ಯುಕೆಪಿ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿದ ಡಿಸಿಎಂ ಕಾರಜೋಳ

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ, ಆ.18- ಕೃಷ್ಣ ಮೇಲ್ದಂಡೆ ಯೋಜನೆಯ ಯುನಿಟ್-2 ವ್ಯಾಪ್ತಿಯ ಬಾಡಿಗೆದಾರರು ಹಾಗೂ ಇತರೆ ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನು ಬಾಗಲಕೋಟೆಯಲ್ಲಿಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ವಿತರಿಸಿದರು.

ನಂತರ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗ್ಗಡೆ ಅವರು ಬಾಗಲಕೋಟೆ ನವನಗರವನ್ನು ಚಂಡಿಗಡದ ಮಾದರಿಯಲ್ಲಿ ನಿರ್ಮಿಸುವ ಕನಸು ಹೊಂದಿದ್ದರು. ಬಿಡಿಟಿಎ ಅಧ್ಯಕ್ಷರಾಗಿರುವ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ರಾಮಕೃಷ್ಣ ಹೆಗಡೆ ಅವರ ಕನಸನ್ನು ಸಾಕಾರಗೊಳಿಸಲಿದ್ದಾರೆ.

ಚರಂತಿಮಠ ಅವರು ಯುಕೆಪಿ, ಪುನರ್ವಸತಿ, ಪುನರ್ ನಿರ್ಮಾಣ ಕುರಿತ ಸಮಸ್ಯೆಗಳನ್ನು ಸಮಗ್ರವಾಗಿ ಮಾಹಿತಿ ಹೊಂದಿದ್ದು, ಸುಸಲಿತವಾಗಿ ಸಮಸ್ಯೆ ಪರಿಹರಿಸಲಿದ್ದಾರೆ. ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಿವೇಶನ ಪಡೆದ ಸಂತ್ರಸ್ತರು ನಿವೇಶನಗಳನ್ನು ಮಾರಾಟ ಮಾಡಬಾರದು.  ಯೋಜನಾ ಬದ್ಧವಾಗಿ ನೀಡಿದ ಈ ನಿವೇಶನಗಳು ತಮ್ಮ ಮನೆತನಕ್ಕೆ,  ಮುಂದಿನ ಜನಾಂಗಕ್ಕೆ ಆಸ್ತಿಯಾಗಿ ರೂಪುಗೊಳ್ಳುತ್ತವೆ.

ಈ ನಿವೇಶನಗಳನ್ನು ಮಾರಾಟ ಮಾಡಬಾರದು. ಬಾಗಲಕೋಟೆ ನಗರವು ಮಾದರಿ ನಗರವಾಗಿ ರೂಪಿಸಲು ಎಲ್ಲರೂ ಶ್ರಮಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಯುಕೆಪಿ ಅನುಷ್ಠಾನ ಕ್ಕೆ ಹಿನ್ನಡೆಯಾಗಿದೆ.

ಕೋವಿಡ್ ವೈರಸ್ ಸಮಸ್ಯೆ ಇಲ್ಲದಿದ್ದರೆ ಯುಕೆಪಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡು ಈ ಭಾಗದ ಸ್ವರೂಪವೇ ಬದಲಾಗುತ್ತಿತ್ತು ಎಂದು ಅವರು ತಿಳಿಸಿದರು. ಶಾಸಕ ಡಾ. ವೀರಣ್ಣ ಚರಂತಿಮಠ ಅವರು ಅಧ್ಯಕ್ಷತೆ ವಹಿಸಿ, ತಾವು ಬಿಟಿಡಿಎ ಅಧ್ಯಕ್ಷರಾಗಿ ಅಕಾರ ಸ್ವೀಕರಿಸಿದ ನಂತರ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಸಂಸದ ಪಿ.ಸಿ.ಗದ್ದಿಗೌಡರ್, ಜಿಲ್ಲಾಧಿಕಾರಿ ಡಾ.ಕ್ಯಾಪ್ಟನ್ ರಾಜೇಂದ್ರ, ಬಿಟಿಡಿಎ ಸದಸ್ಯರು, ಅಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin