ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊರಟಗೆರೆ, ಜು.4- ರಾಜ್ಯದ ಸಮಗ್ರ ಅಭಿವೃದ್ದಿಯಲ್ಲಿ ದೇಶದಲ್ಲಿಯೇ ನಂ.1ಸ್ಥಾನದಲ್ಲಿದೆ. ಶೇ.90ರಷ್ಟು ಕುಟುಂಬ ಬಡತನ ರೇಖೆಗಿಂತ ಕಡಿಮೆ ಇರುವ ಬಗ್ಗೆ ಆಹಾರ ಇಲಾಖೆಯಿಂದ ಅಂಕಿ ಅಂಶ ಲಭ್ಯವಾಗಿದೆ. ಕರ್ನಾಟಕವನ್ನು ಬಡರಾಜ್ಯ ಎಂದು ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ವಿಷಾಧ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಸಮುದಾಯ ಭವನದಲ್ಲಿ ತುಮಕೂರು ಜಿಪಂ ಮತ್ತು ಕೊರಟಗೆರೆ ತಾಪಂ ವತಿಯಿಂದ ಏರ್ಪಡಿಸಲಾಗಿದ್ದ ಸರಕಾರಿ ಇಲಾಖೆಗಳ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಹಾರ ಇಲಾಖೆಯ ಅಂಕಿ ಅಂಶದ ಪ್ರಕಾರ ಕ್ಷೇತ್ರದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಂಖ್ಯೆ 40619 ಮಾತ್ರ. ಅದೇ ಆಹಾರ ಲಾಖೆಯ ಅಂಕಿ ಅಂಶದ ಪ್ರಕಾರ 43485 ಪಡಿತರ ಕಾರ್ಡ್‍ಗಳ ಕುಟುಂಬಗಳಿವೆ.

ಕುಟುಂಬಕ್ಕಿಂತ ಹೆಚ್ಚಾಗಿರುವ 2866ರಷ್ಟು ಪರಿತರ ಕಾರ್ಡ್‍ಗಳು ಅಂಕಿ ಅಂಶದ ಮಾಹಿತಿ ಇನ್ನೂ ಮೂರು ತಿಂಗಳೊಳಗೆ ನನಗೆ ನೀಡಬೇಕು ಎಂದು ಆದೇಶಿಸಿದರು. ಕ್ಷೇತ್ರದಅಭಿವೃದ್ದಿ ಮತ್ತು ಸಾರ್ವಜನಿಕರ ಕೆಲಸದ ವಿಚಾರದಲ್ಲಿ ನೀವು ನಿರ್ಲಕ್ಷ ಮಾಡಬೇಡಿ. ನೀವು ನಿಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡದಿದ್ದರೇ ನಾನು ನನ್ನ ಕೆಲಸ ಮಾಡುತ್ತೇನೆ ಎಂದು ಪರಮೇಶ್ವರ್ ಸೂಚಿಸಿದರು.

ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಮಾತನಾಡಿ, ಕೊರಟಗೆರೆ ಕ್ಷೇತ್ರದ ಅಭಿವೃದ್ದಿ ಕಾಮಗಾರಿಯನ್ನು ನಾನೇ ಖುದ್ದು ಪರಿಶೀಲನೆ ನಡೆಸುತ್ತೇನೆ. ಸಾರ್ವಜನಿಕರು ಮತ್ತು ರೈತರ ಸಮಸ್ಯೆಯನ್ನು ಸ್ಥಳದಲ್ಲಿಯೇ ಸರಿಪಡಿಸುವ ಕೆಲಸ ಮಾಡಬೇಕು. ಲೋಪ ಕಂಡು ಬಂದರೇ ಕ್ರಮ ಕೈಗೊಳ್ಳಲಾಗವುದು ಎಂದರು.

ಸಭೆಯಲ್ಲಿ ಕೃಷಿ, ರೇಷ್ಮೆ, ಬೇಸ್ಕಾಂ, ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ, ಪಶು, ಸಮಾಜಕಲ್ಯಾಣ, ಮೀನುಗಾರಿಕೆ, ಬಿಸಿಎಂ, ಅಕ್ಷರದಾಸೋಹ, ಲೊಕೋಪಯೋಗಿ, ಗ್ರಾಮೀಣಕುಡಿಯುವ ನೀರು, ಕಂದಾಯ, ಸಣ್ಣ ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ದೇವರಾಜುಅರಸು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತರಾಟೆಗೆತೆಗೆದುಕೊಂಡು ಮುಂದಿನ ಸಭೆಗೆ ಆಗಮಿಸುವ ವೇಳೆ ಕಳೆದ ಐದು ವರ್ಷದ ಅಂಕಿ ಅಂಶದ ಸಂಪೂರ್ಣ ಮಾಹಿತಿ ತರಬೇಕು ಎಂದು ಸೂಚನೆ ನೀಡಿದರು.

ಕೆರೆ ಅಭಿವೃದ್ಧಿಗೆ ಮನವಿ:
ಕ್ಷೇತ್ರದ ಅಭಿವೃದ್ದಿಗೆ ಜಿಪಂ ಉಪವಿಭಾಗಕ್ಕೆ ಪ್ರತಿವರ್ಷ ಕೇವಲ 15ಲಕ್ಷ ಅನುದಾನ ಮಾತ್ರ ಬರುತ್ತದೆ. 80ಕೆರೆಗಳ ನಿರ್ಮಾಣ ಆಗಿ 100 ವರ್ಷ ಕಳೆದಿದೆ. ಹಲವು ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ದಿಗೆಅನುದಾ ಬೇಕಾಗಿದೆ. ಸರಕಾರದಿಂದ ಹೆಚ್ಚಿನಅನುದಾನ ಬಿಡುಗಡೆಗೊಳಿಸಿ ಕೆರೆಗಳ ಅಭಿವೃದ್ದಿಗೆ ಅನುಕೂಲ ಕಲ್ಪಿಸಬೇಕು ಎಂದು ಜಿಪಂ ಇಂಜಿನಿಯರ್ ಡಿಸಿಎಂಗೆ ಮನವಿ ಸಲ್ಲಿಸಿದರು.

ನಕಲಿ ವೈದ್ಯರ ವಿರುದ್ದಕ್ರಮ:
ನಕಲಿ ಆಸ್ಪತ್ರೆಯ ವೈದ್ಯರ ವಿರುದ್ದ ನೀವು ತೆಗೆದುಕೊಂಡಿರುವ ಕ್ರಮ ಏನು ? ಎಷ್ಟು ಜನ ಇದ್ದಾರೆ ? ನಕಲಿ ವೈದ್ಯರಿದ್ದಾರೆಯೇ ? ಅವರ ಬಗ್ಗೆ ಮಾಹಿತಿ ಕಳುಹಿಸಿ ಎಂದು ಆರೋಗ್ಯ ಇಲಾಖೆಯ ವಿಜಯಕುಮಾರ್ ವಿರುದ್ದ ಪರಮೇಶ್ವರ್ ಕಿಡಿಕಾರಿದರು.

ಪೊಲೀಸ್ ಅಧೀಕ್ಷಕ ಡಾ.ಕೋನವಂಸಿಕೃಷ್ಣ, ಜಿಪಂ ಮುಖ್ಯಾಧಿಕಾರಿ ಶುಭಕಲ್ಯಾಣ್, ಮಧುಗಿರಿ ಎಸಿ ಚಂದ್ರಶೇಖರ್, ತಾಪಂಅಧ್ಯಕ್ಷ ನಾಜೀಮಾಭೀ, ಉಪಾಧ್ಯಕ್ಷ ವೆಂಕಟಪ್ಪ, ಜಿಪಂ ಸದಸ್ಯರಾದ ಶಿವರಾಮಯ್ಯ, ಪ್ರೇಮಾ, ಅಕ್ಕಮಹಾದೇವಿ, ನಾರಾಯಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ, ತಹಶೀಲ್ದಾರ್ ಶಿವರಾಜು, ಇಓ ಶಿವಪ್ರಕಾಶ್, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿ ವರ್ಗ ಹಾಜರಿದ್ದರು.

Facebook Comments