ತಂತ್ರಜ್ಞಾನಕ್ಕೆ ಅನುಮೋದನೆ ನೀಡಿದೆ.

ಡಾ.ತಾಪಮಾನ್ ಎಂಬ ಉತ್ಪನ್ನವನ್ನು ಡಾ.ಲತಾ ದಾಮ್ಲೆ ಅಭಿವೃದ್ಧಿ ಪಡಿಸಿದ್ದಾರೆ. ಇದು ಯಾವುದೆ ವಿಕಿರಣಗಳನ್ನು ಹೊರಸೂಸದೆ ದೇಹದ ಉಷ್ಣತೆಯನ್ನು ಅಳೆಯಲಿದೆ. ಎಸ್‍ಎಎಫ್‍ಎಇ ಬಯೋಸೆಕ್ಯುರಿಟಿ ಸಲ್ಯೂಷನ್ಸ್ ಕೋವಿಡ್ ನಿಯಂತ್ರಣ ಮತ್ತು ಪತ್ತೆಯಲ್ಲಿ ನಾನಾ ಬಗೆಯ ಪಾತ್ರಗಳನ್ನು ನಿರ್ವಹಿಸಲಿದೆ.

ಸ್ವಯಂಚಾಲಿತವಾಗಿ ದೇಹದ ಉಷ್ಣತೆ ಮತ್ತು ರಕ್ತದಲ್ಲಿನ ಆಮ್ಲಜನಕವನ್ನು ಅಳೆಯಬಲ್ಲದು. ಸ್ವಯಂಚಾಲಿತ ಹ್ಯಾಂಡ್ ವಾಷ್ ಮಾಡುತ್ತದೆ. ದೇಹವನ್ನು, ಬಟ್ಟೆಗಳನ್ನು ಮತ್ತು ಸಾಮಾನು ಸರಂಜಾಮುಗಳನ್ನು ಸ್ಯಾನಿಟೈಜೆಷನ್ ಮಾಡಿ ಸೋಂಕು ಮುಕ್ತಗೊಳಿಸುತ್ತದೆ. ನಿರ್ದಿಷ್ಟ ದೂರದವರೆಗೂ ಸೋಂಕಿತರನ್ನು ಗುರುತಿಸಲಿದೆ.

ಯುವಿಇಇ ಬೀಮರ್ ಡಿಎನ್‍ಎ ಗುಣಸ್ವಭಾವಗಳನ್ನು ಬದಲಾಯಿಸುವ ಮೂಲಕ ಸೂಕ್ಷ್ಮಾಣುಕ್ರಿಮಿಗಳನ್ನು 30 ಸೆಕೆಂಡುಗಳ ಒಳಗೆ ನಿವಾರಿಸುತ್ತದೆ. ಯುವಿಇಇ ಕನ್ವೇಯರ್ ವಿವಿಧ ಗಾತ್ರಗಳ ವಸ್ತುಗಳ ಮೇಲಿನ ಕ್ರಿಮಿಗಳನ್ನು ನಿವಾರಿಸುತ್ತದೆ. ಈ ಉತ್ಪನ್ನ ದೊಡ್ಡ ವಾಣಿಜ್ಯ ಪ್ರದೇಶಗಳಲ್ಲಿ ಹೆಚ್ಚು ಬಳಕೆಗೆ ಬರಲಿದೆ.

ಕರ್ನಾಟಕ ನವೋದ್ಯಮ ಕೋಶದ ಉತ್ಪನ್ನಗಳಲ್ಲಿ ಪ್ರಮುಖವಾಗಿ ಕ್ವೋಂಚ್ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸಬಹುದಾದರೆ ಈ ಉತ್ಪನ್ನ ಹೆಚ್ಚು ಅನುಕೂಲಕರವಾಗಿದೆ. ಸ್ಮಾರ್ಟ್ ಐಡಿ ಕಾರ್ಡ್ ಹೋಲ್ಡರ್ ವ್ಯಾಪಾರೋದ್ದಿಮೆಗಳು, ಶಾಲಾ -ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪುನಃ ಆರಂಭಿಸಲು ಸಹಕಾರಿಯಾಗಿದೆ. ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದಕ್ಕೆ, ಹಾಜರಾತಿ ನಿರ್ವಹಣೆಗೆ ಬಳಕೆ ಮಾಡಲಾಗುತ್ತದೆ.

ಆಮ್ಯ್‍ಪ್ ವರ್ಕ್ ಉತ್ಪನ್ನ ಆರೋಗ್ಯ ಸೇವಾ ವಲಯದಲ್ಲಿರುವವರು ಒಟ್ಟಿಗೆ ಸೇರಿ ಕೆಲಸ ಮಾಡಲು ಅನುವು ಮಾಡಿಕೊಡಲು ವೇದಿಕೆ ಕಲ್ಪಿಸಲಿದೆ.ರೆಸ್ಪಿರ್ ಏಯ್ಡï ಎಂಬ ಉಪಕರಣವನ್ನು ಉಸಿರಾಟದ ಸಮಸ್ಯೆ ನಿವಾರಣೆಗೆ ಬಳಸಬಹುದು. ಇದು ಸಾಗಾಣಿಕೆಗೆ ಸುಲಭವಾಗಿದ್ದು, ಕಡಿಮೆದರದಲ್ಲಿ ಲಭ್ಯವಿದೆ. ಇಎಂವಿಲಿಯೋ ಇದು ರೆಫ್ರಿಜಿರೇಟರ್ ವ್ಯವಸ್ಥೆಯಾಗಿದ್ದು, ಈಗಾಗಲೇ ಕೆಲವು ಜಿ¯್ಲÁ ಆಸ್ಪತ್ರೆಗಳು ಮತ್ತು ತಮಿಳುನಾಡಿನಲ್ಲಿ ಬಳಕೆಯಾಗುತ್ತಿದೆ.

ಪಿಕ್ಸುಯೇಟ್ ಯಂತ್ರದಿಂದ 3-5 ಮೀಟರ್ ಅಂತರದಿಂದಲೇ ದೇಹದ ಉಷ್ಣತೆಯನ್ನು ಪರೀಕ್ಷಿಸಬಹುದು. ಡಾಕ್ಸ್ ಪರ್ ಬಳಸಿ ರೋಗಿಯ ಕುರಿತ ಮಾಪನದ ಅಂಕಿ-ಅಂಶಗಳನ್ನು ತಕ್ಷಣವೇ ವೈದ್ಯರಿಗೆ ರವಾನಿಸಬಹುದಾಗಿದೆ. ಇದಲ್ಲದೆ ವ್ಯಾಪ್ ಕೇರ್, ನ್ಯೂಬ್ ನೆಟ್ ವರ್ಕ್ ಫಂಕ್ಷನ್ ಗೇಟ್ ವೇ, ಫೇಸ್ ಫೀಲ್ಡ್ ಸೇರಿದಂತೆ ಹಲವಾರು ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.

ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಸಿ ಅಧ್ಯಕ್ಷ ಡಾ.ಇ.ವಿ.ರಮಣ ರೆಡ್ಡಿ, ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಲಹೆಗಾರ್ತಿ ಡಾ.ಅನಿತಾ ಗುಪ್ತಾ, ಬಿಬಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್, ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಸಿ.ಎನ್. ಮತ್ತಿತರರು ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments