‘ಬಿಜೆಪಿಯ ಜನಪರ ಆಡಳಿತ ನೋಡಿ ಕಾಂಗ್ರೆಸ್‍ಗೆ ಚಳಿ-ಜ್ವರ ಬಂದಿದೆ’

ಈ ಸುದ್ದಿಯನ್ನು ಶೇರ್ ಮಾಡಿ

ಮಧುಗಿರಿ,ಅ.17- ಕಳೆದ 73 ವರ್ಷಗಳಿಂದ ಜನರಲ್ಲಿ ಭಯ ಮೂಡಿಸಿಕೊಂಡು ಬಂದಿದ್ದ ಕಾಂಗ್ರೆಸ್‍ಗೆ ಬಿಜೆಪಿ ಜನಪರ ಆಡಳಿತ ನೋಡಿ ಚಳಿ-ಜ್ವರ ಬಂದಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಟಾಂಗ್ ನೀಡಿದ್ದಾರೆ. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದು ಉತ್ತಮ ಆಡಳಿತ ನಡೆಸಿಕೊಂಡು ಬರುತ್ತಿರುವುದನ್ನು ಕಂಡು ವಿರೋಧ ಪಕ್ಷಗಳು ಕಂಗಾಲಾಗಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿರುವ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮನೆಮನೆಗೂ ತೆರಳಿ ತಿಳಿಸಬೇಕಾಗಿರುವ ಕರ್ತವ್ಯ ಪ್ರತಿಯೊಬ್ಬ ಕಾರ್ಯಕರ್ತರಲ್ಲೂ ಇರಬೇಕು ಎಂದರು. ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆ ಬಗ್ಗೆ ವಿರೋಧಪಕ್ಷದವರು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ರೈತರ ಪರವಿರುವ ಈ ಕಾಯ್ದೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದವರು ಬಿಜೆಪಿ ಪಕ್ಷಕ್ಕೆ ಅತ್ಯಧಿಕ ಮತ ನೀಡಿದ್ದರಿಂದಲೇ ತುಮಕೂರು ಲೋಕಸಭೆ ಅಭ್ಯರ್ಥಿ ಆಯ್ಕೆಯಾಗಲು ಸಾದ್ಯವಾಯಿತು. ಎಂದ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳುಹಿಸಿಕೊಡಲು ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಕರೆ ನೀಡಿದರು.

ತಾಲೂಕು ಮಂಡಲ ಅಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ ಮಾತನಾಡಿ, ಜೆ.ಡಿ.ಎಸ್‍ನ ಭದ್ರ ಕೋಟೆ ಕೆ.ಆರ್.ನಗರದಲ್ಲಿ ಕಮಲ ಅರಳಿಸಿದ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್‍ರವರ ನೇತೃತ್ವದಲ್ಲಿ ಶಿರಾ ಉಪಚುನಾವಣೆಯಲ್ಲಿಯೂ ಸಹ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.

ಹಿರಿಯ ಮುಖಂಡರಾದ ನಾಗರಾಜಪ್ಪ, ಉಪಾಧ್ಯಕ್ಷ ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಸೀತಾರಾಂ, ಜಿಲ್ಲಾ ಒಬಿಸಿ ಮಾರ್ಚಾದ ಸುರೇಶ್, ಮಹಿಳಾ ಮೋರ್ಚಾದ ತಾಲೂಕು ಅಧ್ಯಕ್ಷೆ ರತ್ನಮ್ಮ ಕಾರ್ಯದರ್ಶಿಗಳಾದ ಎಂ.ಸಿ.ಶಿವಕುಮಾರ್, ಖಜಾಚಿ ತಿಮ್ಮಣ್ಣ, ಯುವಮೋರ್ಚಾದ ಕಾರ್ತಿಕ್ ಆರಾಧ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

Facebook Comments