ರೌಡಿಗಳಿಗೆ ಡಿಸಿಪಿ ರಮೇಶ್‍ ಖಡಕ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು. 7- ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಬಾರದು, ರೌಡಿ ಚಟುವಟಿಕೆಗಳನ್ನು ಮಾಡಬಾರದು ಒಂದು ವೇಳೆ ಇದರಲ್ಲಿ ತೊಡಗಿಕೊಂಡರೆ ಕಠಿಣಕ್ರಮ ಕೈಗೊಳ್ಳಲಾವುದು ಎಂದು ಡಿಸಿಪಿ ರಮೇಶ್ ಎಸ್. ರೌಡಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಪ್ರೀಡಂ ಪಾರ್ಕ್‍ನಲ್ಲಿಂದು ನಡೆದ ಪಶ್ಚಿಮ ವಿಭಾಗದ ರೌಡಿ ಪೆರೇಡ್‍ನಲ್ಲಿ ಡಿಸಿಪಿ ಅವರು ಈ ಎಚ್ಚರಿಕೆ ನೀಡಿದರು. ಪಶ್ಚಿಮ ವಿಭಾಗದ ಎಲ್ಲಾ ಠಾಣೆಗಳ ವ್ಯಾಪ್ತಿಯಿಂದ ರೌಡಿಗಳನ್ನು ಇಲ್ಲಿಗೆ ಕರೆ ತಂದು ತಿಳುವಳಿಕೆ ನೀಡಲಾಯಿತು.

ರೌಡಿಗಳ ಮನೆಗಳ ವಿಳಾಸ, ಮೊಬೈಲ್ ಸಂಖ್ಯೆ, ಅವರು ಮಾಡುತ್ತಿರುವ ಉದ್ಯೋಗ ಇತ್ಯಾದಿಗಳ ಬಗ್ಗೆ ಪೊಲೀಸರು ಮಾಹಿತಿಯನ್ನು ಪಡೆದುಕೊಂಡರು.  ಮುಂಜಾನೆ ಐದು ಗಂಟೆಯಿಂದ ಬೆಳಿಗ್ಗೆ 10ಗಂಟೆ ವೇಳೆಗೆ ಪಶ್ಚಿಮ ವಿಭಾಗದ ಎಲ್ಲಾ ರೌಡಿಗಳ ಮನೆ ದಾಳಿ ನಡೆಸಿ ಪೆರೇಡ್ ನಡೆಸಲಾಯಿತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin