ಲಾಕ್‍ಡೌನ್‍ನಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತ : ಕಾರಜೋಳ

ಈ ಸುದ್ದಿಯನ್ನು ಶೇರ್ ಮಾಡಿ

ಮಧುಗಿರಿ ,ಜೂ.13- ಲಾಕ್‍ಡೌನ್ ಹಿನ್ನಲೆಯಲ್ಲಿ ಲೋಕೊಪಯೋಗಿ ಇಲಾಖೆಯ ಕಾಮಗಾರಿಗಳು ವೇಗವಾಗಿ ಜರುಗುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಎಂ. ಗೋವಿಂದ ಕಾರಜೋಳ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ವಿಭಾಗೀಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು 20-21ನೇ ಸಾಲಿನ ಬಜೆಟ್ ಮಂಡನೆಯಾಗಿ, ಅದರಲ್ಲಿ ಸೇರ್ಪಡೆಯಾಗಿದ್ದು ಕ್ರಿಯಾ ಯೋಜನೆಗಳು ಅನುಮೋದನೆಗೊಂಡು ಕಾಮಗಾರಿ ಪ್ರಾರಂಭ ಮಾಡುವಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಗಿ ಕಾಮಗಾರಿಗಳು ಸ್ಥಗಿತವಾದವು, ಕೆಲದಿನಗಳ ಮುಂಚೆಯಷ್ಟೇ ಲಾಕ್ ಡೌನ್ ಸಡಿಲಾವಾಗಿದೆ ಈಗ ಕಾಮಗಾರಿಗಳು ಪ್ರಾರಂಭವಾಗುತ್ತಿವೆ ಎಂದರು.

ಮುಂದಿನ ಮಾರ್ಚ್ ಅಂತ್ಯದ ವೇಳೆಗೆ ಬಹುತೇಕ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಹಾಗೂ ಮಧುಗಿರಿ ತಾಲೂಕಿನ ಎಲ್ಲಾ ಕಾಮಗಾರಿಗಳ ಬಾಕಿ ಹಣವನ್ನು ಶೀಘ್ರದಲ್ಲಿಯೇ ಪಾವತಿಸಲಾಗುವುದು ಎಂದು ಹೇಳಿದರು.  ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, 3.5 ರೂ ಕೊಟಿ ವೆಚ್ಚದ ಕಟ್ಟಡವು ಲೋಕಾರ್ಪಣೆಯಾಗಿದ್ದು, ಲೋಕೋಪಯೋಗಿ ಇಲಾಖೆಯ ಎಲ್ಲಾ ಅಧಿಕಾರಿಗಳು ಒಂದೇ ಸೂರಿನಲ್ಲಿ ಲಭ್ಯರಿರುತ್ತಾರೆ, ಸಾರ್ವಜನಿಕರು ಇದರ ಸದುಪಯೋಗವನ್ನು ಪಡಿಸಿಕೊಳ್ಳು ಬೇಕು ಎಂದರು.

ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ ಮಧುಗಿರಿಯು ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿದ್ದು, ಬರ ಪೀಡಿತ ಪ್ರದೇಶವಾಗಿದೆ, ತಾಲೂಕು ಅಭಿವೃದ್ದಿಗೆ ಸರಕಾರದಿಮದ ಹೆಚ್ಚಿನ ಅನುದಾನ ನೀಡುವಂತೆ ಉಪಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.

ಸಂಸದ ಜಿ.ಎಸ್. ಬಸವರಾಜು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಜಿಪಂ ಅಧ್ಯಕ್ಷೆ ಲತಾ, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, , ಲೋಕೊಪಯೋಗಿ ಇಲಾಖೆಯ ಎಸ್‍ಇ ದುರಗಪ್ಪ, ಇಇ ವಿರೂಪಾಕ್ಷಯ್ಯ, ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿ ದೇವಿ, ತಹಶೀಲ್ದಾರ್ ಡಾ.ಜಿ.ವಿಶ್ವನಾಥ್, ಇಒ ದೊಡ್ಡಸಿದ್ದಪ್ಪ, ತಾಪಂ ಅಧ್ಯಕ್ಷೆ ಇಂದಿರಾ, ಎಇಇ ಹೊನ್ನೇಶಪ್ಪ, ಮತ್ತಿತರರಿದ್ದರು.

Facebook Comments