ದಿನಕಳೆದಂತೆ ಬಿಜೆಪಿ ಬಣ್ಣ ಬಯಲಾಗಲಿದೆ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 31-ಭಾರತೀಯ ಜನತಾ ಪಕ್ಷದವರ ಉದ್ದೇಶ ಕೆಲ ದಿನಗಳು ಕಳೆದ ನಂತರ ಜನರಿಗೆ ಅರಿವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನೋಡಿದ್ದೇವೆ. ಅದರ ಪರಿಣಾಮ ಸ್ಥಳೀಯ ಸಂಸ್ಥೆ ಚುನಾವಣೆ ಮೇಲೂ ಆಗಿದೆ. ರಾಜಕಾರಣ ನಿಂತ ನೀರಲ್ಲ. ಬದಲಾವಣೆ ಆಗೇ ಆಗುತ್ತದೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಏಳುಬೀಳು ಸಾಮಾನ್ಯ. ಕೇಂದ್ರದಲ್ಲೂ ಹಾಗೇ ಆಗಿದೆ. 10 ವರ್ಷಗಳ ಕಾಲ ಮನ್‍ಮೋಹನ್‍ಸಿಂಗ್ ಅಧಿಕಾರದಲ್ಲಿದ್ದರು. ಈಗ ಬಿಜೆಪಿ ಬಂದಿರಬಹುದು. ನಾವು ಬೌನ್ಸ್ ಬ್ಯಾಕ್ ಆಗಲಿದ್ದೇವೆ. ನಮ್ಮ ಉದ್ದೇಶ ಒಳ್ಳೆಯದಿದೆ, ನಾವು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದುಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವಿಧಾನ ಸಭಾಧ್ಯಕ್ಷರಾದ ರಮೇಶ್‍ಕುಮಾರ್ ಹಿರಿಯ ನಾಯಕರು ಅವರು ಅನುಭವದ ಆಧಾರದ ಮೇಲೆ ಮಾತನಾಡಿರುತ್ತಾರೆ ಎಂದರು.
ನಕ್ಸಲರ ಚಟುವಟಿಕೆ ಇದೆ. ಜನರ ರಕ್ಷಣೆ ಮುಖ್ಯ. ನ್ಯಾಷನಲ್ ಇಂಟೆಲಿಜೆನ್ಸ್ ತಂಡ ಈ ಬಗ್ಗೆ ಗಮನಹರಿಸಲಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

Facebook Comments

Sri Raghav

Admin